ಮಕ್ಕಳಿಗೆ ಪಾಠ ಮಾಡಲು 'ವಠಾರ ಶಾಲೆ' ಉತ್ತಮ ಆಯ್ಕೆ: ಶಿಕ್ಷಕರು, ತಜ್ಞರ ಅಭಿಮತ
ಕೊರೋನಾ ಒಂದನೇ ಅಲೆ ಬಂದು ಶಾಲೆಗಳು ಮುಚ್ಚಿದ್ದ ಸಂದರ್ಭದಲ್ಲಿ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿತ್ತು. ಇದೀಗ ಕೊರೋನಾ ಮೂರನೇ ಅಲೆ ಬಂದು ರಾಜಧಾನಿ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿ ಆನ್ ಲೈನ್ ಮೂಲಕ ಶಿಕ್ಷಣ ಕಲಿಕೆ ಮತ್ತೆ ಆರಂಭವಾಗಿದೆ.
Published: 08th January 2022 12:35 PM | Last Updated: 08th January 2022 01:56 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೊರೋನಾ ಒಂದನೇ ಅಲೆ ಬಂದು ಶಾಲೆಗಳು ಮುಚ್ಚಿದ್ದ ಸಂದರ್ಭದಲ್ಲಿ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿತ್ತು. ಇದೀಗ ಕೊರೋನಾ ಮೂರನೇ ಅಲೆ ಬಂದು ರಾಜಧಾನಿ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿ ಆನ್ ಲೈನ್ ಮೂಲಕ ಶಿಕ್ಷಣ ಕಲಿಕೆ ಮತ್ತೆ ಆರಂಭವಾಗಿದೆ.
ಈ ಸಂದರ್ಭದಲ್ಲಿ ಹಿಂದೆ ಅನುಸರಿಸಲಾಗುತ್ತಿದ್ದ ವಠಾರ ಶಾಲೆಯು ಮಕ್ಕಳಿಗೆ ಶಿಕ್ಷಣವನ್ನು ನೀಡಲು ಲಭ್ಯವಿರುವ ಆಯ್ಕೆಗಳಲ್ಲಿ ಅತ್ಯುತ್ತಮ ವಿಧಾನವಾಗಿದೆ ಎಂದು ಶಿಕ್ಷಕರು ಮತ್ತು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ಹಳ್ಳಿಗಳಲ್ಲಿ ವಠಾರ ಶಾಲೆ ವಿಧಾನದ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದುದು ಕಂಡುಬರುತ್ತಿತ್ತು.
ವಠಾರ ಶಾಲೆ ಅಥವಾ ಹಳ್ಳಿ ಶಾಲೆಯು ಒಂದು ಸೂಕ್ಷ್ಮ-ಹಂತದ ಮಧ್ಯಸ್ಥಿಕೆ ಕಲಿಕಾ ವಿದಾನವಾಗಿದೆ. ಸುಮಾರು 20 ವಿದ್ಯಾರ್ಥಿಗಳು ಹಳ್ಳಿಯ ತೆರೆದ ಜಾಗದಲ್ಲಿ ಸೇರಿ ಕೂರುತ್ತಾರೆ. ಪ್ರತಿ ವಿಷಯದ ಶಿಕ್ಷಕರು ವಾರಕ್ಕೊಮ್ಮೆ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ, ಇದು ಶಿಕ್ಷಣದಲ್ಲಿ ನಿರಂತರತೆಯನ್ನು ಖಾತ್ರಿಪಡಿಸುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಸೀಮೆಸುಣ್ಣ, ಬಳಪ ಮತ್ತು ಕರಿಹಲಗೆ ಮೇಲೆ ಬರೆಯುವ ವಿಧಾನದ ಕೊರತೆಯೊಂದಿಗೆ, ಶಿಕ್ಷಣಶಾಸ್ತ್ರದ ಪರ್ಯಾಯ ವಿಧಾನಗಳ ಅಗತ್ಯವಿತ್ತು - 2020ರಲ್ಲಿ ಕೊರೋನಾ ಸೋಂಕು ಬಂದಾಗ ಕೈಯ ಮೂಲಕ ಗಣಿತ ಚಟುವಟಿಕೆ ಮಾಡುವ ಬಹುಹಂತೀಯ ತರಗತಿಗಳಿಗೆ ಒತ್ತು ನೀಡಲಾಯಿತು.
ಕಲಬುರಗಿ ವಿಭಾಗದಲ್ಲಿ ವಟಾರ ಕಲಿಕೆಯನ್ನು ಅಳವಡಿಸಿಕೊಳ್ಳಲಾಗಿದ್ದು ಅದರ ದಕ್ಷತೆ, ಪರಿಣಾಮ ಮಕ್ಕಳ ಶಿಕ್ಷಣ ಮೇಲೆ ಕಂಡುಬಂದಿದೆ. ಇಲ್ಲಿ ಸುಮಾರು 33 ಸಾವಿರ ವಠಾರ ಶಾಲೆಗಳಿವೆ. 12 ಲಕ್ಷ ಮಕ್ಕಳ ಪೈಕಿ 8-10 ಲಕ್ಷ ಜನರಲ್ಲಿ ವಠಾರ ಶಾಲೆ ಕಲಿಕೆಯ ಪರಿಣಾಮ ಕಂಡುಬಂದಿದೆ.
ಇಲ್ಲಿ ಬೇರೆ ಶಿಕ್ಷಣ ವಿಧಾನವನ್ನು ಕೂಡ ಪ್ರಯೋಗ ಮಾಡಿ ನೋಡಲಾಗಿದೆ. 'ಓದುವ ಬೆಳಕು' ವಿಧಾನವನ್ನು ಆರ್ ಡಿಪಿಆರ್ ಇಲಾಖೆ ಮೂಲಕ ಕೈಗೆತ್ತಿಕೊಂಡಿದ್ದು ಪಂಚಾಯತ್ ಗ್ರಂಥಾಲಯದೊಳಗೆ ಚಟುವಟಿಕೆ ಆಧಾರಿತ ಕಲಿಕೆ ವಿಧಾನವಾಗಿದೆ. ಈ ವಿಧಾನ ಮೂಲಕ 8 ಲಕ್ಷ ವಿದ್ಯಾರ್ಥಿಗಳು ಪಂಚಾಯತ್ ಗ್ರಂಥಾಲಯಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ನಳಿನ್ ಅತುಲ್ ಹೇಳುತ್ತಾರೆ.