ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗದಿಂದ ನಗದು ಬಹುಮಾನ ಸ್ಪರ್ಧೆ!
ಮತದಾನ ಬಹುಮುಖ್ಯ ಹಕ್ಕು. ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಸಿಇಒ ಹಾಗೂ ಜಿಲ್ಲಾ ಮಟ್ಟದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಎಸ್ ವಿಇಇಪಿ) ಸಮಿತಿಯ ಅಧ್ಯಕ್ಷರೂ ಆದ ಫೌಜಿಯಾ ತರನ್ನಮ್ ಮಾಹಿತಿ ನೀಡಿದ್ದಾರೆ.
Published: 28th February 2022 07:27 PM | Last Updated: 28th February 2022 07:27 PM | A+A A-

ಮತದಾನ (ಸಾಂಕೇತಿಕ ಚಿತ್ರ)
ಬೆಂಗಳೂರು: ಮತದಾನ ಬಹುಮುಖ್ಯ ಹಕ್ಕು. ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಸಿಇಒ ಹಾಗೂ ಜಿಲ್ಲಾ ಮಟ್ಟದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಎಸ್ ವಿಇಇಪಿ) ಸಮಿತಿಯ ಅಧ್ಯಕ್ಷರೂ ಆದ ಫೌಜಿಯಾ ತರನ್ನಮ್ ಮಾಹಿತಿ ನೀಡಿದ್ದಾರೆ.
5 ವಿಭಾಗಗಳಲ್ಲಿ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದ್ದು, ಹಾಡು, ಕ್ವಿಜ್, ಕರಪತ್ರಗಳ ವಿನ್ಯಾಸಗಳು ಪ್ರಧಾನವಾಗಿರಲಿವೆ. ಪ್ರತಿ ವಿಭಾಗದಲ್ಲೂ ಸಾಂಸ್ಥಿಕ, ವೃತ್ತಿಪರ ಹಾಗೂ ಹವ್ಯಾಸಿ ಮೂರು ಉಪವಿಭಾಗಗಳಿದ್ದು, ಸಾಂಸ್ಥಿಕ ವಿಭಾಗದ ವಿಡಿಯೋ ಮೇಕಿಂಗ್ ನಲ್ಲಿ ಮೊದಲ ಸ್ಥಾನ ಗಳಿಸಿದ ವಿಜೇತ 2 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಪಡೆಯಲಿದ್ದಾರೆ. ಎರಡನೇ ಹಾಗೂ ಮೂರನೇ ಬಹುಮಾನವನ್ನು ಅನುಕ್ರಮವಾಗಿ 1 ಲಕ್ಷ ಹಾಗೂ 75,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇದರ ಹೊರತಾಗಿ ನಾಲ್ಕು ಸಮಾಧಾನಕರ ಬಹುಮಾನಗಳಿದ್ದು, ತಲಾ 30,000 ನಗದು ಬಹುಮಾನವನ್ನು ಹೊಂದಿರಲಿವೆ.
ವೃತ್ತಿಪರ ವಿಭಾಗದಲ್ಲಿ ಮೊದಲ ಬಹುಮಾನ 50,000 ರೂಪಾಯಿಗಳಿದ್ದರೆ, ಎರಡನೇ ಬಹುಮಾನ 30,000 ರೂಪಾಯಿ ಹಾಗೂ ನಾಲ್ಕನೇ ಬಹುಮಾನವನ್ನಾಗಿ 20,000 ರೂಪಾಯಿಗಳನ್ನು ನೀಡಲಾಗುತ್ತದೆ.
ಭಾಗಿಯಾದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಈ ಅಭಿಯಾನ, ಸ್ಪರ್ಧೆಗಳ ಮೂಲಕ ಮತದಾನದ ಪ್ರಮಾಣವನ್ನು ಏರಿಕೆ ಮಾಡಲು ಉದ್ದೇಶಿಸಲಾಗಿದ್ದು ನನ್ನ ಮತ, ನನ್ನ ಭವಿಷ್ಯ, ಒಂದು ಮತದ ಶಕ್ತಿ (My Vote, My Future, One Vote Power) ಎಂಬ ಶೀರ್ಷಿಕೆ ನೀಡಲಾಗಿದೆ. ಮಾ.15 ವರೆಗೆ ಆನ್ ಲೈನ್ ನಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸ್ಪರ್ಧಿಗಳು ಮತದಾನದ ಹೆಚ್ಚಳಕ್ಕೆ ಸಹಕಾರಿಯಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್ ಸೈಟ್ ನ್ನು ವೀಕ್ಷಿಸಬಹುದಾಗಿದೆ.