ಮಾರಾಟ ನಿರ್ಬಂಧಕ್ಕೆ ರಸ್ತೆ ತುಂಬ ಕೊತ್ತಂಬರಿ ಸೊಪ್ಪನ್ನು ಎಸೆದು ಆಕ್ರೋಶ ಹೊರಹಾಕಿದ ತರಕಾರಿ ವ್ಯಾಪಾರಿ, ವಿಡಿಯೊ ವೈರಲ್
ಕೊರೋನಾ ನಿರ್ಬಂಧ, ವೀಕೆಂಡ್ ಕರ್ಫ್ಯೂ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ದಿನನಿತ್ಯದ ದುಡಿಮೆಗೆ ಪೆಟ್ಟು ಬಿದ್ದಿದೆ. ಕಳೆದೆರಡು ವರ್ಷಗಳಿಂದ ಕೊರೋನಾ ಸೋಂಕಿನ ಕಾರಣದಿಂದ ಸಮಾಜದ ಒಂದು ವರ್ಗದ ಜನ ಹಿಂದೆಂದೂ ಕಾಣದ ರೀತಿ ಕಷ್ಟ ಅನುಭವಿಸುತ್ತಿದ್ದಾರೆ.
Published: 16th January 2022 11:59 AM | Last Updated: 16th January 2022 11:59 AM | A+A A-

ವಿಜಯಪುರದಲ್ಲಿ ರಸ್ತೆಗೆ ಕೊತ್ತಂಬರಿ ಸೊಪ್ಪು ಎಸೆದ
ವಿಜಯಪುರ: ಕೊರೋನಾ ನಿರ್ಬಂಧ, ವೀಕೆಂಡ್ ಕರ್ಫ್ಯೂ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ದಿನನಿತ್ಯದ ದುಡಿಮೆಗೆ ಪೆಟ್ಟು ಬಿದ್ದಿದೆ. ಕಳೆದೆರಡು ವರ್ಷಗಳಿಂದ ಕೊರೋನಾ ಸೋಂಕಿನ ಕಾರಣದಿಂದ ಸಮಾಜದ ಒಂದು ವರ್ಗದ ಜನ ಹಿಂದೆಂದೂ ಕಾಣದ ರೀತಿ ಕಷ್ಟ ಅನುಭವಿಸುತ್ತಿದ್ದಾರೆ.
ಇಂದು ಭಾನುವಾರ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿವೆ. ಇದರಿಂದ ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ, ತಾವು ಬೆಳೆದ ಬೆಳೆಯನ್ನು ಏನು ಮಾಡಬೇಕೆಂದು ವಿಜಯಪುರದಲ್ಲಿ ಇಂದು ತರಕಾರಿ ಮಾರಾಟಗೊರರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಸಿಟಿಯ ಸ್ಯಾಟಲೈಟ್ ಬಸ್ ನಿಲ್ದಾಣದ ಹತ್ತಿರ ತಾವು ತಂದಿದ್ದ ಕೊತ್ತಂಬರಿ ಸೊಪ್ಪುಗಳನ್ನು ರಸ್ತೆ ತುಂಬೆಲ್ಲಾ ಚೆಲ್ಲಿ ಎಸೆದು ತರಕಾರಿ ಮಾರಾಟಗಾರ ತನ್ನ ಸಿಟ್ಟನ್ನು ಹೊರಹಾಕಿದ್ದು ಹೀಗೆ:
Angered vegetable vendor seen throwing the coriander after @CityVijayapura restricted vendors from selling their vegetables near Satellite Bus-Stand in #Vijayapura. @XpressBengaluru @KannadaPrabha @naushadbijapur @DcVijayapur @VIJAYAPURPOLICE @CMofKarnataka @ShashikalaJolle pic.twitter.com/xdE3XoFvGx
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) January 16, 2022