ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶೀಘ್ರದಲ್ಲೇ ಚಿರತೆ ಸಫಾರಿ ಆರಂಭ
ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಮೊದಲ ಚಿರತೆ ಸಫಾರಿ ಶೀಘ್ರದಲ್ಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 50 ಎಕರೆ ಪ್ರದೇಶದಲ್ಲಿ ಬರಲಿದೆ. ಬನ್ನೇರುಘಟ್ಟವು ಅತಿ ಹೆಚ್ಚು ಚಿರತೆಗಳನ್ನು ಹೊಂದಿದ್ದು, ಲಭ್ಯವಿರುವ ಸ್ಥಳವನ್ನು ಸಫಾರಿಗೆ ಬಳಸಿಕೊಳ್ಳಲು ಆಡಳಿತವು ವ್ಯಾಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
Published: 10th January 2022 09:16 AM | Last Updated: 10th January 2022 03:13 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಮೊದಲ ಚಿರತೆ ಸಫಾರಿ ಶೀಘ್ರದಲ್ಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 50 ಎಕರೆ ಪ್ರದೇಶದಲ್ಲಿ ಬರಲಿದೆ. ಬನ್ನೇರುಘಟ್ಟವು ಅತಿ ಹೆಚ್ಚು ಚಿರತೆಗಳನ್ನು ಹೊಂದಿದ್ದು, ಲಭ್ಯವಿರುವ ಸ್ಥಳವನ್ನು ಸಫಾರಿಗೆ ಬಳಸಿಕೊಳ್ಳಲು ಆಡಳಿತವು ವ್ಯಾಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಚಿರತೆ ಸಫಾರಿಗಾಗಿ ಮೀಸಲಿಟ್ಟ ಪ್ರದೇಶ ಸ್ಲಾತ್ ಬೇರ್ ಸಫಾರಿ ಮತ್ತು ರಕ್ಷಣಾ ಕೇಂದ್ರಕ್ಕಿಂತ ಭಿನ್ನವಾಗಿದೆ. ಮಹಾರಾಷ್ಟ್ರದ ಬಾಳಾಸಾಹೇಬ್ ಠಾಕ್ರೆ ಗೊರೆವಾಡ ಅಂತರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್ನಲ್ಲಿ ಚಿರತೆಗಳು ಹೇಗೆ ನೆಲೆಸಿವೆ ಎಂಬುದನ್ನು ಅಧ್ಯಯನ ಮಾಡಲು ಬನ್ನೇರುಘಟ್ಟದಿಂದ ತಂಡವನ್ನು ಕಳುಹಿಸಲಾಗಿದೆ.
ತಂತಿ ಬೇಲಿಗಳು ಮತ್ತು ಗೋಡೆಗಳ ಎತ್ತರವನ್ನು ಮಾತ್ರ ನಾವು ಹೆಚ್ಚಿಸುವುದಿಲ್ಲ. ಚಿರತೆಗಳು ಪರಾರಿಯಾದಾಗ ಅವುಗಳನ್ನು ಹುಡುಕಲು ಸುಲಭವಾಗುವಂತೆ ರೇಡಿಯೊ ಕಾಲರ್ ಕೆಲಸವನ್ನು ಮಾಡುತ್ತಿರುವುದಾಗಿ ಹಿರಿಯ ಬಿಬಿಪಿ ಅಧಿಕಾರಿಯೊಬ್ಬರು ತಿಳಿಸಿದರು.
ಚಿರತೆಗಳು ಬಸ್ ಮತ್ತು ಜೀಪ್ ಗಳು, ಜನರನ್ನು ಕಂಡಾಗ ಯಾವ ರೀತಿಯಲ್ಲಿ ವರ್ತಿಸುತ್ತವೆ ಎಂಬುದನ್ನು ತಿಳಿಯಲು 15 ದಿನಗಳ ಪ್ರಾಯೋಗಿಕ ಅಧ್ಯಯನ ಮಾಡಲು ಯೋಚಿಸಲಾಗಿದೆ. ಹುಲಿ, ಸಿಂಹ ಸಫಾರಿ ಇದ್ದರೂ ಚಿರತೆಗಳ ವರ್ತನೆ ಭಿನ್ನವಾಗಿರುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಇಲ್ಲಿಯವರೆಗೂ ಮೃಗಾಲಯಕ್ಕೆ ಭೇಟಿ ನೀಡುವವರು ಚಿರತೆಗಳನ್ನು ಆವರಣಗಳಲ್ಲಿ ನೋಡುತ್ತಿದ್ದರು ಎಂದು ಅವರು ಹೇಳಿದರು.
