ಕಲಬುರಗಿ: ರೈಲು ಪ್ರಯಾಣಿಕನನ್ನು ಸಾವಿನ ದವಡೆಯಿಂದ ರಕ್ಷಿಸಿದ ರೈಲ್ವೆ ಪೊಲೀಸ್, ವಿಡಿಯೋ ವೈರಲ್!
ಬೆಂಗಳೂರಿಗೆ ಬರಲು ಕಲಬುರಗಿ ರೈಲು ನಿಲ್ದಾಣದಲ್ಲಿ ರೈಲು ಹತ್ತಲು ಯತ್ನಿಸಿ ಕಾಲು ಜಾರಿ ರೈಲಿನಡಿ ಸಿಲುಕುತ್ತಿದ್ದ 27 ವರ್ಷದ ಪ್ರಯಾಣಿಕನನ್ನು ಸರ್ಕಾರಿ ರೈಲ್ವೆ ಪೊಲೀಸ್ ಪೇದೆಯೊಬ್ಬರು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.
Published: 26th February 2022 12:22 AM | Last Updated: 26th February 2022 01:51 PM | A+A A-

ಪ್ರತ್ಯಕ್ಷ ದೃಶ್ಯ
ಬೆಂಗಳೂರು: ಬೆಂಗಳೂರಿಗೆ ಬರಲು ಕಲಬುರಗಿ ರೈಲು ನಿಲ್ದಾಣದಲ್ಲಿ ರೈಲು ಹತ್ತಲು ಯತ್ನಿಸಿ ಕಾಲು ಜಾರಿ ರೈಲಿನಡಿ ಸಿಲುಕುತ್ತಿದ್ದ 27 ವರ್ಷದ ಪ್ರಯಾಣಿಕನನ್ನು ಸರ್ಕಾರಿ ರೈಲ್ವೆ ಪೊಲೀಸ್ ಪೇದೆಯೊಬ್ಬರು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.
ಗುರುವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಪ್ಲಾಟ್‌ಫಾರ್ಮ್ ಒಂದರಿಂದ ಹೊರಡುತ್ತಿದ್ದ ಹಾಸನ-ಸೋಲಾಪುರ್ ಎಕ್ಸ್‌ಪ್ರೆಸ್ ರೈಲು ಹತ್ತಲು ಯತ್ನಿಸಿದ್ದಾನೆ. ಆದರೆ ಕಾಲು ಜಾರಿ ಪ್ಲಾಟ್‌ಫಾರ್ಮ್ ಮತ್ತು ರೈಲ್ವೆ ಹಳಿಗಳ ನಡುವೆ ಬಿದ್ದಿದ್ದಾನೆ. ಸಾರ್ವಜನಿಕರ ಕಿರುಚಾಟದ ನಂತರ, ಅಲ್ಲಿ ಗಸ್ತು ತಿರುಗುತ್ತಿದ್ದ ಕಾನ್‌ಸ್ಟೆಬಲ್ ಪ್ರವೀಣ್ ಬಸವರಾಜ್ ಕೂಡಲೇ ಅನಿಲ್ ರನ್ನು ಹೊರಕ್ಕೆ ಎಳೆದಿದ್ದಾರೆ. ಹೀಗಾಗಿ ಸಾವಿನ ದವಡೆಯಿಂದ ಪ್ರಯಾಣಿಕ ಪಾರಾಗಿದ್ದಾನೆ.
ಅನಿಲ್ ಪ್ಲಾಟ್‌ಫಾರ್ಮ್ ಮತ್ತು ರೈಲ್ವೆ ಹಳಿಗಳ ನಡುವೆ ಬಿದ್ದಿದ್ದರು. ಅವರು ಬಾಗಿಲಿನ ಹಿಡಿಕೆಯನ್ನು ಹಿಡಿದಿಟ್ಟುಕೊಂಡಿದ್ದರು. ಆಘಾತಕ್ಕೊಳಗಾಗಿದ್ದ ಅವರು ನಾನು ಆತನನ್ನು ಹಿಡಿದುಕೊಂಡ ತಕ್ಷಣ ಪ್ರಜ್ಞಾಹೀನರಾದರು. ಹೊರಗೆ ಕರೆತಂದು ನೀರು ಕೊಟ್ಟೆ ಆನಂತರ ಅವರು ಸುಧಾರಿಸಿಕೊಂಡರು. ಅದೃಷ್ಟವಶಾತ್ ಆತನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪ್ರವೀಣ್ ಬಸವರಾಜ್ TNIE ಗೆ ಹೇಳಿದ್ದಾರೆ.
ಚೇತರಿಸಿಕೊಂಡ ಬಳಿಕ ಆತ ಬೆಂಗಳೂರಿಗೆ ಹೋಗಬೇಕೆಂದು ಹೇಳಿದರು. ಹೀಗಾಗಿ ಬೆಂಗಳೂರಿಗೆ ಹೊರಡಲಿರುವ ಬಸವ ಎಕ್ಸ್‌ಪ್ರೆಸ್ ಅನ್ನು ಹತ್ತಲು ಸಹಾಯ ಮಾಡಿದೆ ಎಂದರು.
ಪ್ರವೀಣ್ ಬಸವರಾಜ್ ಅವರು ಕಳೆದ ಮೂರು ವರ್ಷಗಳಿಂದ ಜಿಆರ್‌ಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ನಾನು ಒಂದು ಜೀವವನ್ನು ಉಳಿಸಿದ್ದೇನೆ ಎಂಬ ಖುಷಿ ಇದೆ. ನನ್ನ ವೃತ್ತಿಯಲ್ಲಿ ಇದು ನನ್ನ ಮೊದಲ ಘಟನೆಯಾಗಿದೆ ಎಂದರು.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಹಾಸನ-ಸೋಲಾಪುರ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕುತ್ತಿದ್ದ 27 ವರ್ಷದ ಅನಿಲ್ ಎಂಬಾತನನ್ನು ಪ್ರಾಣದ ಹಂಗು ತೊರೆದು ರೈಲ್ವೆ ಪೊಲೀಸ್ ಪೇದೆ ಪ್ರವೀಣ್ ಬಸವರಾಜ್ ರಕ್ಷಿಸಿದ್ದಾರೆ.@NewIndianXpress @KARailway @XpressBengaluru @AshwiniVaishnaw @Lolita_TNIE pic.twitter.com/uALPNW43aq
— kannadaprabha (@KannadaPrabha) February 25, 2022