ಮತಾಂತರ ಆರೋಪ: ಬಲಪಂಥೀಯ ಹಿಂದುತ್ವ ಗುಂಪಿನ ಸದಸ್ಯರಿಂದ ಪಾದ್ರಿ ಮೇಲೆ ಹಲ್ಲೆ
ನೆರೆಹೊರೆಯವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಲಪಂಥೀಯ ಹಿಂದುತ್ವವಾದಿಗಳು ಕುಟುಂಬವೊಂದರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದಿದೆ.
Published: 03rd January 2022 08:44 AM | Last Updated: 03rd January 2022 12:10 PM | A+A A-

ಸಂಗ್ರಹ ಚಿತ್ರ
ಬೆಳಗಾವಿ: ನೆರೆಹೊರೆಯವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಲಪಂಥೀಯ ಹಿಂದುತ್ವವಾದಿಗಳು ಕುಟುಂಬವೊಂದರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದಿದೆ.
ತ್ತೀಚೆಗೆ ಪಾದ್ರಿ ಅಕ್ಷಯಕುಮಾರ ಕರಗಾಂವಿ ಅವರ ನಿವಾಸದಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಈ ಹಲ್ಲೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಿಂದೂ ದೇವಾಲಯಗಳಿಗೆ ಸ್ವಾತಂತ್ರ್ಯ, ಮತಾಂತರ ನಿಷೇಧ ಕಾಯ್ದೆ: ಬಿಜೆಪಿ-ಕಾಂಗ್ರೆಸ್ ನಡುವೆ ಮುಂದುವರೆದ ವಾಕ್ಸಮರ
ಪಾದ್ರಿ ಮನೆಗೆ ನುಗ್ಗಿರುವ ಹಿಂದುತ್ವವಾದಿಗಳು ಪ್ರಾರ್ಥನಾ ಅಧಿವೇಶನ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಒಲೆಯ ಮೇಲಿದ್ದ ಪಾತ್ರೆಯನ್ನು ಸ್ಥಳದಲ್ಲಿದ್ದ ಮಹಿಳೆಯರ ಮೇಲೆ ಎಸೆದಿದ್ದು, ಪಾತ್ರೆಯಲ್ಲಿದ್ದ ಬಿಸಿ ಸಾಂಬಾರ್ ಬಿದ್ದು ನೋವಿಗೆ ಮಹಿಳೆ ಕೂಗಿದ್ದಾರೆಂದು ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ನಂತರ ಘಟಪ್ರಭಾ ಪೊಲೀಸರು ಏಳು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಂಧಿತರನ್ನು ಶಿವಾನಂದ ಶಿವಲಿಂಗಪ್ಪ, ರಮೇಶ ದಂಡಾಪುರ, ಪರಸಪ್ಪ ಬಾಬು, ಫಕೀರಪ್ಪ ಬಾಗೇವಾಡಿ, ಕೃಷ್ಣ ಕಾಂತಿಕರ್, ಚಾತನ್ ರಾಜೇಂದ್ರ ಮತ್ತು ಮಹಾಂತೇಶ ಬಸಲಿಂಗಪ್ಪ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮೂಡಲಗಿ ನಿವಾಸಿಗಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮತಾಂತರ ಆರೋಪದ ಮೇಲೆ ಬಂದ್ ಆಗಿದ್ದ ಶಾಲೆ: ಮಾಧ್ಯಮಗಳ ಸುದ್ದಿ ಬಳಿಕ ಮತ್ತೆ ಆರಂಭ!
ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳಾದ ಸೆಕ್ಷನ್ 143 (ಗಲಭೆ), 448 (ಅತಿಕ್ರಮಣ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 392 (ದರೋಡೆ), 506 (ಅಪರಾಧ ಬೆದರಿಕೆ), ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.