ವಾರಗಳ ಹಿಂದೆಯೇ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಚು ರೂಪಿಸಲಾಗಿತ್ತು!
ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು ಹಲವು ವಾರಗಳ ಹಿಂತೆಯೇ ಸಂಚು ರೂಪಿಸಿ ಹತ್ಯೆ ನಡೆಸಲಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
Published: 26th February 2022 09:22 AM | Last Updated: 26th February 2022 12:00 PM | A+A A-

ಸಂಗ್ರಹ ಚಿತ್ರ
ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು ಹಲವು ವಾರಗಳ ಹಿಂತೆಯೇ ಸಂಚು ರೂಪಿಸಿ ಹತ್ಯೆ ನಡೆಸಲಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಹರ್ಷ ಮೃದುತ್ವ ಸ್ವಭಾವವನ್ನು ಹೊಂದಿದ್ದು, ಆರೋಪಿಗಳಿರುವ ಸ್ಥಳಗಳ ಹತ್ತಿರದಲ್ಲಿಯೇ ನೆಲೆಸಿದ್ದರಿಂದ ಸುಲಭವಾಗಿ ಹತ್ಯೆ ಮಾಡಬಹುದು ಎಂದು ಆರೋಪಿಗಳು ತಿಳಿದಿದ್ದರು ಎಂದು ಮೂಲಗಳು ತಿಳಿಸಿವೆ.
ಹರ್ಷ ಹತ್ಯೆಗೆ 10-15 ದಿನಗಳ ಹಿಂದೆಯೇ ಹಂತಕರು ಸಂಚು ರೂಪಿಸಿದ್ದು, ಅಂತಿಮವಾಗಿ ಫೆಬ್ರವರಿ 20 ರಂದು ಹತ್ಯೆ ಮಾಡಿದ್ದರು. ಹತ್ಯೆಗೆ ಸಂಚು ರೂಪಿಸಿದ್ದ ಹಂತಕರು ಪ್ರತೀನಿತ್ಯ ಹರ್ಷ ಅವರ ಚಲನವಲನಗಳ ಮೇಲೆ ಕಣ್ಗಾವಲಿರಿಸಿದ್ದರು. ಫೆ.20ರಂದು ಶಿವಮೊಗ್ಗದ ಕಾಮತ್ ಪೆಟ್ರೋಲ್ ಬಂಕ್ ಗಳಿ ಮಾರಾಕಾಸ್ತ್ರಗಳಿಂದ ಹರ್ಷ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಈ ವರೆಗೂ 10 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಹರ್ಷ ಮತ್ತು ಅವರನ್ನು ಹತ್ಯೆ ಮಾಡಿರುವ ಹಂತಕರು ಈ ಹಿಂದೆ ಕೋಮುಗಲಭೆಯಲ್ಲಿ ತೊಡಗಿದ್ದರ ಕುರಿತು ಪೊಲೀಸರ ಬಳಿ ದಾಖಲೆಗಳಿದ್ದು, ಇದೀಗ ಹರ್ಷ ಅವರ ಹತ್ಯೆಯು ಹಿಜಾಬ್ ವಿವಾದಕ್ಕೆ ಸಂಬಂಧಿಸಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆಂದು ತಿಳಿದುಬಂದಿದೆ.
ಫೆಬ್ರವರಿ 21 ರಂದು ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಆದೇಶದ ಹೊರತಾಗಿಯೂ, ಆರ್‌ಡಿಪಿಆರ್ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು, ಹರ್ಷ ಅವರ ಅಂತ್ಯಕ್ರಿಯೆಯ ನೇತೃತ್ವವನ್ನು ವಹಿಸಿದ್ದು, ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು. ಎಲ್ಲಿ ಪೊಲೀಸರ ಕಣ್ಣಿಗೆ ಬೀಳುತ್ತೇವೆಂಬ ಭಯದಿಂದ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಸ್ಥಳೀಯರು ಭಾಗಿಯಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.
ಗುಣಮಟ್ಟದ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಲಭ್ಯತೆಯ ಕೊರತೆಯಿಂದಾಗಿ ಶಿವಮೊಗ್ಗದ ಬಹುತೇಕ ಯುವಕರು ಕೋಮುವಾದ ಮತ್ತು ದ್ವೇಷದ ರಾಜಕಾರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಇದನ್ನೇ ಕೆಲ ಪಟ್ಟಭದ್ರಹಿತಾಸಕ್ತಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಶಿವಮೊಗ್ಗ ಹಿಂಸಾಚಾರ: ಗಲಭೆಕೋರರಿಂದ ಹಾನಿ ವಸೂಲಿ ಮಾಡಿ; ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ
ನಿರ್ಬಂಧಗಳು ಮತ್ತಷ್ಟು ಸಡಿಲ
ಶಿವಮೊಗ್ಗ ಜಿಲ್ಲಾಡಳಿತ ಶನಿವಾರದಿಂದ ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಿದ್ದು, ಶನಿವಾರದಿಂದ ಶಾಲಾ-ಕಾಲೇಜುಗಳನ್ನು ಪುನರಾರಂಭಿಸುವ ನಿರ್ಧಾರವನ್ನು ತಡೆಹಿಡಿದಿದೆ ಎಂದು ತಿಳಿದುಬಂದಿದೆ.
ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸೋಮವಾರದಿಂದ ಶಾಲಾ ಕಾಲೇಜುಗಳನನು ಪುನರಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ಏತನ್ಮಧ್ಯೆ, ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಮೊಬೈಲ್ ಫೋನ್‌ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಯುವಕನ ಕೊಲೆಯಿಂದ ರಾಜ್ಯವೇ ಕುದಿಯುವ ಕುಲಮೆಯಾಗಿದೆ: ರಾಜ್ಯಪಾಲರು ಯಾರ ಕೈಗೊಂಬೆ ಆಗುವುದು ಬೇಡ; ಎಚ್ ಡಿ ಕುಮಾರಸ್ವಾಮಿ