ಸಂಕ್ರಾಂತಿ ಹಬ್ಬದ ಅಂಗವಾಗಿ ಕಿಚ್ಚು ಹಾಯಿಸುವ ಸ್ಪರ್ಧೆ: ಹೆಸರಘಟ್ಟದಲ್ಲಿ ಬೆಂಕಿಗೆ ಬಿದ್ದ ಬಾಲಕನಿಗೆ ಗಂಭೀರ ಗಾಯ
ಸಂಕ್ರಾಂತಿ ಹಬ್ಬದ ಅಂಗವಾಗಿ ಕಿಚ್ಚು ಹಾಯಿಸುವ ಸ್ಪರ್ಧೆಯ ಸಂದರ್ಭದಲ್ಲಿ ಬಾಲಕನೊಬ್ಬ ಬೆಂಕಿಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟದಲ್ಲಿ ಸಂಭವಿಸಿದೆ.
Published: 16th January 2022 10:19 AM | Last Updated: 16th January 2022 10:19 AM | A+A A-

ಸಂಕ್ರಾಂತಿ ವೇಳೆ ಕಿಚ್ಚು ಹಾಯಿಸುವ ಸಾಂದರ್ಭಿಕ ಚಿತ್ರ
ಬೆಂಗಳೂರು: ಸಂಕ್ರಾಂತಿ ಹಬ್ಬದ ಅಂಗವಾಗಿ ಕಿಚ್ಚು ಹಾಯಿಸುವ ಸ್ಪರ್ಧೆಯ ಸಂದರ್ಭದಲ್ಲಿ ಬಾಲಕನೊಬ್ಬ ಬೆಂಕಿಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟದಲ್ಲಿ ಸಂಭವಿಸಿದೆ.
ವೀಕೆಂಡ್ ಕರ್ಫ್ಯೂ ಇದ್ದರೂ ಅದನ್ನು ಉಲ್ಲಂಘಿಸಿ ತಾಲ್ಲೂಕಿನ ಜನಪ್ರತಿನಿಧಿಯೊಬ್ಬರ ನೇತೃತ್ವದಲ್ಲಿ ಕಿಚ್ಚು ಹಾಯಿಸುವ ಸ್ಪರ್ಧೆ ನಡೆದಿದ್ದು ಈ ಸಮಯದಲ್ಲಿ ದುರ್ಘಟನೆ ನಡೆದಿದೆ. ಬೆಂಕಿ ಹಾಯಿಸಿದ ನಂತರ ಜಾನುವಾರಗಳನ್ನು ಓಡಿಸುವುದು, ಗ್ರಾಮಸ್ಥರು ಓಡುವುದು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಊರುಗಳಲ್ಲಿ, ಹಳ್ಳಿಗಳಲ್ಲಿ ನಡೆಯುತ್ತವೆ.
ಇಂದು ಅದೇ ರೀತಿ ನಡೆದಿದ್ದು. ಕಿಚ್ಚು ಹಾಯಿಸಿದ ನಂತರ ಪುಟ್ಟ ಪುಟ್ಟ ಬಾಲಕರು ಕಿಚ್ಚನ್ನು ದಾಟಿ ಹಾರುವಾಗ ಬಾಲಕನೊಬ್ಬ ಇನ್ನೊಬ್ಬ ಬಾಲಕ ಅಡ್ಡ ಸಿಕ್ಕಿ ಎಡವಿ ಬೆಂಕಿಗೆ ಬಿದ್ದಿದ್ದಾನೆ. ಇದರಿಂದ ಬಾಲಕ ಬೆಂಕಿಯ ಕೆನ್ನಾಲಿಗೆಗೆ ಬೆಂದು ಹೋಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.