ಇನ್ನೂ 'ಹೂವು' ಬಿಟ್ಟಿಲ್ಲ ಮಾವಿನ ಮರ: ಹಣ್ಣುಗಳಿರಲಿ, ಈ ವರ್ಷ ಉಪ್ಪಿನಕಾಯಿಗೂ ಮಾವು ಸಿಗೋದು ಡೌಟು!
ಹಣ್ಣುಗಳ ರಾಜ, ಮಾವು, ಈ ವರ್ಷಮಾವು ಪ್ರಿಯರಿಗೆ ಇಲ್ಲಿದೆ ನಿರಾಶಾದಾಯಕ ಸುದ್ದಿ. ಈ ವರ್ಷ ಮಾವಿನ ಹಣ್ಣಿನ ಇಳುವರಿ ಕಡಿಮೆಯಾಗಲಿದ್ದು, ಬೆಲೆಯೂ ಹೆಚ್ಚಲಿದೆ.
Published: 04th January 2022 02:13 PM | Last Updated: 04th January 2022 02:21 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಣ್ಣುಗಳ ರಾಜ, ಮಾವು, ಈ ವರ್ಷಮಾವು ಪ್ರಿಯರಿಗೆ ಇಲ್ಲಿದೆ ನಿರಾಶಾದಾಯಕ ಸುದ್ದಿ. ಈ ವರ್ಷ ಮಾವಿನ ಹಣ್ಣಿನ ಇಳುವರಿ ಕಡಿಮೆಯಾಗಲಿದ್ದು, ಬೆಲೆಯೂ ಹೆಚ್ಚಲಿದೆ. ಕಳೆದ ವರ್ಷ ಅಕಾಲಿಕ ಮಳೆಯ ನಂತರ ಮಣ್ಣಿನಲ್ಲಿ ಹೆಚ್ಚಿನ ತೇವಾಂಶದ ಅಂಶದಿಂದಾಗಿ ಮಾವಿನ ಮರಗಳಲ್ಲಿ ಹೂವಿನ ಬೆಳವಣಿಗೆಯಾಗಿಲ್ಲ.
16 ಜಿಲ್ಲೆಗಳಲ್ಲಿ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಮತ್ತು ರಾಮನಗರ ಜಿಲ್ಲೆಗಳಲ್ಲಿ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುವ ಮೂಲಕ ಕರ್ನಾಟಕವು ದೇಶದ ಮಾವು ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 10 ಲಕ್ಷ ಟನ್ ಉತ್ಪಾದನೆಯಾಗುತ್ತದೆ. 2020ರಲ್ಲಿ ಇದು 15 ಲಕ್ಷ ಟನ್ಗಳಷ್ಟಿತ್ತು ಎಂದು ತೋಟಗಾರಿಕಾ ಇಲಾಖೆಯ ಮಾಜಿ ಹೆಚ್ಚುವರಿ ನಿರ್ದೇಶಕ ಮತ್ತು ಹಿರಿಯ ತೋಟಗಾರಿಕಾ ವಿಜ್ಞಾನಿ ಎಸ್.ವಿ.ಹಿತ್ತಲಮನಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಅಂದಾಜಿನ ಪ್ರಕಾರ ಈ ವರ್ಷ ಉತ್ಪಾದನೆಯು ಕಳೆದ ವರ್ಷದ ಅರ್ಧದಷ್ಟು ಅಂದರೆ ಸುಮಾರು 8 ಲಕ್ಷ ಟನ್ ಆಗಿರಬಹುದು. ಜನವರಿ 15 ರ ನಂತರ ಎರಡನೇ ನಮಗೆ ಸ್ಪಷ್ಟವಾದ ಚಿತ್ರ ದೊರೆಯಲಿದೆ. ಆದರೆ ಕಳೆದ ವರ್ಷಕ್ಕಿಂತ ಇಳುವರಿ ಖಂಡಿತಾ ಕಡಿಮೆಯಾಗಲಿದೆ’ ಎಂದು ಹೇಳಿದ್ದಾರೆ.
ಮಾವು ಬೆಳೆಯುವ ಪ್ರದೇಶಗಳು ಸೇರಿದಂತೆ ಇಡೀ ರಾಜ್ಯದಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ಭಾರಿ ಮಳೆ ಸುರಿಯಿತು, ಇದರಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಯಿತು, ಮಾವಿನ ಮರಗಳು ಹೆಚ್ಚು ಎಲೆಗಳನ್ನು ಬಿಡುತ್ತಿವೆ. ಆದರೆ ವಾಸ್ತವವಾಗಿ, ಈ ಋತುವಿನಲ್ಲಿ ಗಿಡದ ಬೆಳವಣಿಗೆಗೆ ಬದಲಾಗಿ ಹೂವಿನ ಬೆಳವಣಿಗೆಯು ಹೆಚ್ಚು ಇರಬೇಕಿತ್ತು.
ಇದನ್ನೂ ಓದಿ: ಕರ್ನಾಟಕದ ಇಶಾದ್ ಮಾವು, ಕುಮಟಾ ಈರುಳ್ಳಿ, ಭಟ್ಕಳ ಮಲ್ಲಿಗೆಗೆ ಜಿಐ ಟ್ಯಾಗ್ ಪಡೆಯುವ ಪ್ರಕ್ರಿಯೆಗೆ ಚಾಲನೆ!
ಕಡಿಮೆ ಹೂವುಗಳಿದ್ದರೇ ಇಳುವರಿ ಸ್ವಾಭಾವಿಕವಾಗಿ ಕಡಿಮೆ ಇರುತ್ತದೆ. ಮಾರ್ಚ್ ಸಮಯಕ್ಕೆ ಸರಿಯಾಗಿ ಮಾವಿನ ಹಣ್ಣುಗಳು ಪ್ರಾರಂಭವಾಗುತ್ತವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ, ತಡವಾಗಿ ಹೂವು ಬಿಡುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಸಾಮಾನ್ಯವಾಗಿ ಡಿಸೆಂಬರ್ನಲ್ಲಿ ವಿಶೇಷವಾಗಿ ಅಲ್ಫಾನ್ಸೋ ಮತ್ತು ಸೆಂಧುರ ತಳಿಗಳಿಗೆ ಹೂವು ಬಿಡುತ್ತದೆ. ಆದರೆ ಈ ವರ್ಷ ಕೋಲಾರದಲ್ಲಿ ಅಷ್ಟೇನೂ ಹೂ ಬಿಟ್ಟಿಲ್ಲ, ಇದು ಒಟ್ಟು ಉತ್ಪಾದನೆಗೆ ಸುಮಾರು 8 ಲಕ್ಷ ಟನ್ ಕೊಡುಗೆ ನೀಡುತ್ತಿತ್ತು ಎಂದು ಕೋಲಾರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್.ಚಿನ್ನಪ್ಪ ರೆಡ್ಡಿ ತಿಳಿಸಿದ್ದಾರೆ.
ಹೂಬಿಡುವ ಸಮಯದಿಂದ ಹಣ್ಣುಗಳನ್ನು ಪಡೆಯಲು ಕನಿಷ್ಠ 100 ದಿನಗಳು ಬೇಕಾಗುತ್ತದೆ. ಹೂಬಿಡುವಿಕೆಯು ವಿಳಂಬವಾದರೆ, ಹಣ್ಣು ಬರುವುದು ವಿಳಂಬವಾಗುತ್ತವೆ. ಅಷ್ಟರೊಳಗೆ ಮುಂಗಾರು ಆರಂಭವಾದರೆ ಮತ್ತೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.