ಶ್ರೀರಂಗಪಟ್ಟಣ: ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ; ಬರೀ ಮೈಯ್ಯಲ್ಲಿ ಕೊಠಡಿಯಲ್ಲಿ ಲಾಕ್ ಮಾಡಿ ವಿಕೃತಿ!
ಶಾಲೆಗೆ ಮೊಬೈಲ್ ತಂದಿದ್ದ ಓರ್ವ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿಸಿ ಕೊಠಡಿಯೊಂದರಲ್ಲಿ ಲಾಕ್ ಮಾಡಿ ಕೂಡಿ ಹಾಕಿ ಮುಖ್ಯಶಿಕ್ಷಕಿಯೊಬ್ಬರು ಅಮಾನವೀಯವಾಗಿ ಶಿಕ್ಷಿಸಿರುವ ಘಟನೆ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
Published: 07th January 2022 10:55 AM | Last Updated: 07th January 2022 01:14 PM | A+A A-

ಸಾಂದರ್ಭಿಕ ಚಿತ್ರ
ಶ್ರೀರಂಗಪಟ್ಟಣ: ಶಾಲೆಗೆ ಮೊಬೈಲ್ ತಂದಿದ್ದ ಓರ್ವ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿಸಿ ಕೊಠಡಿಯೊಂದರಲ್ಲಿ ಲಾಕ್ ಮಾಡಿ ಕೂಡಿ ಹಾಕಿ ಮುಖ್ಯಶಿಕ್ಷಕಿಯೊಬ್ಬರು ಅಮಾನವೀಯವಾಗಿ ಶಿಕ್ಷಿಸಿರುವ ಘಟನೆ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ವಾರದ ಹಿಂದೆಯೇ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ಶಾಲೆಗೆ ಮೊಬೈಲ್ ತೆಗೆದುಕೊಂಡು ಬಂದಿದ್ದ ವಿಚಾರ ತಿಳಿದ ಮುಖ್ಯಶಿಕ್ಷಕಿ ಕೊಠಡಿಗೆ ಕರೆಸಿ, ಯಾರಾರಯರು ಮೊಬೈಲ್ ತಂದಿದ್ದೀರೋ ಎಲ್ಲರೂ ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮಗಳ ಬಟ್ಟೆಬಿಚ್ಚಿಸುತ್ತೇನೆ. ಹುಡುಗರಿಂದ ನಿಮ್ಮನ್ನು ಚೆಕ್ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಕೆಲ ವಿದ್ಯಾರ್ಥಿನಿಯರ ಬಳಿ ಮೊಬೈಲ್ ಇರುವುದು ತಿಳಿಯುತ್ತಿದ್ದಂತೆ, ಓರ್ವ ವಿದ್ಯಾರ್ಥಿನಿಯ ಬಟ್ಟೆ ಕಳಚಿ ಹಲ್ಲೆ ನಡೆಸಿದ್ದಾರೆ. ಹುಡುಗಿಯನ್ನು ನೆಲದ ಮೇಲೆ ಕೂರಿಸಿ ಚಳಿಯಾಗಲೆಂದು ಜೋರಾಗಿ ಫ್ಯಾನ್ ಹಾಕಿಸಿದ್ದಾರೆ. ಮುಖ್ಯ ಶಿಕ್ಷಕಿ ಸ್ನೇಹಲತಾ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ವಿಷಯ ತಿಳಿದು ಶಾಲೆಗೆ ವಿದ್ಯಾರ್ಥಿನಿ ಪೋಷಕರು ಗ್ರಾಮಸ್ಥರ ಜೊತೆಗೆ ಆಗಮಿಸಿದ್ದಾರೆ, ನಂತರ ತಹಶೀಲ್ದಾರ್ ಶ್ವೇತಾ ಅವರ ಬಳಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಘೋರ ಘಟನೆ: ಮಕ್ಕಳಿಗೆ ಬೆಂಕಿ ಹಚ್ಚಿ, ತಾಯಿ ಆತ್ಮಹತ್ಯೆ
ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಈ ಸಂಬಂಧ ಪ್ರತಿಕ್ರಿಯಿಸಿ, ಗ್ರಾಮಸ್ಥರು ಹಾಗೂ ಬಾಲಕಿಯ ಪೋಷಕರ ದೂರಿನ್ವಯ ಶಾಲೆಗೆ ಭೇಟಿ ನೀಡಿ ಬಾಲಿಕಿಯಿಂದ ಮಾಹಿತಿ ಪಡೆದಿದ್ದೇನೆ. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಜೊತೆಗೆ ಈ ಸಂಬಂಧ ಈಗಾಗಲೇ ಮಂಡ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಮುಖ್ಯ ಶಿಕ್ಷಕಿಯ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ.
ತಾ.ಪಂ ಮಾಜಿ ಸದಸ್ಯ ರಾಮಕೃಷ್ಣ, ಗ್ರಾ.ಪಂ ಸದಸ್ಯೆ ಬೃಂದಾ, ಎಸ್ಡಿಎಂಸಿ ಅಧ್ಯಕ್ಷೆ ಪ್ರತಿಭಾ, ಜನವಾದಿ ಸಂಘದ ಜಯಮ್ಮ, ಸುಜಾತ, ಪುರುಷೋತ್ತಮ, ಮಂಜುನಾಥ ಸೇರಿದಂತೆ ಇತರ ಗ್ರಾಮಸ್ಥರು ತಹೀಲ್ದಾರ್ ಅವರಿಗೆ ದೂರು ನೀಡುವ ವೇಳೆ ಹಾಜರಿದ್ದರು.