'ಬುಲ್ಲಿ ಬಾಯ್' ಕೇಸಿನಲ್ಲಿ ಬೆಂಗಳೂರಿನ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ: ಕಮಲ್ ಪಂತ್
'ಬುಲ್ಲಿ ಬಾಯ್' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಸೈಬರ್ ಸೆಲ್ ವಿಭಾಗ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
Published: 04th January 2022 01:00 PM | Last Updated: 04th January 2022 01:30 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: 'ಬುಲ್ಲಿ ಬಾಯ್' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಸೈಬರ್ ಸೆಲ್ ವಿಭಾಗ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗೆ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಕೇಸಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ನಮಗೇನು ಗೊತ್ತಿಲ್ಲ. ಮುಂಬೈ ಸೈಬರ್ ಸೆಲ್ ಪೊಲೀಸರು ನಮ್ಮ ಸಹಾಯ ಕೇಳುವುದಾಗಲಿ, ನಮಗೆ ಮಾಹಿತಿ ನೀಡುವುದಾಗಲಿ ಮಾಡಿಲ್ಲ. ಬೆಂಗಳೂರಿನಲ್ಲಿ ಮುಂಬೈ ಪೊಲೀಸರು ಯಾರನ್ನು ಬಂಧಿಸಿದರು ಎಂಬುದು ನಮಗೆ ಗೊತ್ತಿಲ್ಲ ಎಂದು ಹೇಳಿದರು.
#BulliBaiApp #Bengaluru police have no information on said arrest of 21year old in the case, says @CPBlr @CPMumbaiPolice @MumbaiPolice @XpressBengaluru @santwana99
— bala chauhan (@balachauhan) January 4, 2022
ತಮ್ಮ ಟ್ವಿಟ್ಟರ್ ಖಾತೆಯಿಂದ ಬುಲ್ಲಿ ಬಾಯಿ ಅಪ್ಲಿಕೇಶನ್ ನ್ನು ಬೆಂಗಳೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಹಂಚಿಕೊಂಡಿದ್ದು ಅದರಲ್ಲಿ ಮುಸ್ಲಿಂ ಮಹಿಳೆಯನ್ನು ಅಸಭ್ಯವಾಗಿ ಮತ್ತು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪವಿದೆ. ಈ ಸಂಬಂಧ ಮುಂಬೈ ಸೈಬರ್ ಅಪರಾಧ ವಿಭಾಗ ಪೊಲೀಸರು ನಿನ್ನೆ ಸಂಜೆ ವಿದ್ಯಾರ್ಥಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಏನಿದು 'ಬುಲ್ಲಿ ಬಾಯ್' ಅಪ್ಲಿಕೇಶನ್: ಮುಸ್ಲಿಂ ಮಹಿಳೆಯರು ಸಿಟ್ಟು ಮಾಡಿಕೊಂಡಿರೋದ್ಯಾಕೆ?
ಮೊನ್ನೆ ಜನವರಿ 1ರ ಹೊಸವರ್ಷ ಸಾಮಾಜಿಕ ಜಾಲತಾಣಗಳಲ್ಲಿ ‘ಬುಲ್ಲಿಬಾಯಿ ಆಪ್’ ಭಾರೀ ಸುದ್ದಿ ಮಾಡಿತ್ತು. ಇದು ಕಳೆದ ವರ್ಷ ಜುಲೈಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದ ಸುಲ್ಲಿ ಡೀಲ್ಸ್ ಆಪ್ ನ ಮಾದರಿಯಾಗಿದ್ದು ಹಲವು ಪ್ರಮುಖ ಮುಸ್ಲಿಂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಆರೋಪವಾಗಿದೆ.
ಇದನ್ನೂ ಓದಿ: 'ಬುಲ್ಲಿ ಬಾಯ್' ಆ್ಯಪ್ ಪ್ರಕರಣ: ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ
ಆಪ್ ನ್ನು ಅಭಿವೃದ್ಧಿಪಡಿಸಿದವರು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಹಂಚಿಕೊಂಡವರ ವಿರುದ್ಧ ಒಬ್ಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಆಪ್ ನಲ್ಲಿ ಆಕ್ಷೇಪಾರ್ಹ ವಿಷಯಗಳು ಮತ್ತು ಫೋಟೋ-ವಿಡಿಯೊಗಳನ್ನು ಅಭಿವೃದ್ಧಿಪಡಿಸಿದವರ ಬಗ್ಗೆ ಗಿಟ್ ಹಬ್ ಎಂಬ ಆಪ್ ನಿಂದ ದೆಹಲಿ ಪೊಲೀಸರು ವಿವರ ಕೇಳಿದ್ದಾರೆ. ಇದನ್ನು ಟ್ವಿಟ್ಟರ್ ನಿಂದ ಬ್ಲಾಕ್ ಮಾಡಿ ತೆಗೆದುಹಾಕುವಂತೆ ಕೂಡ ದೆಹಲಿ ಪೊಲೀಸರು ಕೇಳಿದ್ದರು.
ಈ ಪ್ರಕರಣದಲ್ಲಿ ಸೈಬರ್ ಅಪರಾಧ ವಿಭಾಗ ಪೊಲೀಸರಿಗೆ ತನಿಖೆ ನಡೆಸಲು, ಭಾರತದಲ್ಲಿ ನೋಡಲ್ ಏಜೆನ್ಸಿಯಾಗಿ ಮತ್ತು ಸೈಬರ್ ಭದ್ರತಾ ಬೆದರಿಕೆಗಳ ವಿರುದ್ಧ ಹೋರಾಡುವ ಕಂಪ್ಯೂಟರ್ ತುರ್ತು ಪರಿಸ್ಥಿತಿ ಪ್ರತಿಕ್ರಿಯೆ ತಂಡ (CERT) - ಪೊಲೀಸರಿಗೆ ಸಹಕಾರ, ಸಮನ್ವಯ ನೀಡುತ್ತಿದೆ.