ಬ್ಯಾಂಕುಗಳಿಗೆ ವಂಚನೆ: ಇಡಿಯಿಂದ ಚೀನಾ ಸಂಸ್ಥೆಯ ನಿರ್ದೇಶಕ ಬಂಧನ
ಬ್ಯಾಂಕುಗಳಿಗೆ ವಂಚನೆ ಪ್ರಕರಣವೊಂದರಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) 2002ಯಡಿ ಹೋವೆಲೈ ಜಿನ್ಸು, ಹಾಂಗ್ ಕಾಂಗ್, ಎಸ್ಎಆರ್ ಚೀನಾ ಲಿಮಿಟೆಡ್ ನ ನಿರ್ದೇಶಕ ಅನುಪ್ ನಾಗರಾಜ್ ಎಂಬಾತನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
Published: 13th January 2022 03:36 PM | Last Updated: 13th January 2022 03:36 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬ್ಯಾಂಕುಗಳಿಗೆ ವಂಚನೆ ಪ್ರಕರಣವೊಂದರಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) 2002ಯಡಿ ಹೋವೆಲೈ ಜಿನ್ಸು, ಹಾಂಗ್ ಕಾಂಗ್, ಎಸ್ಎಆರ್ ಚೀನಾ ಲಿಮಿಟೆಡ್ ನ ನಿರ್ದೇಶಕ ಅನುಪ್ ನಾಗರಾಜ್ ಎಂಬಾತನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಜನವರಿ 18, 2009ರಲ್ಲಿ ದಾಖಲಿಸಿದ್ದ ಎಫ್ ಐಆರ್ ಆದಾರದಲ್ಲಿ ಹಣ ವರ್ಗಾವಣೆ ಕುರಿತು ಇಡಿ ತನಿಖೆ ಆರಂಭಿಸಿತ್ತು. ಆರೋಪಿ ನಾಗರಾಜನನ್ನು ಜನವರಿ 17ರವರೆಗೆ ನ್ಯಾಯಾಂಗ ಕಸ್ಟಡಿಗೆ ವಿಶೇಷ ಪಿಎಂಎಲ್ ಕೋರ್ಟ್ ಕಳುಹಿಸಿದೆ.
ಇಡಿ 2019 ಮಾರ್ಟ್ ನಲ್ಲಿ ಪಿಎಂಎಲ್ ಎ ಕೋರ್ಟ್ ನಲ್ಲಿ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ನಾಗರಾಜ್ ಹೆಸರನ್ನು ಉಲ್ಲೇಖಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಸಿಬಿಐ ಕೂಡಾ ಅನುಪ್ ನಾಗರಾಜ್ ನನ್ನು ಬಂಧಿಸಿತ್ತು. ನಂತರ ಆತ ಜಾಮೀನಿನ ಮೇರೆಗೆ ಹೊರಗೆ ಬಂದಿದ್ದ.
ಇಡಿ ಅನುಪ್ ನಾಗರಾಜ್ ಬಂಧನಕ್ಕೂ ಮುನ್ನ ಹಾರಾಷ್ಟ್ರ. ಪಂಜಾಬ್, ನವದೆಹಲಿ, ಗುಜರಾತ್, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಸುಮಾರು 185. 67 ಕೋಟಿ ರೂ. ಮೌಲ್ಯದ ಕಂಪನಿಯ ಆಸ್ತಿಯನ್ನು ಪಿಎಂಎಲ್ ಎ ಕಾಯ್ದೆಯಡಿ ವಶಕ್ಕೆ ಪಡೆದಿತ್ತು.