ತುಮಕೂರು: ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನರ ಕಂಡು ಅಧಿಕಾರಿಗಳ ವಿರುದ್ಧ ಸಿಎಂ ಕೆಂಡಾಮಂಡಲ!
ಇತ್ತೀಚೆಗಷ್ಟೇ ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸಿದ್ದಗಂಗಾ ಮಠದ ಬಳಿ ಭಾರೀ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶ ಮಾಡಿಕೊಟ್ಟ ಪೊಲೀಸರ ವಿರುದ್ಧ ಕೆಂಡಾಮಂಡಲಗೊಂಡ ಘಟನೆ ನಡೆಯಿತು.
Published: 22nd January 2022 08:51 AM | Last Updated: 22nd January 2022 11:48 AM | A+A A-

ಸಿಎಂ ಬೊಮ್ಮಾಯಿ
ತುಮಕೂರು: ಇತ್ತೀಚೆಗಷ್ಟೇ ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸಿದ್ದಗಂಗಾ ಮಠದ ಬಳಿ ಭಾರೀ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶ ಮಾಡಿಕೊಟ್ಟ ಪೊಲೀಸರ ವಿರುದ್ಧ ಕೆಂಡಾಮಂಡಲಗೊಂಡ ಘಟನೆ ನಡೆಯಿತು.
ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯ 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ನಿನ್ನೆ ಸಿಎಂ ಬಸವರಾಜ್ ಬೊಮ್ಮಾಯಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: ತಜ್ಞರ ಅಭಿಪ್ರಾಯ, ಸಲಹೆ ಮೇಲೆ ರಾಜ್ಯದ ಕೊರೋನಾ ನಿಯಮ ಭವಿಷ್ಯ ನಿರ್ಧಾರ: ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ
ತುಮಕೂರಿಗೆ ಬಂದ ಮುಖ್ಯಮಂತ್ರಿಗಳನ್ನು ಸಚಿವ ಬಿಸಿ ನಾಗೇಶ್ ಹಾಗೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು.
ಕಾರಿನಿಂದ ಇಳಿಯುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿದ್ದ ಜನರನ್ನು ಕಂಡ ಮುಖ್ಯಮಂತ್ರಿಗಳು ಈ ವೇಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ರೀ ಹೇಳಿದ್ದೆ ತಾನೇ ಜನರನ್ನು ಸೇರಿಸಬೇಡಿ ಅಂತಾ, ಬುದ್ದಿಗಿದ್ದಿ ಇದೆಯಾ ನಿಮಗೆ, ದೂರ ನಿಂತ್ಕೊಳ್ಳಿ ಸರೀರಿ. ಜನ ಸೇರಿಸಬೇಡಿ ಎಂದು ಹೇಳಿದ್ದರೂ ಯಾಕೆ ಸೇರಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ಸೀನಿಯರ್ ಆಫೀಸರ್ ನಿಮಗೂ ಗೊತ್ತಾಗಲಿಲ್ವಾ ಎಂದು ಐಜಿ ಚಂದ್ರಶೇಣಜರ್ ಅವರ ವಿರುದ್ಧವೂ ಅಸಮಾಧಾನ ಹೊರ ಹಾಕಿದರು.