ಹಣಕ್ಕಾಗಿ ಮಹಿಳೆಯರ ಫೋಟೋ ಇರಿಸಿಕೊಂಡು ಬ್ಲ್ಯಾಕ್ ಮೇಲ್: ಬೆಂಗಳೂರಿನಲ್ಲಿ ವ್ಯಕ್ತಿಯ ಬಂಧನ
ಕನ್ನಡ ಮ್ಯಾಟ್ರಿಮೋನಿಯಲ್ಲಿ ಪರಿಚಯ ಅಗಿ ಮದುವೆಯಾಗುವುದಾಗಿ ನಂಬಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
Published: 21st January 2022 09:51 AM | Last Updated: 21st January 2022 02:04 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕನ್ನಡ ಮ್ಯಾಟ್ರಿಮೋನಿಯಲ್ಲಿ ಪರಿಚಯ ಅಗಿ ಮದುವೆಯಾಗುವುದಾಗಿ ನಂಬಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ದುಡ್ಡಿಗೋಸ್ಕರ ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವಿಜಯ್ ಕುಮಾರ್ ಬಂಧಿತ ಆರೋಪಿ. ಆರೋಪಿ ವಿಜಯ್ ಕುಮಾರ್ ಕನ್ನಡ ಮ್ಯಾಟ್ರಿಮೋನಿಯಲ್ಲಿ ಓರ್ವ ಮಹಿಳೆಯನ್ನ ಪರಿಚಯಮಾಡಿಕೊಂಡಿದ್ದ. ನಂತರ ಮದುವೆಯಾಗುವುದಾಗಿ ನಂಬಿಸಿ ಸ್ನೇಹ ಬೆಳೆಸಿದ್ದ, ಬಳಿಕ ಸಲುಗೆಯಿಂದ ಇದ್ದ ಸಮಯದಲ್ಲಿ ವಿಜಯ್ ಕುಮಾರ್ ಕೆಲ ಫೋಟೋಗಳನ್ನು ತೆಗೆದುಕೊಂಡಿದ್ದನು.
ಕೆಲ ದಿನಗಳ ನಂತರ 50 ಸಾವಿರ ಹಣ ನೀಡದಿದ್ದರೇ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನು ಎಂದು ತಿಳಿದು ಬಂದಿದೆ. ಹಣ ನೀಡದೆ ಇದ್ದಾಗ ಇನ್ಸ್ಟಾಗ್ರಾಮ್ನಲ್ಲಿ ಯುವತಿಯ ಹೆಸರಿನಲ್ಲಿ ಮೂರು ನಕಲಿ ಖಾತೆಗಳನ್ನ ಕೂಡ ತೆರೆದಿದ್ದ. ಫೋಟೋಗಳನ್ನು ಯುವತಿಯ ಕುಟುಂಬದವರಿಗೆ ಟ್ಯಾಗ್ ಮಾಡಿ ಪೋಸ್ಟ್
ಮಾಡಿದ್ದ ಬಂಧಿತ ವಿಜಯ್ ಕುಮಾರ್.
ಇದನ್ನೂ ಓದಿ: ನಗ್ನ ಚಿತ್ರ ನೀಡಿದರೆ ಮಾಡೆಲಿಂಗ್ ಚಾನ್ಸ್ ಆಸೆ ತೋರಿಸಿ ಬ್ಲಾಕ್ ಮೇಲ್ ಮಾಡಿದ ಭೂಪ ಈಗ ಅರೆಸ್ಟ್!
ಇವನ ಕಾಟದಿಂದ ಬೇಸತ್ತ ನೊಂದ ಯುವತಿ ನಗರದ ಈಶಾನ್ಯ ವಿಭಾಗ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಳು. ಕೇಸ್ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ವಿಜಯ್ ಕುಮಾರ್ನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಎರಡು ಮೊಬೈಲ್ ಫೋನ್, ಡಾಂಗಲ್ ವಶಪಡಿಸಿಕೊಳ್ಳಲಾಗಿದೆ.