ರಾಜ್ಯದ ಕೋವಿಡ್-19 ಮಾಹಿತಿ ನೀಡಲು 14 ತಜ್ಞರ ನೇಮಕ
ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ತಪ್ಪು ಸಂವಹನವನ್ನು ಕಡಿಮೆ ಮಾಡಲು ಅಧಿಕೃತ ವಕ್ತಾರರು ಮಾತ್ರ COVID-19 ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕು ಎಂದು ಆದೇಶ ಹೊರಡಿಸಿದ ಎರಡು ದಿನಗಳ ನಂತರ ರಾಜ್ಯ ಸರ್ಕಾರ, ಈ ಸಂಬಂಧ ಮಾಹಿತಿ ನೀಡಲು ನೇಮಕ ಮಾಡಿರುವ 14 ಮಂದಿ ತಜ್ಞರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Published: 21st January 2022 09:01 AM | Last Updated: 21st January 2022 12:17 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ತಪ್ಪು ಸಂವಹನವನ್ನು ಕಡಿಮೆ ಮಾಡಲು ಅಧಿಕೃತ ವಕ್ತಾರರು ಮಾತ್ರ COVID-19 ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕು ಎಂದು ಆದೇಶ ಹೊರಡಿಸಿದ ಎರಡು ದಿನಗಳ ನಂತರ ರಾಜ್ಯ ಸರ್ಕಾರ, ಈ ಸಂಬಂಧ ಮಾಹಿತಿ ನೀಡಲು ನೇಮಕ ಮಾಡಿರುವ 14 ಮಂದಿ ತಜ್ಞರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕೋವಿಡ್ ಕುರಿತು ತಪ್ಪು ಮಾಹಿತಿ ಹರಡುವ ವೈದ್ಯರ ವಿರುದ್ಧ ಕ್ರಮ: ರಾಜ್ಯ ಸರ್ಕಾರ ಎಚ್ಚರಿಕೆ
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್, ಕ್ಲಿನಿಕಲ್ ತಜ್ಞರ ಸಮಿತಿ ಅಧ್ಯಕ್ಷ ಡಾ.ಕೆ. ರವಿ, ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್, ಡಾ.ಸಿ. ನಾಗರಾಜ್, ಡಾ. ಬಸವರಾಜ್, ಡಾ. ಪ್ರದೀಪ್ ರಂಗಪ್ಪ, ತಾಂತ್ರಿಕ ಸಲಹಾ ಸಮಿತಿ ಸದಸ್ಯರಾದ ಡಾ.ವಿ. ರವಿ, ಡಾ.ಬಿ.ಎಲ್. ಶಶಿಭೂಷಣ್, ಡಾ. ಗಿರಿಧರ್ ಬಾಬು, ಡಾ. ಶಿವಾನಂದ, ಡಾ. ಸವಿತಾ ಜಿ., ಶ್ವಾಸಕೋಶ ತಜ್ಞರಾದ ಡಾ. ಸತ್ಯನಾರಾಯಣ ಮೈಸೂರು, ಡಾ. ರವೀಂದ್ರ ಮೆಹ್ತಾ ಹಾಗೂ ಮಕ್ಕಳ ತಜ್ಞ ಡಾ. ವಿಶ್ವನಾಥ್ ಕಾಮೋಜಿ ಅವರು ವಕ್ತಾರರಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ರೋಗಿಗಳಿಗೆ ಹೋಂ ಕೇರ್ ಕಿಟ್‌ಗಳೊಂದಿಗೆ ಚಿಕಿತ್ಸೆ ನೀಡಲು ರಾಜ್ಯದ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