ರಾಜ್ಯದಲ್ಲಿ 4,236 ಕೋಟಿ ರೂ. ಮೊತ್ತದ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ: 12,000 ಉದ್ಯೋಗ ಸೃಷ್ಟಿ
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
Published: 07th January 2022 04:46 PM | Last Updated: 07th January 2022 04:46 PM | A+A A-

ಮುರುಗೇಶ್ ಆರ್ ನಿರಾಣಿ
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 4,236 ರೂ. ಕೋಟಿ ಮೊತ್ತದ 87 ಯೋಜನೆಗಳಿಗೆ ಅನುಮೋದನೆ ನೀಡಿದೆ.
ಇದನ್ನೂ ಓದಿ: ಸಾಲ ಖಾತರಿ ಯೋಜನೆಯಿಂದ 13.5 ಲಕ್ಷ ಸಣ್ಣಪುಟ್ಟ ವ್ಯಾಪಾರಿಗಳು ಬಚಾವ್: ಎಸ್ ಬಿ ಐ
ಈ ಅನುಮೋದನೆಯಿಂದಾಗಿ ರಾಜ್ಯದಲ್ಲಿ ಸುಮಾರು 12,251ಕ್ಕೂ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 128ನೇ ರಾಜ್ಯಮಟ್ಟದ ಏಕಗವಾಕ್ಷಿ ತೆರವು ಸಮಿತಿ (ಎಸ್ಎಲ್ಡಬ್ಲ್ಯೂಸಿಸಿ) ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಯನ್ನು ಹೀನಾಮಾನ ತೆಗಳುವ ಆಡಿಯೊ ಕ್ಲಿಪ್ ವೈರಲ್: ಭಾರತ್ ಪೆ ಸ್ಥಾಪಕ ಸ್ಪಷ್ಟನೆ
ಅನುಮೋದಿಸಲಾದ ಹೊಸ ಹೂಡಿಕೆಗಳಲ್ಲಿ ಟೆಕ್ರೆನ್ ಬ್ಯಾಟರಿಸ್ ಪ್ರೈವೇಟ್ ಲಿಮಿಟೆಡ್ 480 ಕೋಟಿ ರೂ. ಉದ್ಯೋಗ 200; ನಿಯೋಟ್ರೆಕ್ಸ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ನಿಂದ 150 ವ್ಯಕ್ತಿಗಳಿಗೆ ಉದ್ಯೋಗಾವಕಾಶದೊಂದಿಗೆ 340 ಕೋಟಿ 270 ಉದ್ಯೋಗಗಳೊಂದಿಗೆ ಸೀಮೆನ್ಸ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ನಿಂದ 313.20 ಕೋಟಿ ರೂ. ಹೂಡಿಕೆ ಮಾಡಿದೆ.
ಇದನ್ನೂ ಓದಿ: ಬಹುರಾಷ್ಟ್ರೀಯ ಕಂಪನಿ ಕ್ಯಾಪ್ಜೆಮಿನಿಯಲ್ಲಿ ವರ್ಚುವಲ್ ನೇಮಕಾತಿ, ಹೊಸಬರಿಂದ ಅರ್ಜಿ ಆಹ್ವಾನ