ಹೈಕೋರ್ಟ್ ನ್ಯಾಯಮೂರ್ತಿ ಗನ್ಮ್ಯಾನ್ ಪಿಸ್ತೂಲ್ ಕಳವು: 10 ಸಜೀವ ಗುಂಡುಗಳ ಸಮೇತ 9 ಎಂಎಂ ಗನ್ ನಾಪತ್ತೆ
ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಗನ್ಮ್ಯಾನ್ 10 ಜೀವಂತ ಗುಂಡುಗಳ ಸಮೇತ 9 ಎಂಎಂ ಪಿಸ್ತೂಲ್ ಕಳೆದುಕೊಂಡಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Published: 17th January 2022 08:28 AM | Last Updated: 17th January 2022 09:54 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಅವರ ಗನ್ಮ್ಯಾನ್ 10 ಜೀವಂತ ಗುಂಡುಗಳ ಸಮೇತ 9 ಎಂಎಂ ಪಿಸ್ತೂಲ್ ಕಳೆದುಕೊಂಡಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಮೂಲದ ಬಾಪೂಜಿನಗರದಲ್ಲಿ ನೆಲೆಸಿದ್ದ ಕಲ್ಲಯ್ಯ ಮಠಪತಿ(42) ಪಿಸ್ತೂಲ್ ಕಳೆದುಕೊಂಡವರು.ಭಾರತೀಯ ಸೇನೆಯಲ್ಲಿ 17 ವರ್ಷಗಳ ಸೇವೆ ಸಲ್ಲಿಸಿದ ಕಲ್ಲಯ್ಯ ಮಠಪತಿ, 2019ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು, ಸಿಎಆರ್ ಪಶ್ಚಿಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2020ರಿಂದ ಹೈಕೋರ್ಟ್ ನ್ಯಾಯಮೂರ್ತಿ ಅವರಿಗೆ ಗನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಡಿ.25ರಂದು ನ್ಯಾಯಮೂರ್ತಿಗೆ ಕರೆ ಮಾಡಿ ಊರಿಗೆ ಹೋಗಬೇಕಿರುವ ಕಾರಣ ಎರಡು ದಿನಗಳ ರಜೆ ಬೇಕೆಂದು ಕೇಳಿದ್ದರು. ಅದಕ್ಕೆ ನ್ಯಾಯಮೂರ್ತಿ ಒಪ್ಪಿಗೆ ನೀಡಿದ್ದರು. ಅದೇ ದಿನ ಸಂಜೆ 7 ಗಂಟೆಗೆ ಮನೆಯಲ್ಲೇ ಮದ್ಯಪಾನ ಮಾಡಿ 9 ಎಂ.ಎಂ. ಪಿಸ್ತೂಲ್, 10 ಜೀವಂತ ಗುಂಡುಗಳು ಹಾಗೂ ಬಟ್ಟೆಯನ್ನು ಬ್ಯಾಗ್ನಲ್ಲಿ ಹಾಕಿ ಕಲ್ಲಯ್ಯ ಮೆಜೆಸ್ಟಿಕ್ಗೆ ಬಂದಿದ್ದರು.
ಊರಿಗೆ ತೆರಳಲು ಬಸ್ ಟಿಕೆಟ್ ಬುಕ್ ಮಾಡುವ ಸಂಬಂಧ ಟಿ.ಬಿ.ರಸ್ತೆಯಲ್ಲಿರುವ ಟ್ರಾವೆಲ್ಸ್ ಕಚೇರಿ ಬಳಿ ಬ್ಯಾಗ್ ಕೆಳಗೆ ಇಟ್ಟು ಟಿಕೆಟ್ ಮಾಡಿಸಿ ವಾಪಸ್ ಬಂದು ನೋಡಿದಾಗ ಬ್ಯಾಗ್ ಇರಲಿಲ್ಲ. ಸುತ್ತಮುತ್ತ ಹುಡುಕಿದರೂ ಪ್ರಯೋಜನವಾಗಿರಲಿಲ್ಲ. ಈ ಕುರಿತು ಉಪ್ಪಾರಪೇಟೆ ಠಾಣೆಗೆ ಕಲ್ಲಯ್ಯ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೆಜೆಸ್ಟಿಕ್ ಬಳಿ ಹುಡುಕಾಡಿದರೂ ಬ್ಯಾಗ್ ಪತ್ತೆಯಾಗಿಲ್ಲಎಂದು ತಿಳಿದುಬಂದಿದೆ.
ತನಿಖೆಯ ಆರಂಭದಿಂದಲೂ, ಕಲ್ಲಯ್ಯ ಮಠಪತಿ ಅವರ ಹೇಳಿಕೆಗಳಲ್ಲಿ ಯಾವುದೇ ಸ್ಥಿರತೆ ಇಲ್ಲ. ಅವರು ಪಿಸ್ತೂಲ್ ಮತ್ತು ಗುಂಡುಗಳನ್ನು ನಿಖರವಾಗಿ ಎಲ್ಲಿ ಕಳೆದುಕೊಂಡರು ಎಂದು ಖಚಿತವಾಗಿಲ್ಲ. ಟ್ರಾವೆಲ್ ಏಜೆನ್ಸಿಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಯಾವುದೇ ಸುಳಿವುಗಳು ಕಂಡುಬಂದಿಲ್ಲ" ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.
ಅವರು ತನ್ನ ಮನೆಯಿಂದ ಮೆಜೆಸ್ಟಿಕ್ಗೆ ಬಸ್ನಲ್ಲಿ ಹೋಗಿದ್ದೆ ಎಂದು ಹೇಳಿಕೊಂಡಿದ್ದಾನೆ, ಪಿಸ್ತೂಲ್ ಅನ್ನು ಬಸ್ನಲ್ಲಿ ಕಳೆದುಕೊಂಡಿರುವುದು ತನಿಖೆಯ ಸಮಯದಲ್ಲಿ ಹೊರಬಿದ್ದಿದೆ. ಆತ ಬೇರೆಲ್ಲೋ ಪಿಸ್ತೂಲ್ ಕಳೆದುಕೊಂಡಿದ್ದಾನೆ ಎಂದು ತೋರುತ್ತದೆ, ಆದರೆ ಎಲ್ಲಿ ಎಂದು ಖಚಿತವಾಗಿ ತಿಳಿದಿಲ್ಲ, ಈ ಸಂಬಂಧ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಠಪತಿ ವಿರುದ್ಧ ತನಿಖೆ ಆರಂಭಿಸಲಾಗಿದೆ. ಅವರನ್ನು ಸೇವೆಯಿಂದ ಅಮಾನತು ಮಾಡಿಲ್ಲ. ನಿಯಮದ ಪ್ರಕಾರ, ಒಬ್ಬರು ರಜೆಯ ಮೇಲೆ ಪ್ರಧಾನ ಕಚೇರಿಯಿಂದ ಹೊರಗೆ ಹೋಗುತ್ತಿದ್ದರೆ ಆಯಾ ಘಟಕದಲ್ಲಿ ಬಂದೂಕನ್ನು ಡೆಪಾಸಿಟ್ ಮಾಡಿ ಪತ್ರವನ್ನು ಪಡೆಯಬೇಕು. ಆದರೆ ಅವರು ಹಾಗೆ ಮಾಡಿಲ್ಲ,