ಧರ್ಮಸ್ಥಳಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಾಲ್ನಡಿಗೆ ಪ್ರಯಾಣ: ಜಲಧಾರೆ ಪಾದಯಾತ್ರೆಗೆ ಸಿದ್ಧತೆ?
ಮಂಗಳವಾರದಂದು ಮಹಾಶಿವರಾತ್ರಿ ಪ್ರಯುಕ್ತ ಮಂಜುನಾಥೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ಕ್ಷೇತ್ರದ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ.
Published: 28th February 2022 09:33 AM | Last Updated: 28th February 2022 01:26 PM | A+A A-

ಪ್ರಜ್ವಲ್ ದೇವರಾಜ್
ಹಾಸನ: ಮಂಗಳವಾರದಂದು ಮಹಾಶಿವರಾತ್ರಿ ಪ್ರಯುಕ್ತ ಮಂಜುನಾಥೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ಕ್ಷೇತ್ರದ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ.
ಮಂಜುನಾಥ ಸ್ವಾಮಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಸಾಗೋಣ ಎಂಬ ವಾಕ್ಯದಡಿ ಪ್ರಜ್ವಲ್ ರೇವಣ್ಣ ಪಾದಯಾತ್ರೆ ಹೊರಟಿದ್ದಾರೆ. ಹೊಳೆನರಸೀಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ಪಾದಯಾತ್ರೆ ಆರಂಭಿಸಿರುವ ಪ್ರಜ್ವಲ್ ರೇವಣ್ಣ ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರಿಗೆ ಪೂಜೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ಕೆಲಸ ಮಾಡಿ ತೋರಿಸಬೇಕೇ ಹೊರತು ಫೋಟೋ ಹಾಕಿ ಪೋಸ್ ಕೊಡಬಾರದು: ಪ್ರೀತಂ ಗೌಡಗೆ ಪ್ರಜ್ವಲ್ ರೇವಣ್ಣ ಟಾಂಗ್
ಬಳಿಕ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಬರುವ ಜೆಡಿಎಸ್ ಕಾರ್ಯಕರ್ತರ ಜೊತೆ ಹಾಸನ – ಆಲೂರು – ಸಕಲೇಶಪುರ – ಶಿರಾಢಿಘಾಟ್ ಮಾರ್ಗವಾಗಿ ತೆರಳಿ ಮಂಗಳವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಧರ್ಮಸ್ಥಳ ತಲುಪಲಿದ್ದಾರೆ.
ನಮ್ಮ ಮನೆ ದೇವರು ಶಿವ, ಶಿವನ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದೆ. ನನ್ನ ಹೋರಾಟಕ್ಕೂ ಮುಂಚೆ ಮೊದಲು ಧರ್ಮಸ್ಥಳ ಪಾದಯಾತ್ರೆ ಮಾಡಬೇಕೆಂದುಕೊಂಡಿದ್ದೆ. ಮುಂದೆ ಜಲಧಾರೆ ಪಾದಯಾತ್ರೆ ಆರಂಭವಾಗಲಿದೆ. ಜಲಧಾರೆ ಪಾದಯಾತ್ರೆಗೂ ಮುನ್ನ ಮೊದಲ ಪಾದಯಾತ್ರೆಯಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.