ಬಂದೇ ಬಿಡ್ತಾ ಮೂರನೇ ಅಲೆ?: ಬೆಡ್ ಡೇಟಾ ಗಾಗಿ ಕೋವಿಡ್ ವಾರ್ ರೂಂ, ಬಿಬಿಎಂಪಿ ಸಿದ್ದತೆ

ರಾಜ್ಯದಲ್ಲಿ ಕೋವಿಡ್ -19 ಮತ್ತು ಒಮಿಕ್ರಾನ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟೇಟ್ ವಾರ್ ರೂಮ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ ರೂಮ್‌ನ ಅಧಿಕಾರಿಗಳು ಆಸ್ಪತ್ರೆಯ ಹಾಸಿಗೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

Published: 04th January 2022 01:33 PM  |   Last Updated: 04th January 2022 01:50 PM   |  A+A-


Representational image

ಸಾಂದರ್ಭಿಕ ಚಿತ್ರ

The New Indian Express

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಮತ್ತು ಒಮಿಕ್ರಾನ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟೇಟ್ ವಾರ್ ರೂಮ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ ರೂಮ್‌ನ ಅಧಿಕಾರಿಗಳು ಆಸ್ಪತ್ರೆಯ ಹಾಸಿಗೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ವಿವರವನ್ನು ಈ ಅಂಕಿಅಂಶ  ಒಳಗೊಂಡಿರುತ್ತದೆ.  ಎರಡನೇ ಅಲೆಯ ವೇಳೆ  ಇದ್ದ ವ್ಯವಸ್ಥೆ ಮತ್ತು ನೆಟ್‌ವರ್ಕ್ ಮರುಪ್ರಾರಂಭಿಸಲಾಗಿದೆ.

ಹಿಂದಿನ ಘಟನೆಗಳಿಂದ ಪಾಠ ಕಲಿತಿದ್ದು, ನಾವು ಗಾಗಲೇ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ವಿವರಗಳನ್ನು ಸಿದ್ಧಪಡಿಸಿದ್ದೇವೆ.  ಈಗ ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಹಾಸಿಗೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ, ಏಕೆಂದರೆ ಪ್ರಕರಣಗಳು ಹೆಚ್ಚಾದಾಗ ಮೊದಲ ಶೇಕಡಾ 50 ರಷ್ಟು ಹಾಸಿಗೆಗಳನ್ನು ಈ ಪ್ರದೇಶಗಳಲ್ಲಿ ಕಾಯ್ದಿರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್-19 ಹಾಸ್ಪಿಟಲ್ ಬೆಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮತ್ತು ವಾರ್ ರೂಮ್ ದಾಖಲೆಗಳ ಪ್ರಕಾರ, ಸರ್ಕಾರಿ ಮತ್ತು ಶಿಫಾರಸ್ಸು ಮಾಡಿರುವ ಆಸ್ಪತ್ರೆಗಳಲ್ಲಿ ಕಾಯ್ದಿರಿಸಿದ 1,800 ಹಾಸಿಗೆಗಳಲ್ಲಿ, 45-47 ಹಾಸಿಗೆಗಳು ಭರ್ತಿಯಾಗಿದ್ದು ಉಳಿದವು ಖಾಲಿಯಾಗಿವೆ.

ಇದನ್ನೂ ಓದಿ: ದೇಶದಲ್ಲಿ ಕೊರೋನಾ ಹೆಚ್ಚಳ 3ನೇ ಅಲೆಯ ಸೂಚನೆ, ಶೀಘ್ರದಲ್ಲೇ ಪೀಕ್ ಗೆ ಹೋಗಲಿದೆ: ತಜ್ಞರು

ಆಕ್ಸಿಜನ್, ಐಸಿಯು ಮತ್ತು ಇತರ ವಿಭಾಗಗಳೊಂದಿಗೆ ಅಳವಡಿಸಲಾಗಿರುವ ಹಾಸಿಗೆಗಳ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗುತ್ತಿದೆ ಈ ಸಂಬಂಧ ಆಸ್ಪತ್ರೆ ಸಂಘಗಳ ಜತೆ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಎರಡನೇ ಅಲೆಯ ಸಮಯದಲ್ಲಿ ಸಿದ್ಧಪಡಿಸಲಾದ ಹಾಸಿಗೆಗಳ ದಾಸ್ತಾನುಗಳನ್ನು ಮರುಪರಿಶೀಲಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಶೇ. 60-65 ರಷ್ಟು ರೋಗಿಗಳು ಎರಡು ಬಾರಿ ಲಸಿಕೆ ಪಡೆದಿಲ್ಲ.  ಮತ್ತು 35-40 ಪ್ರತಿಶತದಷ್ಟು ಜನರು ಸಹವರ್ತಿ ರೋಗಗಳು ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಭಯಪಡುವ ಅಗತ್ಯವಿಲ್ಲ. ಜನವರಿ ಅಂತ್ಯ ಅಥವಾ ಫೆಬ್ರವರಿ ವೇಳೆಗೆ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಯಿರುವುದರಿಂದ, ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ತುರ್ತು ಮತ್ತು ಅಗತ್ಯದ ಆಧಾರದ ಮೇಲೆ ರೋಗಿಗಳನ್ನು ನಿರ್ವಹಿಸಲು ಅಧಿಕಾರಿಗಳು ಇತರ ಜಿಲ್ಲೆಗಳಲ್ಲಿನ ಹಾಸಿಗೆಗಳ ವಿವರಗಳನ್ನು ಕ್ರೂಢೀಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp