ಕರ್ನಾಟಕದಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 60 ಸಾವಿರ, ಐಸಿಯುಗೆ ದಾಖಲಾದವರು ಕೇವಲ 117 ರೋಗಿಗಳು!

ರಾಜ್ಯದಲ್ಲಿನ ಕೋವಿಡ್-19 ಸಕ್ರಿಯ ಕೇಸುಗಳನ್ನು ನೋಡಿದರೆ ಡಿಸೆಂಬರ್ ಅಂತ್ಯದಿಂದ ಹೆಚ್ಚಾಗುತ್ತಿದ್ದರೂ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಅದರಲ್ಲೂ ಐಸಿಯುಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ.

Published: 12th January 2022 02:09 PM  |   Last Updated: 12th January 2022 02:40 PM   |  A+A-


A health worker administers booster dose to a beneficiary in Bengaluru.

ಹಿರಿಯ ವ್ಯಕ್ತಿಯೊಬ್ಬರಿಗೆ ಬೂಸ್ಟರ್ ಡೋಸ್ ನೀಡುತ್ತಿರುವುದು

The New Indian Express

ಬೆಂಗಳೂರು: ರಾಜ್ಯದಲ್ಲಿನ ಕೋವಿಡ್-19 ಸಕ್ರಿಯ ಕೇಸುಗಳನ್ನು ನೋಡಿದರೆ ಡಿಸೆಂಬರ್ ಅಂತ್ಯದಿಂದ ಹೆಚ್ಚಾಗುತ್ತಿದ್ದರೂ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಅದರಲ್ಲೂ ಐಸಿಯುಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ.

ಆರೋಗ್ಯ ಇಲಾಖೆಯಿಂದ ಮೊನ್ನೆ ಜನವರಿ 10ರಂದು ಸಿಕ್ಕಿರುವ ಅಂಕಿಅಂಶ ಪ್ರಕಾರ, ಐಸಿಯುನಲ್ಲಿರುವ ಕೋವಿಡ್ ಸೋಂಕಿತರ ಸಂಖ್ಯೆ 117 ಆಗಿದ್ದು, ಅದರ ಪ್ರಮಾಣ ಶೇಕಡಾ 0.19ರಷ್ಟಿದೆ. ಆ ದಿನ ರಾಜ್ಯದಲ್ಲಿನ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ ಒಟ್ಟು 60 ಸಾವಿರದ 148 ಆಗಿತ್ತು.

ಯಾವ ಜಿಲ್ಲೆಯಲ್ಲಿ ಎಷ್ಟು ರೋಗಿಗಳು ಐಸಿಯುನಲ್ಲಿ: ಬೆಂಗಳೂರಿನಲ್ಲಿ 77, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ ಮತ್ತು ಕೊಡಗಿನಲ್ಲಿ ತಲಾ ಒಬ್ಬರು, ದಕ್ಷಿಣ ಕನ್ನಡದಲ್ಲಿ 15 ರೋಗಿಗಳು, ಮಂಡ್ಯ ಮತ್ತು ಮೈಸೂರಿನಲ್ಲಿ ತಲಾ ಇಬ್ಬರು ರೋಗಿಗಳು, ತುಮಕೂರಿನಲ್ಲಿ ಮೂರು ರೋಗಿಗಳು, ಉಡುಪಿಯಲ್ಲಿ 9 ರೋಗಿಗಳು ಮತ್ತು ಉತ್ತರ ಕನ್ನಡದಲ್ಲಿ 5 ಕೋವಿಡ್ ಸೋಂಕಿತರಿದ್ದಾರೆ.

ಇದನ್ನೂ ಓದಿ: ಕೋವಿಡ್ ಹೋರಾಟದಲ್ಲಿ ಸರ್ಕಾರ ತನ್ನ ಕೈಲಾದಷ್ಟು ಮಾಡುತ್ತಿದ್ದು, ಜನರೂ ಕೂಡ ಜವಾಬ್ದಾರಿಯುತವಾಗಿ ನಡೆಯಬೇಕಿದೆ: ಬಿಬಿಎಂಪಿ

ಕೋವಿಡ್ -19 ರೋಗಿಗಳು ಸೋಂಕಿನಿಂದಲ್ಲ ಆದರೆ ಇತರ ಕಾರಣಗಳಿಗಾಗಿ ಐಸಿಯುಗಳಲ್ಲಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. "ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ರೋಗಿಗಳು, ಸೆಪ್ಟಿಕ್ ಆಘಾತದ ಜೊತೆಗೆ ಪಿತ್ತಕೋಶದಲ್ಲಿ ಕೀವು ಹೊಂದಿರುವ ರೋಗಿಗಳು, ಮೆದುಳಿನಲ್ಲಿ ಹೆಪ್ಪುಗಟ್ಟುವಿಕೆ ಹೊಂದಿರುವ ರೋಗಿಗಳನ್ನು ದಾಖಲಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಬಂದು ದಾಖಲಾದ ರೋಗಿಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿರುತ್ತದೆ. ಕೋವಿಡ್ -19 ರೋಗಲಕ್ಷಣಗಳಿಂದ ಉಂಟಾದ ಆಮ್ಲಜನಕದ ಅಗತ್ಯತೆಯಿಂದಾಗಿ ಅವರು ಐಸಿಯುನಲ್ಲಿಲ್ಲ ಎಂದು ರಾಜ್ಯದ ಟೆಲಿ-ಐಸಿಯು ತಂಡದ ಭಾಗವಾಗಿರುವ ಮಣಿಪಾಲ್ ಆಸ್ಪತ್ರೆಗಳ ತೀವ್ರ ನಿಗಾ ಘಟಕದ ಸಲಹೆಗಾರ ಡಾ ಪ್ರದೀಪ್ ರಂಗಪ್ಪ ಹೇಳುತ್ತಾರೆ.

