ವೈಕುಂಠ ಏಕಾದಶಿ: ವೆಂಕಟೇಶ್ವರ ದೇಗುಲಗಳಲ್ಲಿ ವಿಶೇಷ ಆಚರಣೆ, ಕೊರೋನಾ ನಿಯಮ ಮಧ್ಯೆ ಸೀಮಿತ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನ
ವೈಕುಂಠ ಏಕಾದಶಿ (Vaikunta Ekadashi) ಹಿನ್ನೆಲೆಯಲ್ಲಿ ರಾಜ್ಯದ ವೆಂಕಟೇಶ್ವರ, ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ನಡೆಯುತ್ತಿವೆ. ಕೊರೋನಾ-ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರ ಮಧ್ಯೆ ವೈಕುಂಠ ಏಕಾದಶಿ ಸಂಭ್ರಮ ಹೆಚ್ಚಾಗಿದೆ.
Published: 13th January 2022 10:17 AM | Last Updated: 13th January 2022 01:51 PM | A+A A-

ವೈಯಾಲಿಕಾವಲ್ ನ ತಿರುಪತಿ ತಿರುಮಲ ದೇವಸ್ಥಾನ
ಬೆಂಗಳೂರು: ವೈಕುಂಠ ಏಕಾದಶಿ (Vaikunta Ekadashi) ಹಿನ್ನೆಲೆಯಲ್ಲಿ ರಾಜ್ಯದ ವೆಂಕಟೇಶ್ವರ, ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ಹಾಗೂ ಇತರ ದೇವಾಲಯಗಳಲ್ಲಿ ಕೂಡ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಕೊರೋನಾ-ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರ ಮಧ್ಯೆ ವೈಕುಂಠ ಏಕಾದಶಿ ಸಂಭ್ರಮ ಹೆಚ್ಚಾಗಿದೆ.
ಬೆಂಗಳೂರಿನ ವೈಯಾಲಿಕಾವಲ್ನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ. ಮಧ್ಯರಾತ್ರಿ 1:30 ಕ್ಕೆ ದೇಗುಲವನ್ನು ತೆರೆಯಲಾಗಿದೆ. ಸುಪ್ರಭಾತ, ತೋಮಾಲ ಸೇವಾ, 3 ಗಂಟೆಗೆ ಮೊದಲ ನೈವೇದ್ಯ, 4 ಗಂಟೆಗೆ ಅಸ್ತನಾಮ್ ಪೂಜೆ, ವೈಕುಂಠ ದ್ವಾರ ಪೂಜೆ , 5 ಗಂಟೆಗೆ ವೈಕುಂಠ ದ್ವಾರ ತೆರೆಯಲಾಗಿದೆ. ವೈಯ್ಯಾಲಿಕಾವಲ್ನ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ವೈಕುಂಠ ಏಕಾದಶಿಯ ಶುಭದಿನದಂದು ಕುಟುಂಬ ಸಮೇತ ಕನ್ನಿಪಾಕಮ್ನ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಭಗವಂತನ ಅನುಗ್ರಹಕ್ಕೆ ಪಾತ್ರರಾದೆವು.
— V. Somanna (@VSOMANNA_BJP) January 13, 2022
ಸರ್ವಸಿದ್ಧಿ ಪ್ರದಾಯಕನಾದ ವಿನಾಯಕನು ನಾಡಿನ ಜನರ ಸರ್ವ ವಿಘ್ನಗಳನ್ನೂ ನಿವಾರಿಸಿ, ಸನ್ಮಂಗಲವನ್ನುಂಟು ಮಾಡಲಿ ಎಂದು ಪ್ರಾರ್ಥಿಸಲಾಯಿತು. pic.twitter.com/XHm9u0gUAF
ಭಕ್ತರ ಆಗಮನ: ವೆಂಕಟೇಶ್ವರನ ಸನ್ನಿಧಾನಕ್ಕೆ ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ಕೋವಿಡ್ ನಿಯಮದ ಪ್ರಕಾರ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಒಂದು ಸಲ 50 ಜನರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ದೇವಾಲಯಗಳು ಭಕ್ತರಲ್ಲಿ ಮನವಿ ಮಾಡಿವೆ.
Pontiff of Raghavendra Swamy Math Mantralaya performing Mangalarati to the idol of Shri Srinivasa Devaru ( installed and worshipped by Shri Raghavendra Swamiji at old Mantralaya)on the occasion of Vaikuntha Ekadashi on Thursday. pic.twitter.com/hZJKhcNyCd
— Ramkrishna Badseshi (@Ramkrishna_TNIE) January 13, 2022