5 ಸಾವಿರ ಅಲ್ಲ, ಕೇವಲ 250 ರೂ. 'ಓಮಿಶೂರ್' ಟೆಸ್ಟ್ ಕಿಟ್ ಮೂಲಕ ಓಮಿಕ್ರಾನ್ ಪತ್ತೆ ಹಚ್ಚಬಹುದು!
ಓಮಿಶೂರ್ ಟೆಸ್ಟಿಂಗ್ ಕಿಟ್ ಮೂಲಕ ಓಮಿಕ್ರಾನ್ ಸೋಂಕನ್ನು ಪತ್ತೆ ಮಾಡಬಹುದಾಗಿದ್ದು ಈ ಕಿಟ್ ಗಳನ್ನು ಖರೀದಿಸುವಂತೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Published: 17th January 2022 03:42 PM | Last Updated: 17th January 2022 04:42 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಓಮಿಶೂರ್ ಟೆಸ್ಟಿಂಗ್ ಕಿಟ್ ಮೂಲಕ ಓಮಿಕ್ರಾನ್ ಸೋಂಕನ್ನು ಪತ್ತೆ ಮಾಡಬಹುದಾಗಿದ್ದು ಈ ಕಿಟ್ ಗಳನ್ನು ಖರೀದಿಸುವಂತೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಕಿಟ್ RT-PCR ನ ಆವೃತ್ತಿಯಾಗಿದ್ದು, ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಮತ್ತು ಓಮಿಕ್ರಾನ್ ನಂತಹ SARS Covi-2 ವೈರಸ್‌ನ ಎಲ್ಲಾ ರೂಪಾಂತರಗಳನ್ನು ಪತ್ತೆ ಮಾಡುತ್ತದೆ. ಸಮಿತಿಯ ಸದಸ್ಯರು ಕಿಟ್ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚು ಕೇಂದ್ರೀಕರಿಸುತ್ತದೆ. WGS ಲ್ಯಾಬ್‌ಗಳ ಮೇಲಿನ ಹೊರೆ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಶೇಕಡ 100ರಲ್ಲಿ ಶೇಕಡ 99.25ರಷ್ಟು ನಿರ್ದಿಷ್ಟವಾಗಿ ಓಮಿಕ್ರಾನ್ ಪತ್ತೆಯಾಗುತ್ತದೆ. ಇತರ ಎಲ್ಲಾ ರೂಪಾಂತರಗಳು ಸುಮಾರು ಶೇಖಡ 100ರಷ್ಟು ಪತ್ತೆಯಾಗಲಿದೆ. ಈ ಕಿಟ್ ಅನ್ನು ಐಸಿಎಂಆರ್ ಅನುಮೋದಿಸಿದ್ದು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿ ತಿಳಿಸಿದೆ.
ವಿಶ್ವದಲ್ಲಿಯೇ ಮೊದಲ ಬಾರಿಗೆ ಎಸ್ ಜೀನ್ ಡ್ರಾಪ್ಔಟ್ ಮತ್ತು ಎಸ್ ಜೀನ್ ನಿರ್ದಿಷ್ಟ ರೂಪಾಂತರ ವರ್ಧನೆ ಎರಡನ್ನೂ ಕಿಟ್ ಹೊಂದಿದೆ ಎಂದು ಸಮಿತಿ ಹೇಳಿದೆ. ಆದ್ದರಿಂದ, ಇದು ಓಮಿಕ್ರಾನ್ "ಸ್ಟೆಲ್ತ್ ವೆರಿಯಂಟ್" ಸ್ಪಾಟರ್ ಆಗಿದೆ. BA.1, BA.2, ಮತ್ತು BA.3 ನಂತಹ ಒಮಿಕ್ರಾನ್‌ನ ಎಲ್ಲಾ ಉಪ-ವಂಶಾವಳಿಗಳನ್ನು ಪತ್ತೆ ಮಾಡುತ್ತದೆ. ಅಸ್ತಿತ್ವದಲ್ಲಿರುವ ಎಸ್ ಜೀನ್ ಡ್ರಾಪ್‌ಔಟ್ ಕಿಟ್‌ಗಳ ಮೇಲೆ ಇದು ಸ್ಪಷ್ಟ ಪ್ರಯೋಜನವಾಗಿದೆ. ಏಕೆಂದರೆ Omisure ಕಿಟ್ ಇತರ ಕಿಟ್‌ಗಳ ಆಧಾರವಾಗಿರುವ 69-70 ಅಮೈನೋ ಆಮ್ಲ ಅಳಿಸುವಿಕೆಯನ್ನು ಹೊರತುಪಡಿಸಿ ಸಂಪೂರ್ಣವಾಗಿ ವಿಭಿನ್ನ ಪ್ರದೇಶಗಳಲ್ಲಿ ಬಳಸಬಹುದಾಗಿದೆ.