ಆದಾಗ್ಯೂ, ಜನರಲ್ಲಿ ಆತಂಕದಿಂದ ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್ ಗಳಲ್ಲಿ ದಾಖಲಾತಿ ಹೆಚ್ಚುತ್ತಿದೆ. ಜನವರಿ 9 ರಿಂದ ಕೋವಿಡ್ ವಾರ್ ರೂಮ್ ಹಂಚಿಕೊಂಡ ಅಂಕಿಅಂಶ ಪ್ರಕಾರ, 49,602 ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ, 95.64 ಶೇಕಡಾ ರೋಗಿಗಳು (47,440) ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಕೇವಲ 4.35 ಶೇಕಡಾ ರೋಗಿಗಳು (2,162) ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗಳಲ್ಲಿರುವ ರೋಗಿಗಳಲ್ಲಿ 1,912 ಮಂದಿ ಆಮ್ಲಜನಕದ ಅಗತ್ಯವಿಲ್ಲದೆ, 178 ಮಂದಿ ಆಮ್ಲಜನಕದ ಅಗತ್ಯವನ್ನು ಹೊಂದಿದ್ದಾರೆ, 53 ಮಂದಿ ಐಸಿಯು ಬೆಡ್‌ಗಳಲ್ಲಿ ಮತ್ತು 19 ಮಂದಿ ವೆಂಟಿಲೇಟರ್‌ ಅವಲಂಬಿತರಾಗಿದ್ದಾರೆ.

ಇದನ್ನೂ ಓದಿ: ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ದರ ನಿಗದಿ ಮಾಡಿದ ರಾಜ್ಯ ಸರ್ಕಾರ

ಕೋವಿಡ್ ರೋಗಿಗಳು ಹೃದಯ ಸಮಸ್ಯೆ, ಶ್ವಾಸಕೋಶದ ಕಾಯಿಲೆ, ಪಾರ್ಶ್ವವಾಯು, ಆಘಾತ, ಇತರ ಸೋಂಕಿನಿಂದಾಗಿ ಐಸಿಯುನಲ್ಲಿ ದಾಖಲಾಗುತ್ತಿದ್ದಾರೆ ಎಂದು ಅಪೊಲೊ ವಿಶೇಷ ಆಸ್ಪತ್ರೆಯ ಡಾ ರವೀಂದ್ರ ಮೆಹ್ತಾ ಹೇಳುತ್ತಾರೆ.

ಹೆಚ್ಚುತ್ತಿರುವ ಸೋಂಕಿನ ಸಂಖ್ಯೆ, ಸಾವಿನ ಪ್ರಮಾಣ ಕಡಿಮೆ: ಕರ್ನಾಟಕದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಮೊದಲ ಎರಡು ಅಲೆಗಳಿಗಿಂತ ಭಿನ್ನವಾಗಿ, ಓಮಿಕ್ರಾನ್‌ನೊಂದಿಗಿನ ಮೂರನೇ ಅಲೆಯು ಪ್ರಬಲವಾದ ರೂಪಾಂತರವಾಗಿ ಹೊರಹೊಮ್ಮುತ್ತಿದೆ, ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿದ್ದರೂ ಮರಣ ಪ್ರಮಾಣವು ಕುಸಿಯುತ್ತದೆ. ಎರಡನೇ ಅಲೆಯಲ್ಲಿ ಶೇಕಡಾ 8 ರಿಂದ ಶೇಕಡಾ 5.28 ಕ್ಕೆ ಇಳಿದ ಪಾಸಿಟಿವ್ ದರವು ಆರು ತಿಂಗಳ ನಂತರ ಮೊದಲ ಬಾರಿಗೆ ಜನವರಿ 9 ರಂದು ಶೇಕಡಾ 5.29 ಕ್ಕೆ ಮತ್ತು ನಿನ್ನೆ ಮಂಗಳವಾರ ಮತ್ತೆ 5.30 ಶೇಕಡಾಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಮೂರನೇ ಅಲೆ ಪ್ರಾರಂಭವಾದಾಗ ಜನವರಿ 1 ರಂದು ಶೇಕಡಾ 1.27 ರಷ್ಟಿದ್ದ ಮರಣ ಪ್ರಮಾಣವು ಜನವರಿ 6 ರಂದು ಶೇಕಡಾ 1.26 ಕ್ಕೆ ಮತ್ತು ಮಂಗಳವಾರ ಶೇಕಡಾ 1.24 ಕ್ಕೆ ಇಳಿಕೆಯಾಗಿದೆ.


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp