ಬೆಂಗಳೂರು: ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು; 3 ಬಂಧನ, 80 ಕೆಜಿ ಗಾಂಜಾ ವಶ!
ಮತ್ತೊಂದು ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ.
Published: 26th February 2022 01:35 AM | Last Updated: 26th February 2022 01:35 AM | A+A A-

ಡ್ರಗ್ಸ್ ವಶ
ಬೆಂಗಳೂರು: ಮತ್ತೊಂದು ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 80 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬಿಸ್ಕೆಟ್ ಹಾಗೂ ನೂಡಲ್ಸ್ ಬಾಕ್ಸ್ ಗಳಲ್ಲಿ ಗಾಂಜಾವನ್ನು ಸಾಗಿಸಲಾಗುತ್ತಿತ್ತು. ಬಂಧಿತರನ್ನು ಶ್ರೀರಾಮಪುರದ ಮುತ್ತುರಾಜ್, ಮುಂಬೈನ ಗೌತಮ್ ಮತ್ತು ತಿರುಪತಿಯ ರಫಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲಿಗೆ ಮುತ್ತುರಾಜ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆತ ಗಾಂಜಾವನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಈ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದು ಅವರನ್ನು 80 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
Another inter-state narcotic drugs smuggling network busted... Mahalaxmi layout police arrested 3 persons and seized 80 kg Ganja hidden in cardboard boxes having labels of biscuits/noodles.@CPBlr @ips_patil @BlrCityPolice pic.twitter.com/KC5sTfUXbA
— Vinayak Patil, IPS (@DCPNorthBCP) February 25, 2022