ಬೆಂಗಳೂರು: ರಾತ್ರಿ ವೇಳೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಬ್ರೇಕ್!
ಜನವರಿ 16ರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರ ವರೆಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ನೈಸ್ ಆಡಳಿತ ಮಂಡಳಿ ತಿಳಿಸಿದೆ.
Published: 13th January 2022 04:12 PM | Last Updated: 13th January 2022 05:14 PM | A+A A-

ನೈಸ್ ರಸ್ತೆ
ಬೆಂಗಳೂರು: ಜನವರಿ 16ರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರ ವರೆಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ನೈಸ್ ಆಡಳಿತ ಮಂಡಳಿ ತಿಳಿಸಿದೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತರ ಸೂಚನೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು ನಿರ್ಬಂಧವು ಮುಂದಿನ ಆದೇಶದ ವರೆಗೆ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
2-wheelers no longer permitted in NICE road during night hours from 10pm-5am from Jan 16@NewIndianXpress @XpressBengaluru @KannadaPrabha @santwana99 @NammaBengaluroo @ECityRising @blrcitytraffic @MysoreRoad @citizensforblr @CitizenKamran @_kanakapuraroad @KSRSA_GoK pic.twitter.com/C0CnMVpqUt
— Bosky Khanna (@BoskyKhanna) January 13, 2022
ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸವಾರರ ಮೇಲೆ ದಾಳಿಗಳು ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗಿತ್ತು. ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡಿ ನಗ, ನಾಣ್ಯ ದೋಚುತ್ತಿದ್ದರು.