ಇದನ್ನೂ ಓದಿ: ಬನ್ನೇರುಘಟ್ಟ ಸಫಾರಿ ಇನ್ನೂ ದುಬಾರಿ: ಜನವರಿ 1 ರಿಂದ ದರ ಪರಿಷ್ಕರಣೆ ಅನ್ವಯ
ಇನ್ನೊಂದು ತಿಂಗಳಲ್ಲಿ ಚಿರತೆ ಸಫಾರಿ ತೆರೆಯಲು ಯೋಜಿಸಲಾಗಿದೆ. ಆದರೆ, ಪ್ರಸ್ತುತದಲ್ಲಿನ ಕೋವಿಡ್-19 ಸಾಂಕ್ರಾಮಿಕ ಮತ್ತು ಇನ್ನಿತರ ಕಾರಣಗಳಿಂದ ವಿಳಂಬವಾಗಿದೆ. ವಿವರವಾದ ಪ್ರಯೋಗ ಕೈಗೊಳ್ಳಬೇಕಾದ ಅಗತ್ಯವೂ ಇದೆ. ಬನ್ನೇರುಘಟ್ಟದಲ್ಲಿ ಪ್ರಸ್ತುತ 39 ಚಿರತೆಗಳಿವೆ. ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ನಿಯಮಗಳ ಪ್ರಕಾರ, ಸೆರೆಯಲ್ಲಿ ಜನಿಸಿದ ಅಥವಾ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಬರುವ ಪ್ರಾಣಿಗಳನ್ನು ಮೃಗಾಲಯಗಳಲ್ಲಿ ಪ್ರದರ್ಶಿಸಬಹುದು. ರಕ್ಷಿಸಲ್ಪಟ್ಟ ಚಿರತೆಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಡಬಾರದು ಎಂದು ಪಾರ್ಕ್ ಕಾರ್ಯನಿರ್ವಾಹಕ ನಿರ್ದೇಶಕ ವನಶ್ರಿ ವಿಪಿನ್ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಚಿರತೆಗಳ ನಿರ್ವಹಣೆ ಅಂದುಕೊಂಡಷ್ಟು ಸುಲಭವಲ್ಲ. ವಿಬ್ ಗಯಾರ್ ಶಾಲೆಯಲ್ಲಿ ಸಿಕ್ಕಿಬಿದ್ದ ಕಾಡು ಚಿರತೆಯೊಂದು 2016ರಲ್ಲಿ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದು ಇನ್ನೂ ನೆನಪಿನಲ್ಲಿದೆ.ಚಿರತೆಗಳು ಮತ್ತು ಸಫಾರಿಗೆ ಹೋಗುವ ನಾಗರಿಕರು ಸುರಕ್ಷಿತವಾಗಿರಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ನಾವು ನೋಡುತ್ತಿದ್ದೇವೆ. ಚಿರತೆಗಳು ದೂರ ಸರಿಯುವ ನಿದರ್ಶನಗಳನ್ನು ನಾವು ಬಯಸುವುದಿಲ್ಲ ಮತ್ತು ತಪ್ಪಿಸಿಕೊಳ್ಳಲು ವಾಹನಗಳನ್ನು ತೋರಿಸುವುದಿಲ್ಲ ಅಥವಾ ಜಿಗಿಯುವುದಿಲ್ಲ ಅಥವಾ ಸಂಯೋಗಕ್ಕಾಗಿ ಹೆಣ್ಣು ಹುಡುಕಲು ಇನ್ನೊಂದು ಬದಿಯಲ್ಲಿ ಹತ್ತುವುದಿಲ್ಲ, ಏಕೆಂದರೆ ಸಫಾರಿಗೆ ಪ್ರಸ್ತಾಪಿಸಲಾದ ಪ್ರದೇಶವು ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರದಲ್ಲಿದೆ ಎಂದು ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಅಧಿಕಾರಿ ಹೇಳಿದರು.