ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಪುಣ್ಯಸ್ಮರಣೆ: ಸರ್ಕಾರದಿಂದ ದಾಸೋಹ ದಿನ ಆಚರಣೆ, ಗಣ್ಯರಿಂದ ಸ್ಮರಣೆ
ಇಂದು ಜನವರಿ 21ಕ್ಕೆ ತುಮಕೂರಿನ ಸಿದ್ಧಗಂಗೆಯ(Siddaganga mutt) ಹಿರಿಯ ಯತಿ, ತ್ರಿವಿಧ ದಾಸೋಹಿ ಮಠಾಧೀಶ ಡಾ ಶಿವಕುಮಾರ ಸ್ವಾಮೀಜಿಗಳು(Dr Shivakumara swamij) ಲಿಂಗೈಕ್ಯರಾಗಿ ಮೂರು ವರ್ಷಗಳು. ಇಂದು ಅವರ 114ನೇ ವರ್ಷದ ಹುಟ್ಟುಹಬ್ಬ.
Published: 21st January 2022 09:51 AM | Last Updated: 21st January 2022 02:05 PM | A+A A-

ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿ
ಬೆಂಗಳೂರು/ತುಮಕೂರು: ಇಂದು ಜನವರಿ 21ಕ್ಕೆ ತುಮಕೂರಿನ ಸಿದ್ಧಗಂಗೆಯ(Siddaganga mutt) ಹಿರಿಯ ಯತಿ, ತ್ರಿವಿಧ ದಾಸೋಹಿ ಮಠಾಧೀಶ ಡಾ ಶಿವಕುಮಾರ ಸ್ವಾಮೀಜಿಗಳು(Dr Shivakumara swamij) ಲಿಂಗೈಕ್ಯರಾಗಿ ಮೂರು ವರ್ಷಗಳು. ಇಂದು ಅವರ 114ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ದೇಶಾದ್ಯಂತ,ನಾಡಿನಾದ್ಯಂತ ಗಣ್ಯರು, ರಾಜಕೀಯ ನಾಯಕರು, ಜನಸಾಮಾನ್ಯರು ಶ್ರೀಗಳನ್ನು, ಅವರು ಮಾಡಿದ ಸಮಾಜ ಸೇವೆ, ದಾಸೋಹಗಳ ಬಗ್ಗೆ ಸ್ಮರಿಸಿ ಮಾತನಾಡುತ್ತಿದ್ದಾರೆ.
ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿ (Shivakumara Swamiji) ಅವರ ಇಹದ ಜೀವನ ಪಯಣ ಮುಗಿದು. ಶ್ರೀಗಳ ನಿರ್ಗಮನ ಬಳಿಕ ಈ ಕೊರೋನಾ ಮಹಾಮಾರಿ ಮಧ್ಯೆ ಅವರನ್ನು ನೆನೆದವರು ಅದೆಷ್ಟೋ ಮಂದಿ. ಕೋವಿಡ್ ಮೂರನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ಇಂದು ಸರಳ ಆಚರಣೆಯನ್ನು ಮಾಡಲಾಗುತ್ತದೆ. ಸಿದ್ದಗಂಗ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಠದ ದೇವರಾದ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಮಠಕ್ಕೆ ಭೇಟಿ ನೀಡಿ, ಗದ್ದುಗೆಯ ದರ್ಶನ ಪಡೆಯಲಿದ್ದಾರೆ.
ಶ್ರೀಗಳ ಪುಣ್ಯಸ್ಮರಣೆ (Death Anniversary): ರಾಜ್ಯ ಸರ್ಕಾರವು ಇಂದು ಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನ ಆಚರಿಸಲು ನಿರ್ಧರಿಸಿದೆ. ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹ ಮೂಲಕ ಸಮಾಜವನ್ನು ಪೊರೆದವರು ಶ್ರೀಗಳು. ಬಸವಣ್ಣನ ಈ ವಚನದಂತೆ ಗುರುಗಳು ತ್ರಿವಿಧ ದಾಸೋಹದಲ್ಲಿ ತಾವು ಆರಾಧಿಸಿದರು.
ಗಣ್ಯರಿಂದ ಸ್ಮರಣೆ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರನ್ನು ನಾಡಿನ ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿವಿಧ ಪಕ್ಷಗಳ ನಾಯಕರು, ಗಣ್ಯರು, ಜನತೆ ಅವರನ್ನು ಸ್ಮರಿಸುತ್ತಿದ್ದಾರೆ.
ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಕಾಯಕಯೋಗಿ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ #ಶಿವಕುಮಾರ #ಮಹಾಸ್ವಾಮಿಗಳವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ದಿನದಂದು ಅನಂತ ಅನಂತ ಭಕ್ತಿ ಪೂರ್ವಕ ನಮನಗಳು. pic.twitter.com/cmj64EX8Ny
— Pralhad Joshi (@JoshiPralhad) January 21, 2022