ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಕಟ್ಟಡ ದುರಸ್ತಿಗೆ ಸರ್ಕಾರದ ಬಳಿ ಹಣವಿಲ್ಲ: ಹೊಸ ಶಾಲೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ!
ಹಣದ ಕೊರತೆಯಿಂದ ರಾಜ್ಯಾದ್ಯಂತ ದುಸ್ಥಿತಿಯಲ್ಲಿರುವ ಶಾಲೆಗಳ ದುರಸ್ತಿ ಮತ್ತು ನಿರ್ವಹಣೆ ಕಾರ್ಯವನ್ನು ಸರ್ಕಾರ ಕೈಗೊಂಡಿಲ್ಲ. ಇದೇ ಸಂದರ್ಭದಲ್ಲಿ ಸರ್ಕಾರ ಶಾಲೆಗಳ ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ ಆದರೆ ನಿರ್ವಹಣೆಯಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
Published: 19th January 2022 11:25 AM | Last Updated: 19th January 2022 11:27 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಣದ ಕೊರತೆಯಿಂದ ರಾಜ್ಯಾದ್ಯಂತ ದುಸ್ಥಿತಿಯಲ್ಲಿರುವ ಶಾಲೆಗಳ ದುರಸ್ತಿ ಮತ್ತು ನಿರ್ವಹಣೆ ಕಾರ್ಯವನ್ನು ಸರ್ಕಾರ ಕೈಗೊಂಡಿಲ್ಲ. ಇದೇ ಸಂದರ್ಭದಲ್ಲಿ ಸರ್ಕಾರ ಶಾಲೆಗಳ ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ ಆದರೆ ನಿರ್ವಹಣೆಯಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಲೋಕೋಪಯೋಗಿ ಇಲಾಖೆ, ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು 756 ಕೋಟಿ ರೂಪಾಯಿ ವೆಚ್ಚದಲ್ಲಿ 3,243 ಶಾಲೆಗಳನ್ನು ಮತ್ತು 138 ಕೋಟಿ ರೂಪಾಯಿ ವೆಚ್ಚದಲ್ಲಿ 842 ಅಂಗನವಾಡಿಗಳನ್ನು ನಿರ್ಮಿಸಲು ಮುಂದಾಗಿವೆ. ಈ ಕಟ್ಟಡ ನಿರ್ಮಾಣಗಳು ಮುಕ್ತಾಯದ ವಿವಿಧ ಹಂತಗಳಲ್ಲಿವೆ. ಈಗಾಗಲೇ 2,722 ಶಾಲೆಗಳನ್ನು ಮತ್ತು 551 ಅಂಗನವಾಡಿಗಳನ್ನು ನಿರ್ಮಿಸುವ ಕೆಲಸ ಮುಗಿದಿದ್ದು ಇನ್ನುಳಿದ ಕಟ್ಟಡದಳ ನಿರ್ಮಾಣ ಮುಕ್ತಾಯದ ಹಂತಗಳಲ್ಲಿವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಆದರೆ ಶಿಕ್ಷಣ ಇಲಾಖೆಯ ಮೂಲಗಳು, ಈಗಿರುವ ಶಾಲೆಗಳ ಕಟ್ಟಡಗಳು ಹಳೆಯದಾಗಿದ್ದು ದುರಸ್ತಿ ಸ್ಥಿತಿಯಲ್ಲಿವೆ. ಹಣಕಾಸಿನ ಕೊರತೆಯಿದೆ ಎಂದು ಸರ್ಕಾರ ಇವುಗಳ ದುರಸ್ತಿ ಕಾರ್ಯ ಮಾಡುತ್ತಿಲ್ಲ ಎನ್ನು. ಹೀಗಿರುವಾಗ ಹೊಸ ಶಾಲೆಗಳನ್ನು ಹೇಗೆ ನಿರ್ಮಿಸುತ್ತಿವೆ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಸಚಿವ ಬಿ ಸಿ ನಾಗೇಶ್ ಮತ್ತು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಕೇಳಿದಾಗ, ದುರಸ್ತಿ ಕಾರ್ಯ ಮಾಡಬೇಕಾಗಿದೆ ಎನ್ನುತ್ತಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ, ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಸರ್ಕಾರವು ಹೊಸ ಶಾಲೆಗಳನ್ನು ನಿರ್ಮಿಸಿದೆ. ಆದರೆ ಇತರ ಹಲವು ಪ್ರದೇಶಗಳಲ್ಲಿ, ಶಾಲೆಯ ಕಟ್ಟಡಗಳ ಪರಿಸ್ಥಿತಿ ಕೆಟ್ಟ ಸ್ಥಿತಿಯಲ್ಲಿವೆ. ಹೆಚ್ಚಿನ ಶ್ರೀಮಂತ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುವುದರಿಂದ, ಸರ್ಕಾರಿ ಶಾಲೆಗಳಿಗೆ ತೊಂದರೆಯಾಗಿದೆ. ಯಾರೂ ಗಮನ ನೀಡುವುದಿಲ್ಲ ಎನ್ನುತ್ತಾರೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್.
ಸುಮಾರು 23 ಸಾವಿರ ಕೋಟಿ ರೂಪಾಯಿಗಳ ಬಜೆಟ್ ವೆಚ್ಚದಲ್ಲಿ, ಸುಮಾರು 19 ಸಾವಿರ ಕೋಟಿ ರೂಪಾಯಿ ಸಿಬ್ಬಂದಿ ಮತ್ತು ಶಿಕ್ಷಕರ ಸಂಬಳ ವಿತರಣೆಗೆ ಮತ್ತು ಉಳಿದವು ಸಮವಸ್ತ್ರ, ಪಠ್ಯಪುಸ್ತಕಗಳು, ಮಧ್ಯಾಹ್ನದ ಊಟ ಮತ್ತು ಇತರ ವೆಚ್ಚಗಳಿಗೆ ಹೋಗುತ್ತದೆ. ಶಾಲಾ ಕಟ್ಟಡಗಳ ನಿರ್ವಹಣೆಗೆ ಪ್ರತ್ಯೇಕ ಹಣ ಮೀಸಲಿಡುವ ಅಗತ್ಯವಿದೆ ಎಂದು ಸಚಿವ ನಾಗೇಶ್ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು. ಶಾಲಾ ನಿರ್ವಹಣೆಗೆ ಮೀಸಲಿಟ್ಟಿರುವ ಮೊತ್ತವು ಅತ್ಯಲ್ಪವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.