
ಸಾಂಕೇತಿಕ ಚಿತ್ರ
ಬೆಂಗಳೂರು: ಕೇಂದ್ರದ ಮೇಲ್ಛಾವಣಿ ಸೌರ ಯೋಜನೆಯ ಮೂಲಕ ಪಡೆಯಲಾಗುವ ಸಬ್ಸಿಡಿಗೆ ಹಲವರು ಬೆಸ್ಕಾಮ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಗಳು ಇತ್ಯರ್ಥವಾಗದೇ ಹಾಗೆಯೇ ಉಳಿದಿವೆ.
ಇದರಿಂದಾಗಿ ಗೃಹಬಳಕೆಗಾಗಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಎಂದಿನ ವಿದ್ಯುತ್ ಬಿಲ್ ನ್ನು ಕಡಿಮೆ ಮಾಡುವ ಮಂದಿಗೆ ಶೇ.40 ರಷ್ಟು ಸಬ್ಸಿಡಿ ಹಣ ಕೈತಪ್ಪಿ ಹೋಗುತ್ತಿದೆ.
ಸಬ್ಸಿಡಿಗಾಗಿ ಸಲ್ಲಿಸಿದ್ದ ಕನಿಷ್ಟ 1,200 ಬೆಸ್ಕಾಮ್ ಎದುರಿದ್ದು, ಇನ್ನಷ್ಟೇ ಇತ್ಯರ್ಥಗೊಳ್ಳಬೇಕಿದೆ, ಈ ಪೈಕಿ ಮೂರನೇ ಒಂದರಷ್ಟು ಅರ್ಜಿಗಳನ್ನು ವಾಪಸ್ ಪಡೆಯಲಾಗಿದೆ.
ಸಬ್ಸಿಡಿಯ ಹೊರತಾಗಿ, ನವೀಕರಿಸಬಹುದಾದ ಇಂಧನ ಸಚಿವಾಲಯದ ಸೌರ ಗೃಹ ಯೋಜನೆಯ ಅಡಿಯಲ್ಲಿ ಮನೆಯ ಬಳಕೆಗೆ ಸಾಕಾಗಿ ಉಳಿಯುವ ವಿದ್ಯುತ್ ನ್ನು ಬೆಸ್ಕಾಂ ಗೆ ಮಾರಾಟ ಮಾಡಬಹುದಾಗಿದೆ.
ಕಳೆದ 2 ವರ್ಷಗಳಲ್ಲಿ ಯೋಜನೆಯ ಬೆಳವಣಿಗೆ ಶೋಚನೀಯ ಪರಿಸ್ಥಿತಿಯಲ್ಲಿದೆ. ಕೊಚು ಶಂಕರ್ ಎಂಬ ವ್ಯಕ್ತಿ ಸೌರ ವಿದ್ಯುತ್ ಉತ್ಪಾದನೆ, ಬಳಕೆಯಲ್ಲಿ ಆಸಕ್ತಿ ಹೊಂದಿದ್ದು ಈ ಬಗ್ಗೆ ಮಾತನಾಡಿದ್ದು, 3 ಕಿಲೋ ವ್ಯಾಟ್ ವಿದ್ಯುತ್ ಸೋಲಾರ್ ಜನರೇಟರ್ ಅಳವಡಿಸಲು ಯೋಜಿಸಿದ್ದೆ. 1.5 ಲಕ್ಷ ರೂಪಾಯಿ ಇದಕ್ಕಾಗಿ ವೆಚ್ಚವಾಗುತ್ತದೆ. ಸಬ್ಸಿಡಿ ಸಹಿತ ಇದಕ್ಕೆ 80,000 ರೂಪಾಯಿ ಖರ್ಚಾಗುತ್ತಿತ್ತು. ಇದರಿಂದಾಗಿ 3,000 ರೂಪಾಯಿ ವಿದ್ಯುತ್ ಬಿಲ್ ನ್ನು ಉಳಿಸಬಹುದಿತ್ತು ಎಂದು ಹೇಳಿದ್ದಾರೆ. ಆದರೆ ಇವೆಲ್ಲದಕ್ಕೂ ಬೆಸ್ಕಾಮ್ ನಲ್ಲಿ ಪಟ್ಟಿ ಮಾಡಿರುವ ಏಜೆನ್ಸಿಗಳ ಮೂಲಕವೇ ಕಾಮಗಾರಿಗಳನ್ನು ಮಾಡಿಸಬೇಕಾಗುತ್ತದೆ. ಆದ್ದರಿಂದ ಶಂಕರ್ ಅವರು 2020 ರಿಂದಲೂ ಕಾಯುತ್ತಿದ್ದಾರೆ. ನಾನಷ್ಟೇ ಅಲ್ಲ ಹಲವು ಮಂದಿ ನೆರೆಹೊರೆಯವರು ಸಬ್ಸಿಡಿ ಸಹಿತ ಸೌರ ವಿದ್ಯುತ್ ಉದ್ಪಾದಕ ಘಟಕಗಳನ್ನು ಅಳವಡಿಸಿಕೊಳ್ಳಲು ಕಾಯುತ್ತಿದ್ದಾರೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಬೆಸ್ಕಾಮ್ ಎಂಡಿ ಪಿ ರಾಜೇಂದ್ರ ಚೋಳನ್, ಬೆಸ್ಕಾಮ್ ಏಜೆನ್ಸಿ ನವೀಕರಿಸಬಹುದಾದ ಇಂಧದ ಪೈಕಿ ಶೇ.11.5 ರಷ್ಟಿದ್ದ ಗುರಿಯನ್ನು ದಾಟಿದ್ದು ಇದಕ್ಕಿಂತಲೂ ಹೆಚ್ಚಿನ ಏನನ್ನು ಖರೀದಿಸಿದರೂ ಅದು ನಮಗೆ ಹೊರೆಯಾಗಲಿದೆ. ಆದ್ದರಿಂದ ನಾವು ಕೇಂದ್ರದ ಜೊತೆ ಚರ್ಚೆ ಮಾಡಬೇಕೆಂದು ಹೇಳಿದ್ದಾರೆ.
ಅನುಮತಿ ನೀಡಲಾಗಿರುವ 50 ಮೆಗಾ ವ್ಯಾಟ್ ನ ಪೈಕಿ 3.5 ಮೆಗಾ ವ್ಯಾಟ್ ರಷ್ಟಿರುವ ಮೊದಲ ಹಂತದ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಕೆಲವೇ ದಿನಗಳಲ್ಲಿ ವೆಂಡರ್ ಗಳು ಕಾಮಗಾರಿ ಪ್ರಾರಂಭಿಸುತ್ತಾರೆ. ಎರಡನೇ ಹಂತದಲ್ಲಿ 50 ಮೆಗಾ ವ್ಯಾಟ್ ಟೆಂಡರ್ ಗಳಿಗೆ ಟೆಂಡರ್ ಕರೆಯಲಾಗುತ್ತದೆ ಎಂದು ರಾಜೇಂದ್ರ ಚೋಳನ್ ಮಾಹಿತಿ ನೀಡಿದ್ದಾರೆ.
ಸಬ್ಸಿಡಿ ಅವಧಿ ಮುಗಿಯುವ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಂಎನ್ಆರ್ ಇ ಅದನ್ನು ವಿಸ್ತರಿಸುವುದಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.