ಬೆಂಗಳೂರು: ಕೋಡಿಚಿಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 20 ಲಕ್ಷ ರು. ದೇಣಿಗೆ ನೀಡಿದ ಐಐಎಂಬಿ
ಕೋಡಿ ಚಿಕ್ಕನಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಂಗಳೂರಿನ ಐಐಎಂಬಿ ಕಂಪನಿ ಸುಮಾರು 20 ಲಕ್ಷ ರು ಮೌಲ್ಯದ ಉಪಕರಣಗಳನ್ನು ದೇಣಿಗೆಯಾಗಿ ನೀಡಿದೆ.
Published: 21st January 2022 01:41 PM | Last Updated: 21st January 2022 01:41 PM | A+A A-

ಐಐಎಂಬಿ ಬೆಂಗಳೂರು
ಬೆಂಗಳೂರು: ಕೋಡಿ ಚಿಕ್ಕನಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಂಗಳೂರಿನ ಐಐಎಂಬಿ ಕಂಪನಿ ಸುಮಾರು 20 ಲಕ್ಷ ರು ಮೌಲ್ಯದ ಉಪಕರಣಗಳನ್ನು ದೇಣಿಗೆಯಾಗಿ ನೀಡಿದೆ.
ಸಾಮಾಜಿಕ ಹೊಣೆಗಾರಿಕೆಯ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಐಐಎಂಬಿ ಕಾರ್ಪೋರೇಟ್ ಸಂಸ್ಥೆ ಈ ಹಣ ನೀಡಿದೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಐಐಎಂಬಿ ಸಮೀಪವಿದ್ದು, ಸುತ್ತಮುತ್ತಲಿನ ಜನಸಮುದಾಯಕ್ಕೆ ಸಹಾಯ ಮಾಡುವ ಪ್ರಯತ್ನ ಇದಾಗಿದೆ ಎಂದು ಸಂಸ್ಥೆಯ ನಿರ್ದೇಶಕ ರಿಷಿಕೇಶ ಟಿ ಕೃಷ್ಣನ್ ಹೇಳಿದ್ದಾರೆ.
ಉಪಕರಣಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಔಪಚಾರಿಕವಾಗಿ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಕೃಷ್ಣಪ್ಪ ಬಿ.ಕೆ.ಅವರಿಗೆ ಹಸ್ತಾಂತರಿಸಿದರು.
ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಲಸಿಕೆ ಅಭಿಯಾನ ಮತ್ತ 40 ಸಾವಿರ ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಲು ಸಂಸ್ಥೆ ಸಹಾಯ ಮಾಡಿತ್ತು.