ಅಥಣಿಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋವಿಡ್ ಪಾಸಿಟಿವ್: ಆತಂಕದಲ್ಲಿ ಪೋಷಕರು
ಅಥಣಿಯಲ್ಲಿ ಶನಿವಾರ 100 ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಬೆಳವಣಿಗೆಯು ಜಿಲ್ಲಾಧಿಕಾರಿಗಳು ಹಾಗೂ ಪೋಷಕರರಲ್ಲಿ ಆತಂಕವನ್ನು ಸೃಷ್ಟಿಸಿದೆ.
Published: 16th January 2022 07:37 AM | Last Updated: 16th January 2022 07:37 AM | A+A A-

ಸಂಗ್ರಹ ಚಿತ್ರ
ಅಥಣಿ, ಬೆಳಗಾವಿ: ಅಥಣಿಯಲ್ಲಿ ಶನಿವಾರ 100 ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಬೆಳವಣಿಗೆಯು ಜಿಲ್ಲಾಧಿಕಾರಿಗಳು ಹಾಗೂ ಪೋಷಕರರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಸೋಂಕು ಪತ್ತೆಯಾಗಿರುವ ಹೆಚ್ಚಿನ ಮಕ್ಕಳು ಗ್ರಾಮೀಣ ಪ್ರದೇಶದವೇ ಆಗಿದ್ದು, ಎಲ್ಲರಲ್ಲೂ ಸೌಮ್ಯ ರೋಗ ಲಕ್ಷಣಗಳು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಸೋಂಕಿತ ಮಕ್ಕಳು ಇದೀಗ ಕ್ವಾರಂಟೈನ್ ಗೊಳಗಾಗಿದ್ದಾರೆ.
ಯಕ್ಕುಂಚಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹದಿನೈದು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಬ್ಬರಿಗೆ ಪಾಸಿಟಿವ್ ಬಂದಿದೆ. ಅಥಣಿಯ ಹೊರವಲಯದಲ್ಲಿರುವ ಬಾಣಜವಾಡ ಎಜುಕೇಶನ್ ಸೊಸೈಟಿಗಳ ವಸತಿ ಪ್ರಾಥಮಿಕ, ಇಂಟರ್ ಮೀಡಿಯೇಟ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 62 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಹಲ್ಯಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇಬ್ಬರು, ಉಗಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏಳು, ಶಿವನೂರು ಪಿಎಚ್‌ಸಿಯಲ್ಲಿ ಮೂವರು ಮತ್ತು ಅನಂತಪುರ ಪಿಎಚ್‌ಸಿಯಲ್ಲಿ 10 ವಿದ್ಯಾರ್ಥಿಗಳು ಸೋಂಕಿಗೊಳಗಾಗಿದ್ದಾರೆ.
ಈ ನಡುವೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಸಗೌಡ ಕಾಗೆ ಹಾಗೂ ಆರೋಗ್ಯ ಸಿಬ್ಬಂದಿ ಶಾಲಾ-ಕಾಲೇಜಿಗೆ ಭೇಟಿ ನೀಡಿದ್ದು, ಕ್ಯಾಂಪಸ್‌ಗಳನ್ನು ಸ್ಯಾನಿಟೈಸ್ ಮಾಡಿ ಸೀಲ್ ಮಾಡಿದರು.
ಇದರಂತೆ ಸೋಂಕಿತ ಎಲ್ಲಾ ಮಕ್ಕಳ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಲಿದ್ದು, ಅವರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಕಾಗೆ ಮಾಹಿತಿ ನೀಡಿದರು.
“ಸೋಮವಾರ ಶಾಲೆಗಳನ್ನು ಪುನರಾರಂಭಿಸಿದರೆ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಕನಿಷ್ಠ ಇನ್ನೊಂದು ಅಥವಾ ಎರಡು ವಾರಗಳ ಕಾಲ ಶಾಲೆಗಳನ್ನು ಬಂದ್ ಮಾಡಬೇಕೆಂದು ಪೋಷಕರೊಬ್ಬರು ಹೇಳಿದ್ದಾರೆ.