ಇತರ ಪರೀಕ್ಷಾ ಕಿಟ್‌ಗಳಿಗೆ ಹೋಲಿಸಿದರೆ ಪ್ರತಿ ಪರೀಕ್ಷೆಯ ಅವಧಿಯು ಕಡಿಮೆಯಾಗಿದೆ. ಮಾದರಿ ಸಂಗ್ರಹದಿಂದ ಫಲಿತಾಂಶದ ಉತ್ಪಾದನೆಗೆ ಇದು ಸುಮಾರು 2.5 ಗಂಟೆ ಮಾತ್ರ ತೆಗೆದುಕೊಳ್ಳುತ್ತದೆ. ಈ ಕಿಟ್‌ನ ಬೆಲೆ 250 ರೂ ಆಗಿದ್ದು, ಕರ್ನಾಟಕವು ಸುಮಾರು ಐದು ಲಕ್ಷ ಪರೀಕ್ಷೆಗಳನ್ನು ಸಂಗ್ರಹಿಸುತ್ತಿದ್ದರೆ, ಪ್ರತಿ ಪರೀಕ್ಷೆಗೆ ಸುಮಾರು 200 ರೂ. ಹಾಗೂ ತೆರಿಗೆ ವೆಚ್ಚವಾಗುತ್ತವೆ ಎಂದು ಸಮಿತಿ ಸದಸ್ಯರು ಹೇಳಿದರು.
ಪ್ರತಿ ದಿನ ಓಮಿಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ ಪತ್ತೆ ಹಚ್ಚಲಾಗುತ್ತಿದೆ.
ಆದರೆ ಜಿನೋಮ್ ಸೀಕ್ವೆನ್ಸಿಂಗ್ ವಿಷಯದಲ್ಲಿ ಭಾರತವು ಇನ್ನೂ ಹಿಂದುಳಿದಿದೆ. ಆರ್‌ಟಿಪಿಸಿಆರ್ ಪರೀಕ್ಷೆ ಮೂಲಕ ಓಮಿಕ್ರಾನ್ ಅನ್ನು ಪತ್ತೆ ಹಚ್ಚಬಹುದಾಗಿದ್ದು, ಜೀನೋಮ್ ಟೆಸ್ಟ್ ಗಿಂತ ಕಡಿಮೆ ವೆಚ್ಚ ಮಾಡಬಹುದಾಗಿದೆ. ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ 5000 ರೂ.ವರೆಗೆ ಖರ್ಚು ತಗಲುತ್ತಿದ್ದರೆ, ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೇವಲ 250 ರೂಪಾಯಿಯಲ್ಲಿ ಓಮಿಕ್ರಾನ್ ಪತ್ತೆ ಮಾಡಬಹುದಾಗಿದೆ.
ಜಿನೋಮ್ ಸೀಕ್ವೆನ್ಸಿಂಗ್ ಎಂದರೇನು?
ಜೀನೋಮ್ ಸೀಕ್ವೆನ್ಸಿಂಗ್ ಅನ್ನೋದು ಮಾನವನ ಸಂಪೂರ್ಣ ಅನುವಂಶಿಕ ಮಾಹಿತಿ ಆಗಿದೆ. ಈ ಪರೀಕ್ಷೆಯಲ್ಲಿ ವ್ಯಕ್ತಿಯ ಆನುವಂಶಿಕ ವೈವಿಧ್ಯತೆ ಹಾಗೂ ಯಾವುದೇ ಹೊಸ ರೋಗ ಅಥವಾ ಹೊಸ ರೂಪಾಂತರದ ಬಗ್ಗೆ ತಿಳಿಕೊಳ್ಳಬಹುದಾಗಿದೆ. ಆದರೆ ಈ ಪರೀಕ್ಷೆಗಳನ್ನು ದೇಶದ ಕೆಲವೇ ರಾಜ್ಯಗಳಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯ ಜೀನೋಮ್ ಅನುಕ್ರಮವನ್ನು ಟೆಸ್ಟ್ ಮಾಡಲು ಸಾಧ್ಯವಿಲ್ಲ. ಈ ದುಬಾರಿ ಪರೀಕ್ಷೆಯನ್ನು ತಗ್ಗಿಸುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಎರಡು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಿದೆ. ಈ ರೀತಿಯಿಂದ ರೋಗ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಯ ದೇಹದಲ್ಲಿ ಎಸ್-ಜೀನ್ ಕಾಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬೇಕು. ಏಕೆಂದರೆ ಓಮಿಕ್ರಾನ್ ಸೋಂಕಿತರಲ್ಲಿ ಎಸ್-ಜೀನ್ ಕಾಣೆಯಾಗುತ್ತದೆ. ಆದರೆ ಡೆಲ್ಟಾ ರೂಪಾಂತರಿಯಲ್ಲಿ ಎಸ್-ಜೀನ್ ಇದ್ದೆ ಇರುತ್ತದೆ.
