ಬೆಂಗಳೂರು: ಚಲ್ಲಘಟ್ಟ ಮೆಟ್ರೋ ನಿಲ್ದಾಣ ಆಗಸ್ಟ್ ವೇಳೆಗೆ ರೈಲು ಸಂಚಾರಕ್ಕೆ ಸಿದ್ಧ
ಕೆಂಗೇರಿ ಮೆಟ್ರೊ ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಚಲ್ಲಘಟ್ಟ ಮೆಟ್ರೊ ನಿಲ್ದಾಣ ಈ ವರ್ಷದ ಆಗಸ್ಟ್ ವೇಳೆಗೆ ಸಂಚಾರಕ್ಕೆ ಸಿದ್ಧವಾಗಲಿದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವೆ ವಿಸ್ತರಿಸಿದ ನೇರಳೆ ಮಾರ್ಗದ ಪ್ರಾರಂಭದ ಸಮಯದಲ್ಲಿ, ಇದು ಮಾರ್ಚ್ 2022 ರ ವೇಳೆಗೆ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
Published: 21st January 2022 03:07 PM | Last Updated: 21st January 2022 04:28 PM | A+A A-

ಪ್ರಗತಿ ಹಂತದಲ್ಲಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕಾಮಗಾರಿ
ಬೆಂಗಳೂರು: ಕೆಂಗೇರಿ ಮೆಟ್ರೊ ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಚಲ್ಲಘಟ್ಟ ಮೆಟ್ರೊ ನಿಲ್ದಾಣ ಈ ವರ್ಷದ ಆಗಸ್ಟ್ ವೇಳೆಗೆ ಸಂಚಾರಕ್ಕೆ ಸಿದ್ಧವಾಗಲಿದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವೆ ವಿಸ್ತರಿಸಿದ ನೇರಳೆ ಮಾರ್ಗದ ಪ್ರಾರಂಭದ ಸಮಯದಲ್ಲಿ, ಇದು ಮಾರ್ಚ್ 2022 ರ ವೇಳೆಗೆ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಈ ಎಲಿವೇಟೆಡ್ ನಿಲ್ದಾಣದ ಶೇಕಡಾ 90 ರಷ್ಟು ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ. ಈ ವಿಸ್ತರಣೆ ಮಾರ್ಗದುದ್ದಕ್ಕೂ ಒಟ್ಟು 70 ಸ್ಪ್ಯಾನ್ಗಳನ್ನು ನಿರ್ಮಿಸಲಾಗಿದೆ ಮತ್ತು ಮೇಲ್ಛಾವಣಿಯ ಕೆಲಸ ನಡೆಯುತ್ತಿದೆ. ಮಾರ್ಚ್ ಅಂತ್ಯದೊಳಗೆ ಇದು ಪೂರ್ಣಗೊಳ್ಳಲಿದೆ ಎಂದು ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ನೆಲದ ಮೇಲೆ ಗ್ರಾನೈಟ್ ಅಳವಡಿಕೆ, ಪೈನಿಂಗ್ ಮತ್ತಿತರ ಬಾಹ್ಯ ಕಾಮಗಾರಿಗಳು ಮುಂದಿನ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಹಳಿಯನ್ನು ಸೇರಿಸಲು ವೆಲ್ಡಿಂಗ್ ಕಾಮಗಾರಿ ಮುಗಿದಿದ್ದು, ಪ್ಲಿಂತ್ ಹಾಕಲಾಗುತ್ತಿದೆ ಎಂದರು.
"ಒಟ್ಟು 1750 ಮೀಟರ್ಗಳಷ್ಟು ಹಳಿಗಳನ್ನು ಹಾಕಬೇಕಾಗಿದೆ, ನಂತರ ಹಳಿಗಳ ಸುತ್ತಲೂ ನೆಲೆವಸ್ತುಗಳನ್ನು ಇರಿಸುವ ಅಗತ್ಯವಿದೆ. ಮೂರನೇ ಹಳಿಗಾಗಿ ವಿದ್ಯುತ್ ಅಗತ್ಯವಿದ್ದು, ಅದನ್ನು ತದನಂತರ ಹಾಕಲಾಗುವುದು ಎಂದು ಅವರು ಹೇಳಿದರು. ಕಳೆದ ವರ್ಷ ಆಗಸ್ಟ್ 29 ರಂದು ಬೈಯಪ್ಪನಹಳ್ಳಿ- ಮೈಸೂರು ರಸ್ತೆಯ ಕೆಂಗೇರಿವರೆಗಿನ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು.
ಕೆಲಸ ವಿಳಂಬ ಕುರಿತಂತೆ ಪ್ರತಿಕ್ರಿಯಿಸಿದ ಅಧಿಕಾರಿ, ನೈಸ್ ರಸ್ತೆಯಿಂದ 56 ಮೀಟರ್ ಎತ್ತರದಲ್ಲಿ ಸ್ಪ್ಯಾನ್ ನಿರ್ಮಾಣ ಅತಿದೊಡ್ಡ ಸವಾಲು ಆಗಿದೆ. ಕೋವಿಡ್-19 ಎರಜನೇ ಅಲೆ ಹಾಗೂ ಕೆಲಸಗಾರರ ಕೊರತೆಯಿಂದ ಕೆಲಸ ವಿಳಂಬವಾಯಿತು. ಮೂರನೇ ಅಲೆಯಲ್ಲೂ ಕೆಲ ಕಾರ್ಮಿಕರು ರಜೆ ಮೇಲೆ ತೆರಳಿದ್ದಾಗಿ ತಿಳಿಸಿದರು.
ಈ ಮಾರ್ಗದಲ್ಲಿನ ಸಣ್ಣ ದೇವಾಲಯ ತೆರವು ಕುರಿತಂತೆ ವಿವರಿಸಿದ ಅಧಿಕಾರಿ, ಕೊನೆಗೂ ದೇವಾಲಯ ತೆರವುಗೊಳಿಸಿ ಕೆಲಸ ಮುಗಿಸಲಾಗಿದೆ. ಜುಲೈ ವೇಳೆಗೆ ಭೌತಿಕ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆದು, ಅನುಮತಿ ಪಡೆಯಲು ಸ್ವಲ್ಪ ಸಮಯ ಬೇಕಾಗಲಿದೆ. ಆದ್ದರಿಂದ ಆಗಸ್ಟ್ ಅಂತ್ಯದೊಳಗೆ ಬಾಕಿ ಕೆಲಸಗಳು ಪೂರ್ಣಗೊಂಡು ಸಂಚಾರ ಆರಂಭವಾಗಲಿದೆ. ಚಲಘಟ್ಟ ಸುತ್ತಮುತ್ತ ಅನೇಕ ಶಿಕ್ಷಣ ಸಂಸ್ಥೆಗಳಿದ್ದು, ರೈಲು ಆರಂಭವಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.