ರಾಜ್ಯದಲ್ಲಿ ಶೇ. 25 ರಷ್ಟು ಹದಿಹರೆಯದವರಿಗೆ ಕೋವಿಡ್ ಲಸಿಕೆ
ರಾಜ್ಯದಲ್ಲಿ 15 ರಿಂದ 18 ವರ್ಷದ ಪ್ರತಿ ನಾಲ್ಕು ಮಕ್ಕಳಲ್ಲಿ ಒಬ್ಬರಿಗೆ ಲಸಿಕೆ ಹಾಕಲಾಗಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಶೇ. 25 ರಷ್ಟು ಹದಿಹರೆಯದವರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
Published: 06th January 2022 03:58 PM | Last Updated: 06th January 2022 03:58 PM | A+A A-

ಮಕ್ಕಳಿಗೆ ಕೋವಿಡ್ ಲಸಿಕೆ
ಬೆಂಗಳೂರು: ರಾಜ್ಯದಲ್ಲಿ 15 ರಿಂದ 18 ವರ್ಷದ ಪ್ರತಿ ನಾಲ್ಕು ಮಕ್ಕಳಲ್ಲಿ ಒಬ್ಬರಿಗೆ ಲಸಿಕೆ ಹಾಕಲಾಗಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಶೇ. 25 ರಷ್ಟು ಹದಿಹರೆಯದವರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಮೂಲಕ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
ಮುಂದಿನ 15 ದಿನಗಳಲ್ಲಿ ರಾಜ್ಯ ಸರ್ಕಾರ ರಾಜ್ಯ ಎಲ್ಲಾ ಹದಿಹರೆಯದ(15-18 ವರ್ಷಗಳು)ವರಿಗೆ ಲಸಿಕೆ ನೀಡುವ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಎರಡು ಪಟ್ಟು ಹೆಚ್ಚಳ: ಮುಂದಿನ 4-6 ವಾರ ನಿರ್ಣಾಯಕ!
ಬುಧವಾರದ ವೇಳೆಗೆ ರಾಜ್ಯದಲ್ಲಿ ಸುಮಾರು 10.5 ಲಕ್ಷ ಹದಿಹರೆಯದವರಿಗೆ ಲಸಿಕೆ ಹಾಕಲಾಗಿದೆ. 3ನೇ ದಿನದಂದು, ರಾಜ್ಯವು 15-18 ವರ್ಷ ವಯಸ್ಸಿನ 2.97 ಲಕ್ಷ ಮಕ್ಕಳಿಗೆ ಲಸಿಕೆ ಹಾಕಿದೆ. ಮೊದಲ ದಿನವೇ ರಾಜ್ಯದಲ್ಲಿ 3.50 ಲಕ್ಷ ಹದಿಹರೆಯದವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿತ್ತು.
ಏತನ್ಮಧ್ಯೆ, ಲಸಿಕೆ ಪಡೆದ ನಂತರ ಪ್ಯಾರೆಸಿಟಮಾಲ್ ನೀಡುವ ಅಗತ್ಯವಿಲ್ಲ ಎಂದು ಭಾರತ್ ಬಯೋಟೆಕ್ ಸಂಸ್ಥೆ ಸ್ಪಷ್ಟಪಡಿಸಿದೆ.