ತುಮಕೂರು ಮಠದ ಆನೆ ಅಪಹರಣಕ್ಕೆ ಯತ್ನ
ತಾಲೂಕಿನ ಕರಿಬಸವ ಸ್ವಾಮಿ ಮಠದ ಆನೆಯನ್ನು ಅರಣ್ಯ ಇಲಾಖೆಯವರು ಆನೆ ಬ್ರೋಕರ್ ಜೊತೆ ಶಾಮೀಲಾಗಿ ಗುಜರಾತ್'ನ ಸರ್ಕಸ್ ಕಂಪನಿಗೆ ಮಾರಾಟ ಮಾಡುವ ಹುನ್ನಾರ ಮಾಡಿದ್ದಾರೆಂದು ಕರಿಬಸವಸ್ವಾಮಿ ಮಠ ಸೇರಿದಂತೆ ಉರವಕೊಂಡ ಮಠದ ಉತ್ತರಾಧಿಕಾರಿ ಕಲ್ಯಾಣ ಸ್ವಾಮೀಜಿ ಭಾನುವಾರ ಆರೋಪಿಸಿದ್ದಾರೆ.
Published: 03rd January 2022 11:51 AM | Last Updated: 03rd January 2022 11:51 AM | A+A A-

ಸಂಗ್ರಹ ಚಿತ್ರ
ತುಮಕೂರು: ತಾಲೂಕಿನ ಕರಿಬಸವ ಸ್ವಾಮಿ ಮಠದ ಆನೆಯನ್ನು ಅರಣ್ಯ ಇಲಾಖೆಯವರು ಆನೆ ಬ್ರೋಕರ್ ಜೊತೆ ಶಾಮೀಲಾಗಿ ಗುಜರಾತ್'ನ ಸರ್ಕಸ್ ಕಂಪನಿಗೆ ಮಾರಾಟ ಮಾಡುವ ಹುನ್ನಾರ ಮಾಡಿದ್ದಾರೆಂದು ಕರಿಬಸವಸ್ವಾಮಿ ಮಠ ಸೇರಿದಂತೆ ಉರವಕೊಂಡ ಮಠದ ಉತ್ತರಾಧಿಕಾರಿ ಕಲ್ಯಾಣ ಸ್ವಾಮೀಜಿ ಭಾನುವಾರ ಆರೋಪಿಸಿದ್ದಾರೆ.
ಸುಖಾ ಸುಮ್ಮನೆ ಅರಣ್ಯ ಇಲಾಖೆಯವರು ಮಠದ ಬಳಿ ಬಂದು ಮಾವುತರನ್ನು ಬಯ್ಯುವುದನ್ನು ಮಾಡುತ್ತಲೇ ಇದ್ದರು. ಪ್ರತಿದಿನ ಒಂದಲ್ಲಾ ಒಂದು ತಂತ್ರಗಳನ್ನು ರೂಪಿಸುತ್ತಿದ್ದ ಆನೆ ಬ್ರೋಕರ್‌ಗಳ ಕಾಟದಿಂದ ಬೇಸತ್ತಿದ್ದ ನಮ್ಮ ಹಿರಿಯ ಗುರುಗಳು ನಾಲ್ಕು ತಿಂಗಳ ಹಿಂದೆ ಆನೆಯನ್ನು ಬಳ್ಳಾರಿ ಬಳಿಯ ಕಲ್ಯಾಣ ಸ್ವಾಮಿ ಮಠಕ್ಕೆ ಕಳುಹಿಸಿದ್ದರು.
ಡಿಸೆಂಬರ್ 16 ರಂದು ಮತ್ತೆ ಅರಣ್ಯ ಇಲಾಖೆಯ ಸಿಬ್ಬಂದಿ ತುಮಕೂರಿನ ಕರಿಬಸವ ಸ್ವಾಮಿ ಮಠಕ್ಕೆ ಬಂದು ಆನೆಗೆ ಅನಾರೋಗ್ಯವಿದ್ದು, ಈ ಹಿಂದೆ ಮಾಡಿದ್ದ ರಕ್ತ ಪರೀಕ್ಷಾ ವರದಿ ಸರಿಯಿಲ್ಲ. ಹೀಗಾಗಿ ಮತ್ತೆ ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಬೇಕು ಆನೆಯನ್ನು ಕಲ್ಯಾಣ ಸ್ವಾಮಿ ಮಠದಿಂದ ಕರಿಸಿ ಎಂದು ತಿಳಿಸಿದ್ದಾರೆ. ಅದರಂತೆ ನಮ್ಮ ಗುರುಗಳು ದೂರವಾಣಿ ಕರೆ ಮಾಡಿಸಿ ಆನೆಯನ್ನು ಮತ್ತೆ ಕರೆ ತರುವಂತೆ ಹೇಳಿದ್ದಾರೆ.
ಡಿ. 31 ರಂದು ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೋ ಪತ್ರವನ್ನು ತಂದು ಬೆಂಗಳೂರಿನ ಬನ್ನೇರುಘಟ್ಟಕ್ಕೆ ಆನೆಗೆ ಚಿಕಿತ್ಸೆಗೆ ಕೊಂಡೊಯ್ಯುವುದಾಗಿ ಹೇಳಿ ಎರಡು ದಿವಸದಲ್ಲಿ ಮತ್ತೆ ಮಠಕ್ಕೆ ಕರೆ ತಂದು ಬಿಡುವುದಾಗಿ ಹೇಳಿ ಆನೆಯನ್ನು ಕರೆದುಕೊಂಡು ಹೋದರು ಎಂದರು. ಆನೆಯ ಜೊತೆ ಮಾವುತರನ್ನು ಕಳುಹಿಸಿದ್ದಾಗಿ ಸ್ವಾಮೀಜಿ ತಿಳಿಸಿದರು.
ಆದರೆ ದಾಬಸ್‌ಪೇಟೆ ಬಳಿ ಲಾರಿ ಹೋಗುತ್ತಿದ್ದಂತೆ ಮಾವುತರ ಮೇಲೆ ಹಲ್ಲೆ ನಡೆಸಿ ಆನೆ ಸಮೇತ ಹೊರಟಿದ್ದಾರೆ. ಈ ವೇಳೆ ಹಲ್ಲೆಗೊಳಗಾದ ನಮ್ಮ ಮಾವುತರನ್ನು ಬಳ್ಳಾರಿಯಲ್ಲಿದ್ದ ನನಗೆ ನಡೆದ ಘಟನೆಯನ್ನೆಲ್ಲಾ ದೂರವಾಣಿ ಮೂಲಕ ತಿಳಿಸಿದ್ದರು. ಘಟನೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಕಲ್ಯಾಣಸ್ವಾಮಿಯವರು ತಿಳಿಸಿದ್ದಾರೆ.
ಈ ಹಿಂದೆ ಮೈಸೂರಿನಲ್ಲಿರುವ ಪೀಪಲ್ ಫಾರ್ ಅನಿಮಲ್ಸ್ ಎಂಬ ಎನ್‌ಜಿಒ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದರಿಂದ ಅರಣ್ಯ ಇಲಾಖೆಯು ಆನೆಯನ್ನು ಮಠದಿಂದ ಹಿಂಪಡೆಯಬೇಕು ಎಂದು ಮನವಿ ಮಾಡಿಕೊಂಡಿತ್ತು.