ಎಸ್-ಜೀನ್ ಕಾಣೆಯಾಗಿದ್ದರೆ ಓಮಿಕ್ರಾನ್ ಸೋಂಕಿತರಾಗಿದ್ದೀರಿ ಎಂದರ್ಥವೇ?
ಹೌದು, ಓಮಿಕ್ರಾನ್ ಅನ್ನು ಎಸ್-ಜೀನ್ ಮೂಲಕ ಮಾತ್ರ ಗುರುತಿಸಲಾಗುತ್ತಿದೆ. ಓಮಿಕ್ರಾನ್ ತಗುಲಿದಾಗ ಎಸ್-ಜೀನ್ ಇರಲ್ಲ ಎಂದು ಅನೇಕ ವಿಜ್ಞಾನಿಗಳು ಶೋಧ ಮಾಡಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಮಾದರಿಯಲ್ಲಿ S-ಜೀನ್ ಅನ್ನು ಕಳೆದುಕೊಂಡಿದ್ದರೆ ಅವರು ಓಮಿಕ್ರಾನ್ ಸೋಂಕಿತರಾಗಿದ್ದಾರೆ ಎಂದರ್ಥ.
ಎಸ್-ಜೀನ್ ಕುರಿತು WHO ಏನು ಹೇಳಿದೆ?
ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಪ್ರಕಾರ, ಓಮಿಕ್ರಾನ್ನಿಂದ ದೇಹದಲ್ಲಿ ಬಹು ರೂಪಾಂತರಗಳ ಉಪಸ್ಥಿತಿಯೇ ಎಸ್-ಜೀನ್ ಕಣ್ಮರೆಯಾಗಲು ಕಾರಣ ಎಂದು ಹೇಳಿದೆ. ಸೋಂಕಿತರಲ್ಲಿ ಎಸ್-ಜೀನ್ ಕಾಣೆಯಾಗಿದೆ ಎಂಬುದು ಓಮಿಕ್ರಾನ್ ಇರುವಿಕೆಯ ಸಂಕೇತವಾಗಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.
ಯಾವ ರಾಜ್ಯದಲ್ಲಿ ಆರ್‌ಟಿಪಿಸಿಆರ್ ಕಿಟ್‌ನೊಂದಿಗೆ ಓಮಿಕ್ರಾನ್ ಪರಿಶೀಲಿಸಲಾಗುತ್ತಿದೆ?
ಕೋವಿಡ್ ಮಾದರಿಗಳನ್ನು ಆರ್‌ಟಿ-ಪಿಸಿಆರ್ ಕಿಟ್‌ಗಳೊಂದಿಗೆ ಎರಡು ಬಾರಿ ಮಹಾರಾಷ್ಟ್ರದಲ್ಲಿ ಪರೀಕ್ಷಿಸಲಾಗುತ್ತಿದೆ. ಪರೀಕ್ಷಾ ಕಿಟ್‌ನಲ್ಲಿಯೂ ಸಹ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಿಶ್ವದೆಲ್ಲೆಡೆ ಹೊಸ ಹೊಸ ತಳಿಯ ವೈರಸ್ ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಟಿಪಿಸಿಆರ್ ನಲ್ಲಿ ಬದಲಾವಣೆ ಮಾಡಲಾಗಿದ್ದು, ಎಸ್-ಜೀನ್ ಇದೆಯೋ ಇಲ್ಲೋ ಅನ್ನೋದನ್ನು ಈ ಮೂಲಕ ಕಂಡುಹಿಡಿಯಲು ಸಾಧ್ಯವಾಗುತ್ತಿದೆ.