ರೇರಾ ಕಾಯ್ದೆ ಅಸಮರ್ಪಕ ಅನುಷ್ಠಾನ: ಮನೆ ಖರೀದಿದಾರರಿಂದ ವರ್ಚುವಲ್ ಮೂಲಕ ಪ್ರತಿಭಟನೆ
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ಕೆ-ರೇರಾ) ಅಸಮರ್ಪಕ ಅನುಷ್ಠಾನದ ವಿರುದ್ಧ ಕರ್ನಾಟಕ ಗೃಹ ಖರೀದಿದಾರರ ವೇದಿಕೆ ಭಾನುವಾರ ಆನ್ಲೈನ್ ಮೂಲಕ ಪ್ರತಿಭಟನೆ ನಡೆಸಿತು.
Published: 17th January 2022 11:46 AM | Last Updated: 17th January 2022 01:39 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ಕೆ-ರೇರಾ) ಅಸಮರ್ಪಕ ಅನುಷ್ಠಾನದ ವಿರುದ್ಧ ಕರ್ನಾಟಕ ಗೃಹ ಖರೀದಿದಾರರ ವೇದಿಕೆ ಭಾನುವಾರ ಆನ್ಲೈನ್ ಮೂಲಕ ಪ್ರತಿಭಟನೆ ನಡೆಸಿತು.
ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಹಲವಾರು ಮನೆ ಖರೀದಿದಾರರು, ವರ್ಚುವಲ್ ಮೂಲಕ ನಡೆದ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಿಲ್ಡರ್ಗಳು, ಕೆ-ರೆರಾ ಕ್ರಮದ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಧ್ವನಿಗೂಡಿಸಿದರು.
ಕಳಪೆ ಗುಣಮಟ್ಟದ ಕಟ್ಟಡ, ಮೂಲಸೌಕರ್ಯ ಕೊರತೆ, ಪ್ರಮಾಣಪತ್ರದಲ್ಲಿ ವಂಚನೆ ಮತ್ತು ವರ್ಷಗಳ ಹಿಂದೆ ಬಾಕಿ ಇರುವ ಯೋಜನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಹಲವಾರು ಮನೆ ಖರೀದಿದಾರರು ಬಿಲ್ಡರ್ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಮಸ್ಯೆಗಳು ಈಡೇರದ ಕಾರಣ ಹಲವು ಖರೀದಿದಾರರು ಮನೆಗಳಿಗೆ ಪಾವತಿಸಲು ತೆಗೆದುಕೊಂಡ ಸಾಲವನ್ನು ಪಾವತಿಸಲು ಸಾಧ್ಯವಾಗದೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕೆಲವರು ಮನೆಯಿಲ್ಲದ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಕೇಂದ್ರದ ವಸತಿ ಯೋಜನೆಯಿಂದ ಕರ್ನಾಟಕದ 18 ಲಕ್ಷ ಜನರಿಗೆ ಪ್ರಯೋಜನ!
ಇಂತಹವರು ಈಗಾಗಲೇ K-RERA ನಲ್ಲಿ ಹಲವಾರು ವರ್ಷಗಳ ಹಿಂದೆಯೇ ಪ್ರಕರಣಗಳನ್ನು ದಾಖಲಿಸಿದ್ದರೂ, ಅವರಿಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಅತೃಪ್ತ ಮನೆ ಖರೀದಿದಾರರ ಸಮೂಹದಿಂದ ವೇದಿಕೆಯೊಂದು ರೂಪುಗೊಂಡಿದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಖರೀದಿದಾರರು ಅನೇಕ ಬಾರಿ RERA ಅನ್ನು ಸಂಪರ್ಕಿಸಿದೆ, ಈ ಕುರಿತು ಮನವಿಪತ್ರಗಳನ್ನೂ ಸಲ್ಲಿಸಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿರುವುದು ಅವರಲ್ಲಿ ಬೇಸರವನ್ನು ತರಿಸಿದೆ.
ಕಾಯ್ದೆ ತಿದ್ದುಪಡಿ ಮಾಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ವೇದಿಕೆಯು ಮುಖ್ಯಮಂತ್ರಿಗಳ ಕಚೇರಿಯನ್ನು ಸಂಪರ್ಕಿಸಿದ್ದು, ಪ್ರಧಾನಿ ಕಚೇರಿ ಹಾಗೂ ವಸತಿ ಸಚಿವ ವಿ ಸೋಮಣ್ಣ ಮತ್ತು ಗೃಹ ಸಚಿವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದೆ. ಇದಷ್ಟೇ ಅಲ್ಲದೆ, ನಿನ್ನೆ ವರ್ಚುವಲ್ ಮೂಲಕ ಪ್ರತಿಭಟನೆಯನ್ನೂ ನಡೆಸಿ, ಧ್ವನಿ ಎತ್ತಿದೆ.