ಬಳ್ಳಾರಿ: ನರ್ಸಿಂಗ್ ಪರೀಕ್ಷೆ ಬರೆಯಲು ಬಂದ ಹೊರ ರಾಜ್ಯದ 68 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್
ನರ್ಸಿಂಗ್ ಪರೀಕ್ಷೆ ಬರೆಯಲು ಬಂದ 68 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ನರ್ಸಿಂಗ್ ಪರೀಕ್ಷೆ ಬರೆಯಲೆಂದು ವಿವಿಧ ರಾಜ್ಯಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದರು.
Published: 18th January 2022 01:52 PM | Last Updated: 18th January 2022 01:52 PM | A+A A-

ಬಳ್ಳಾರಿಗೆ ನರ್ಸಿಂಗ್ ವಿದ್ಯಾರ್ಥಿಗಳು ಬಂದ ಸಂದರ್ಭ
ಬಳ್ಳಾರಿ: ನರ್ಸಿಂಗ್ ಪರೀಕ್ಷೆ ಬರೆಯಲು ಬಂದ 68 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ನರ್ಸಿಂಗ್ ಪರೀಕ್ಷೆ ಬರೆಯಲೆಂದು ವಿವಿಧ ರಾಜ್ಯಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದರು.
ಹರ್ಯಾಣ, ಬಿಹಾರ, ಪಂಜಾಬ್ ಮೊದಲಾದ ರಾಜ್ಯಗಳಿಂದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕಳೆದ ಭಾನುವಾರ ಬಳ್ಳಾರಿಗೆ ಬಂದಿದ್ದರು. ರೈಲುಗಳಲ್ಲಿ ಪ್ರಯಾಣಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ನಿಲ್ದಾಣದಿಂದ ಲಾಡ್ಜ್ ಗಳತ್ತ ಗುಂಪುಗಳಲ್ಲಿ, ಮಾಸ್ಕ್ ಸರಿಯಾಗಿ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ಹೋಗುತ್ತಿದ್ದಾಗ ಪೊಲೀಸರು ತಡೆದು ವಿಚಾರಿಸಿದರು. ಕೊರೋನಾ ನೆಗೆಟಿವ್ ವರದಿ ಕೇಳಿದಾಗ ಅವರ ಬಳಿ ಇರಲಿಲ್ಲ.
ವಿದ್ಯಾರ್ಥಿಗಳು ಹಲವರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ ಇನ್ನು ಕೆಲವರು ಹಾಕಿಸಿಕೊಂಡಿರಲಿಲ್ಲ. ಸರಿಯಾದ ನೆಗೆಟಿವ್ ವರದಿ ಇರಲಿಲ್ಲ. ಪೊಲೀಸರು ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ತಿಳಿಸಿದರು. ಆಗ ಜಿಲ್ಲಾಡಳಿತ ಸಿಬ್ಬಂದಿ ವಿದ್ಯಾರ್ಥಿಗಳು ತಂಗಿದ್ದ ಲಾಡ್ಜ್ ಗೆ ತೆರಳಿ ಕೊರೋನಾ ಪರೀಕ್ಷೆ ಮಾಡಿಸಿದಾಗ ಇಂದು 68 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಕಂಡುಬಂದಿದೆ.
#JUSTIN #Ballari 68 students, who came to Ballari to write nursing exam from other states, tested #COVID19 positive. Total 400 students attended exam in various nursing colleges. @NewIndianXpress @XpressBengaluru @KannadaPrabha @santwana99 @ramupatil_TNIE @Amitsen_TNIE pic.twitter.com/UHXLVT9GT3
— @Kiran_TNIE (@KiranTNIE1) January 18, 2022
ಹೊರ ರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ನೆಗೆಟಿವ್ ಇದ್ದರೆ ಮಾತ್ರ ಲಾಡ್ಜ್ ಗಳಲ್ಲಿ ರೂಮ್ ನೀಡಬೇಕೆಂಬ ನಿಯಮವಿದೆ. ಆದರೆ ಆ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ರೂಂ ನೀಡಿದ 8 ಲಾಡ್ಜ್ ಗಳ ವಿರುದ್ಧ ತಹಶಿಲ್ದಾರ್ ರೆಹಾನ್ ಪಾಶಾ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ನರ್ಸಿಂಗ್ ಕಾಲೇಜುಗಳ ಮೇಲೆ ಕೂಡ ಪ್ರಕರಣ ದಾಖಲಿಸಲಾಗಿದೆ.