ತುಮಕೂರಿನಲ್ಲಿ ಕೊರೋನಾ ಅಬ್ಬರ: ಒಂದೇ ದಿನ 1,326 ಮಂದಿಗೆ ಸೋಂಕು
ತುಮಕೂರಿನಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 1,326 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಪಾಸಿಟಿವಿಟಿ ದರ ಶೇ.19.2ಕ್ಕೆ ಏರಿಕೆಯಾಗಿದೆ.
Published: 16th January 2022 08:33 AM | Last Updated: 16th January 2022 08:33 AM | A+A A-

ಸಂಗ್ರಹ ಚಿತ್ರ
ತುಮಕೂರು: ತುಮಕೂರಿನಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 1,326 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಪಾಸಿಟಿವಿಟಿ ದರ ಶೇ.19.2ಕ್ಕೆ ಏರಿಕೆಯಾಗಿದೆ.
ಶನಿವಾರ ಒಂದೇ ದಿನ 1,326 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 125514ಕ್ಕೆ ಏರಿಕೆಯಾಗಿದೆ. ಅಲ್ಲದೆ, ನಿನ್ನೆ 21 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೆ 120326 ಮಂದಿ ಗುಣಮುಖರಾಗಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 4045 ಸಕ್ರಿಯ ಪ್ರಕರಣಗಳಿದ್ದು ತುರ್ತು ನಿಗಾ ಘಟಕದಲ್ಲಿ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ಸಾವುಗಳು ಅಥವಾ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಸಹಾಯಕ ಕಮಿಷನರ್ ಅಜಯ್, ಜಿಲ್ಲಾ ಪರಿಷತ್ ಸಿಇಒ ವಿದ್ಯಾಕುಮಾರ್ ಸೇರಿದಂತೆ ಸೋಂಕಿಗೆ ಒಳಗಾದ ಉನ್ನತ ಅಧಿಕಾರಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.
“ಜಿಲ್ಲೆಯಲ್ಲಿ ದಿನಕ್ಕೆ 10,000 ಪರೀಕ್ಷೆಗಳ ಗುರಿ ಹೊಂದಲಾಗಿದ್ದು, ನೆರೆಯ ಜಿಲ್ಲೆಗಳಿಗೆ ಅದರಲ್ಲೂ ಬೆಂಗಳೂರು ನಗರಕ್ಕೆ ಹೆಚ್ಚೆಚ್ಚು ಜನರು ಸಂಚಾರ ನಡೆಸುತ್ತಿರುವುದರಿಂದ ಸೋಂಕು ಹೆಚ್ಚಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.