ಬೆಂಗಳೂರಿನಲ್ಲಿ ರಸ್ತೆ ಅಪಘಾತ, ಸಾವಿನ ಸಂಖ್ಯೆಯಲ್ಲಿ ಇಳಿಕೆ
ಬೆಂಗಳೂರು ಸಂಚಾರಿ ಪೊಲೀಸರ ವರದಿಯೊಂದರ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
Published: 15th January 2022 11:01 AM | Last Updated: 15th January 2022 11:01 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರ ವರದಿಯೊಂದರ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಶೇಕಡಾ 14.88 ರಷ್ಟು ಸಾವಿನ ಪ್ರಕರಣಗಳಲ್ಲಿ ಆರೋಪಿಗಳು ಚಾಲನಾ ಪರವಾನಗಿ ಹೊಂದಿಲ್ಲದಿದ್ದರೆ ಕುಡಿದು ವಾಹನ ಚಾಲನೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಿದೆ. 2020ರಲ್ಲಿ 632 ಅಪಘಾತಗಳಲ್ಲಿ 655 ಮಂದಿ ಸಾವನ್ನಪ್ಪಿದ್ದರೆ, 2019ರಲ್ಲಿ 810 ಅಪಘಾತಗಳಲ್ಲಿ 832 ಜನರು ಸಾವನ್ನಪ್ಪಿದ್ದಾರೆ. 2021ರಲ್ಲಿ 632 ಅಪಘಾತಗಳಲ್ಲಿ 655 ಜನರು ಮೃತಪಟ್ಟಿದ್ದಾರೆ.
ಮಾರಣಾಂತಿಕ ಅಪಘಾತಗಳ ಸಂಖ್ಯೆ ಕಡಿಮೆಯಾದರೂ, ಸಾವಿನ ಅನುಪಾತ ಒಂದೇ ಆಗಿಲ್ಲ. ಅಪಘಾತಗಳ ಪರಿಣಾಮ ಹೆಚ್ಚಿರುವುದನ್ನು ಇದು ಬಹಿರಂಗಪಡಿಸುತ್ತದೆ ಎಂದು ವರದಿ ಹೇಳಿದೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ. 2019, 2020 ಮತ್ತು 2021ರಲ್ಲಿ ಕ್ರಮವಾಗಿ 273, 164 ಮತ್ತು 161 ಪಾದಚಾರಿಗಳು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಲಾರಿಗಳ ನಂತರ ದ್ವಿಚಕ್ರ ವಾಹನಗಳು ಪಾದಚಾರಿಗಳನ್ನು ಹೆಚ್ಚಾಗಿ ಬಲಿತೆಗೆದುಕೊಂಡಿದೆ. ಭಾರೀ ಗಾತ್ರದ ವಾಹನಗಳ ಚಾಲಕರು ಹೆಚ್ಚಿನ ಅಪಘಾತಗಳಲ್ಲಿ ಭಾಗಿಯಾಗಿದ್ದಾರೆ. ನಂತರ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಚಾಲಕರಿದ್ದಾರೆ. ಬಹುತೇಕ ಆರೋಪಿಗಳು 21 ಮತ್ತು 40 ವರ್ಷದ ನಡುವಿನವರಾಗಿದ್ದಾರೆ.
ಬಹುತೇಕ ಅಪಘಾತಗಳು ಬೆಳಗ್ಗೆ 9 ಗಂಟೆ ಮತ್ತು ಮಧ್ಯಾಹ್ನ 12 ಗಂಟೆ, ಸಂಜೆ 6 ಗಂಟೆ ಮತ್ತು 9 ಗಂಟೆ ಮತ್ತು ಮಧ್ಯಾಹ್ನ ರಾತ್ರಿ 12 ಗಂಟೆ ಮತ್ತು ಬೆಳಗ್ಗೆ 6 ಗಂಟೆ ನಡುವಣ ಸಂಭವಿಸಿರುವ ಮಾರಣಾಂತಿಕ ಅಪಘಾತಗಳಾಗಿವೆ. ವಾಹನ ಚಾಲಕರ ನಿರ್ಲಕ್ಷ್ಯತೆ, ರಾತ್ರಿ ವೇಳೆ ಮಂದ ಬೆಳಕು, ಮಿತಿ ಮೀರಿದ ವೇಗದ ಕಾರಣಗಳಿಂದಾಗಿ ಇಂತಹ ಅಪಘಾತಗಳಾಗಿವೆ.
ವೀಕೆಂಡ್ ವೇಳೆಯಲ್ಲಿ ಹೆಚ್ಚಿನ ಅಪಘಾತಗಳು, ಸಾವುಗಳು ಸಂಭವಿಸಿವೆ. ಅಪಘಾತ ಸಂಭವಿಸಿದ ತಕ್ಷಣ ಅಥವಾ ಒಂದು ಗಂಟೆಯೊಳಗೆ ಆಸ್ಪತ್ರೆಗೆ ತಲುಪಿದರೂ ಅಪಘಾತಕ್ಕೊಳಗಾದವರ ಸಾವುಗಳು ನಗರವು ಹೆಚ್ಚು ಪರಿಣಾಮ ಬೀರುವ ಅಪಘಾತಗಳಿಗೆ ಸಾಕ್ಷಿಯಾಗಿದೆ ಎಂದು ಸೂಚಿಸುತ್ತದೆ.