ರಾಜ್ಯದಲ್ಲಿ ನಿನ್ನೆ ಒಂದೇ ದಿನ 10 ಓಮಿಕ್ರಾನ್ ಕೇಸ್ ಪತ್ತೆ!
ರಾಜ್ಯದಲ್ಲಿ ಭಾನುವಾರ ಒಂದೇ ದಿನ ಬರೋಬ್ಬರಿ 10 ಮಂದಿಗೆ ಕೋವಿಡ್ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.
Published: 03rd January 2022 08:59 AM | Last Updated: 03rd January 2022 12:11 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಂದೇ ದಿನ ಬರೋಬ್ಬರಿ 10 ಮಂದಿಗೆ ಕೋವಿಡ್ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.
ಈ ಕುರಿತು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಕೆ ಅವರು ಮಾಹಿತಿ ನೀಡಿದ್ದು, ಜನವರಿ 2 ರಂದು ರಾಜ್ಯದಲ್ಲಿ 10 ಹೊಸ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
Ten new cases of Omicron have been confirmed in Karnataka on Jan 2nd taking the tally to 76:
— Dr Sudhakar K (@mla_sudhakar) January 3, 2022
Bengaluru: 8 cases (of which 5 are international travellers)
Dharwad: 2 cases#OmicronInIndia #Omicronindia #COVID19 #Karnataka @BSBommai @mansukhmandviya
ನಿನ್ನೆ ಪತ್ತೆಯಾಗಿರುವ 10 ಮಂದಿ ಸೋಂಕಿತರ ಪೈಕಿ ಬೆಂಗಳೂರು ನಗರದಲ್ಲೇ 8 ಪ್ರಕರಣಗಳು ಪತ್ತೆಯಾಗಿದ್ದು, ಧಾರವಾಡದಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ, ಓಮಿಕ್ರಾನ್ ಹೆಚ್ಚಳ: ನಾಳೆ ಸಂಜೆ ತಜ್ಞರ ಜೊತೆ ಸಿಎಂ ಸಭೆ-ಚರ್ಚೆ, ಕಠಿಣ ಕ್ರಮ ಜಾರಿ?
ಬೆಂಗಳೂರಿನಲ್ಲಿ ಪತ್ತೆಯಾಗಿರುವ 8 ಮಂದಿ ಸೋಂಕಿತರ ಪೈಕಿ 5 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.