ನನ್ನ ಜಿಮ್ ಟ್ರೈನರ್ ಯಾವಾಗಲು ಪೀಡಿಸುತ್ತಿರುತ್ತಾನೆ: ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ಹೀರೋಯಿನ್ ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಕನ್ನಡದಿಂದ ತೆಲುಗಿಗೆ ಬಂದ ರಶ್ಮಿಕಾ ಸೌತ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
Published: 17th January 2022 06:49 PM | Last Updated: 17th January 2022 06:49 PM | A+A A-

ರಶ್ಮಿಕಾ ಮಂದಣ್ಣ
ಹೈದರಬಾದ್: ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ಹೀರೋಯಿನ್ ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಕನ್ನಡದಿಂದ ತೆಲುಗಿಗೆ ಬಂದ ರಶ್ಮಿಕಾ ಸೌತ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಇದರ ಜೊತೆಗೆ, ರಶ್ಮಿಕ ನ್ಯಾಷನಲ್ ಕ್ರಶ್ 2019 ರ ಅಪರೂಪದ ಮನ್ನಣೆಯನ್ನು ಸಹ ಪಡೆದಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದರಲ್ಲೂ ಸಹ ಅವರು ಸಕ್ರಿಯರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಅಭಿಮಾನಿಗಳ ದೊಡ್ಡ ದಂಡೇ ಇದೆ. ಸಮಂತಾ ಮತ್ತು ರಾಕುಲ್ ರಂತೆ, ರಶ್ಮಿಕಾ ಆಗಾಗ್ಗೆ ತಮ್ಮ ಜಿಮ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ರಶ್ಮಿ ತನ್ನ ಜಿಮ್ ಟ್ರೈನರ್ ಬಗ್ಗೆ ಆಸಕ್ತಿದಾಯಕ ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ: ಅಲ್ಲು ಅರ್ಜುನ್ ಜೊತೆಗಿನ ಪುಷ್ಟ ಸಿನಿಮಾ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ
ಕುಲದೀಪ್ ಜಿಮ್ನಲ್ಲಿ ತರಬೇತಿಯ ಸಮಯದಲ್ಲಿ ನನಗೆ ವರ್ಕೌಟ್ಗಳನ್ನು ಸರಿಯಾಗಿ ಮಾಡುವಂತೆ ಪೀಡಿಸಿ ಒತ್ತಾಯ ಹೇರುತ್ತಿದ್ದರು. ಈಗ ನಾನು ನಟಿಸಿರುವ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡಿಗೆ ಸ್ಟೆಪ್ಸ್ ಹಾಕ್ತಾರೆ ಅಂತ ಗೊತ್ತಾಗಿದ್ರೆ ಆ ಸ್ಟೆಪ್ಸ್ ನಾನೇ ಹೇಳಿಕೊಟ್ಟು ಮತ್ತೇ ಮತ್ತೇ ಮಾಡುವಂತೆ ಪೀಡಿಸಿ ಸೇಡು ತೀರಿಸಿಕೊಳ್ಳುತ್ತಿದ್ದೆ ಎಂದು ರಶ್ಮಿಕ ತನ್ನ ತರಬೇತುದಾರನ ವೀಡಿಯೋಗೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ನ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ರಶ್ಮಿಕಾ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಪುಷ್ಪಾ ಜನ ಮೆಚ್ಚುಗೆ ಗಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುಷ್ಪದಲ್ಲಿ ರಶ್ಮಿ-ಬನ್ನಿ ಸಾಂಗ್ “ರಾರ ಸಾಮಿ” ಹಾಡಿಗೆ ಚಿತ್ರ ರಸಿಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಹಾಡು ದೇಶಗಳನ್ನೂ ದಾಟಿದೆ. ರಾರ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋಗಳನ್ನು ವಿದೇಶಿಗರೂ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ಜಿಮ್ ಟ್ರೈನರ್ ಕುಲದೀಪ್ ಸೇಥಿ ಕೂಡ ಸಾಮಿ ಸಾಮಿ ಹಾಡಿಗೆ ಸ್ಟೆಪ್ಸ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.