ಹುಣಸೂರು: ಜನರ ಕಲ್ಲೇಟಿಗೆ ಹೆದರಿ ನಾಲೆಗಿಳಿದು ಪರದಾಡಿದ ಕಾಡಾನೆಗಳು, ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಪಾರು
ಆಹಾರವನ್ನು ಆರಸಿ ನಾಡಿಗೆ ಬಂದಿದ್ದ ಆನೆಗಳು ಜನರ ಕಾಟದಿಂದ ತಪ್ಪಿಸಿಕೊಳ್ಳಲು ಹೋಗಿ ನಾಲೆಗೆ ಬಿದ್ದು ಪರದಾಡಿದ ಘಟನೆ ನಾಗರಹೊಳೆ ಸಮೀಪದ ಹುಣಸೂರಿನಲ್ಲಿ ನಡೆದಿದೆ.
Published: 10th January 2022 04:48 PM | Last Updated: 10th January 2022 04:48 PM | A+A A-

ನಾಲೆಯಲ್ಲಿ ಸಿಲುಕಿದ್ದ ಆನೆಗಳು
ಹುಣಸೂರು: ಆಹಾರವನ್ನು ಆರಸಿ ನಾಡಿಗೆ ಬಂದಿದ್ದ ಆನೆಗಳು ಜನರ ಕಾಟದಿಂದ ತಪ್ಪಿಸಿಕೊಳ್ಳಲು ಹೋಗಿ ನಾಲೆಗೆ ಬಿದ್ದು ಪರದಾಡಿದ ಘಟನೆ ನಾಗರಹೊಳೆ ಸಮೀಪದ ಹುಣಸೂರಿನಲ್ಲಿ ನಡೆದಿದೆ.
ನಾಗರಹೊಳೆ ಅಭಯಾರಣ್ಯದಿಂದ ಕಾಡಾನೆಗಳು ದಿಕ್ಕುತಪ್ಪಿ ಬಂದಿದ್ದ ಆನೆಗಳು ಜನರ ಚೀರಾಟ ಮತ್ತು ಕಲ್ಲೇಟಿಗೆ ಹೆದರಿ ಕಾಡಿಗೆ ಹೋಗಲಾಗದೆ ನಾಲೆಗೆ ಇಳಿದಿವೆ. ಆದರೆ ಅದರಿಂದ ಮೇಲೆ ಹತ್ತಲಾಗದೆ ಅತ್ತಿಂದಿತ್ತ ಓಡಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹುಣಸೂರು ಸಮೀಪ @nagaraholetr ಬಳಿ ಕಾಲುವೆಯಲ್ಲಿ ಸಿಲುಕಿದ್ದ ಈ ಆನೆಗಳ ಹಿಂಡನ್ನು ಸ್ಠಳೀಯರು ಮತ್ತು @aranya_kfd ಪ್ರಯತ್ನ ಮತ್ತು ನೆರವಿನಿಂದ ಹೊರತರಲಾಯಿತು.@XpressBengaluru @Amitsen_TNIE @moefcc @wildmysuru @mahesh_ifs @ifs_yedukondalu pic.twitter.com/XdJTtoOA5u
— kannadaprabha (@KannadaPrabha) January 10, 2022
ನಾಗರಹೊಳೆ ಉದ್ಯಾನವನದಿಂದ ಭಾನುವಾರ ರಾತ್ರಿ ಹೊರಬಂದಿದ್ದ ಆನೆಗಳ ಹಿಂಡು ಪೆಂಜಹಳ್ಳಿ, ಗುರುಪುರ, ಮಾಜಿ ಗುರುಪುರ ಗ್ರಾಮಗಳ ಜಮೀನುಗಳಲ್ಲಿ ರಾತ್ರಿ ವೇಳೆ ಮೇವು ತಿಂದು ಮುಂಜಾನೆ ಕಾಡಿನತ್ತ ತೆರಳುತ್ತಿದ್ದ ವೇಳೆ ರೈತರು ಆನೆಗಳನ್ನು ಅಟ್ಟಾಡಿಸಿದ್ದಾರೆ. ಈ ವೇಳೆ ದೃತಿಗೆಟ್ಟ ಆನೆಗಳು ಕಾಡಿಗೆ ತರೆಳಲಾಗದೇ ಮುಖ್ಯ ನಾಲೆಗಿಳಿದಿದೆ.
ಬಳಿಕವೂ ಜನರು ನಾಲೆ ಸುತ್ತ ಜಮಾಯಿಸಿ, ಆನೆಗಳನ್ನು ಬೆದರಿಸಿದ್ದಾರೆ. ಯುವಕರು ಕಟ್ಟು ಹೊಡೆದು ಹೆದರಿಸಿದ್ದರಿಂದ ನಾಲೆ ಮೇಲೆ ಬರಲಾಗದೆ ಗಂಟೆಗಳ ಕಾಲ ಅತ್ತಿಂದಿತ್ತ ಓಡಾಡತೊಡಗಿದವು.
ಈ ವಿಚಾರ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಜನರನ್ನು ನಿಯಂತ್ರಿಸಿ ಆನೆಗಳು ನಾಲೆಯಿಂದ ಮೇಲೆ ಬರಲು ಸಹಾಯ ಮಾಡಿದ್ದಾರೆ. ನಂತರ ಪೆಂಜಹಳ್ಳಿ ಭಾಗದಿಂದ ಉದ್ಯಾನವನದತ್ತ ತೆರಳಿವೆ.