ಬಂಡೀಪುರ: 120 ಸಿಬ್ಬಂದಿಗಳೊಂದಿಗೆ ಹುಲಿ ಗಣತಿ ಆರಂಭ

ಬಂಡೀಪುರ ಹುಲಿಸಂರರಕ್ಷಿತ ಪ್ರದೇಶದಲ್ಲಿ 5ನೇ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, 120 ಸಿಬ್ಬಂದಿಗಳೊಂದಿಗೆ ಹುಲಿ ಗಣತಿ ಆರಂಭಿಸಲಾಗಿದೆ.

Published: 23rd January 2022 01:37 PM  |   Last Updated: 23rd January 2022 01:42 PM   |  A+A-


File photo

ಸಂಗ್ರಹ ಚಿತ್ರ

The New Indian Express

ಚಾಮರಾಜನಗರ: ಬಂಡೀಪುರ ಹುಲಿಸಂರರಕ್ಷಿತ ಪ್ರದೇಶದಲ್ಲಿ 5ನೇ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, 120 ಸಿಬ್ಬಂದಿಗಳೊಂದಿಗೆ ಹುಲಿ ಗಣತಿ ಆರಂಭಿಸಲಾಗಿದೆ. 

ಹುಲಿ ಅಂದಾಜು ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಎಂ ಸ್ಟ್ರೈಪ್ಸ್ ಎಂಬ ಎಕೋಲಾಜಿಕಲ್ ಆ್ಯಪ್‍ನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಆರಂಭವಾಗಿದೆ. ಇಂದಿನಿಂದ ಫೆಬ್ರವರಿ 8 ರವರಗೆ ಗಣತಿ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ ಮಾಂಸಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಓಡಾಟಗಳ ಕುರಿತಾದ ಗುರುತುಗಳು, ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು, ಪರಚಿದ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ. ಬಂಡೀಪುರವನ್ನು ಮೂರು ಬ್ಲಾಕ್‍ಗಳನ್ನಾಗಿ ವಿಂಗಡಿಸಿ 112 ಗಸ್ತುಗಳಲ್ಲಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತಿದೆ.

ಕೊರೊನಾ ಸಂದರ್ಭದಲ್ಲಿ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊರಗಿನಿಂದ ಬಂದವರಿಂದ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಗಣತಿ ಕಾರ್ಯದಲ್ಲಿ ಸ್ವಯಂಸೇವಕರ ಸೇವೆ ಬಳಸಿಕೊಳ್ಳುತ್ತಿಲ್ಲ. ಗಣತಿ ಕಾರ್ಯದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಅರಣ್ಯ ವೀಕ್ಷಕರು ಸೇರಿದಂತೆ 123 ಮಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಮೊದಲ ದಿನದ ಹುಲಿ ಗಣತಿ ಕಾರ್ಯ ಕುರಿತು ಅರಣ್ಯ ಸಿಬ್ಬಂದಿಗಳು ಮಾಹಿತಿ ಹಂಚಿಕೊಂಡಿದ್ದು, ತಮ್ಮ ಅನುಭವಗಳನ್ನು ಹೇಳಿದ್ದಾರೆ. 

ಕೋವಿಡ್ ನಿಂದ ನಮ್ಮ ನೈತಿಕ ಸ್ಥೈರ್ಯ ಕುಗ್ಗಿಲ್ಲ. ನಮ್ಮ ಚೈತನ್ಯವನ್ನು ಸೋಲಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಹಲವು ವರ್ಷಗಳಿಂದ ಹುಲಿ ಗಣತಿ ಕಾರ್ಯಕ್ಕಾಗಿ ಕಾಯುತ್ತಿದ್ದೆವು. ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ಇತರೆ ಸಿಬ್ಬಂದಿಗಳಾರ ನೆರವನ್ನೂ ಪಡೆಯದೆ ಸುರಕ್ಷತೆ ದೃಷ್ಟಿಯಿಂದ ಇರುವ ಸಿಬ್ಬಂದಿಗಳ ಮೂಲಕವೇ ಕಾರ್ಯವನ್ನು ಆರಂಭಿಸಿದ್ದೇವೆಂದು ಹೇಳಿದ್ದಾರೆ. 

ಮೊದಲ ದಿನ, 120 ಸಿಬ್ಬಂದಿ ಬೆಳಿಗ್ಗೆ 6 ರಿಂದ ಕಾರ್ಯವನ್ನು ಆರಂಭಿಸಿದ್ದರು. 37 ಬೀಟ್‌ಗಳಲ್ಲಿ ಐದು ವಲಯಗಳಲ್ಲಿ ಹುಲಿ ಗಣತಿ ನಡೆಸಲಾಯಿತು. ಯಾವುದೇ ಮಾಂಸಾಹಾರಿ ಹುಲಿಗಳು ನೇರವಾಗಿ ಕಾಣಿಸಲಿಲ್ಲ. ಆನೆಗಳ ಹಿಂಡು ಇದ್ದ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದವು. 

ಸಸ್ಯಾಹಾರಿಗಳ ಜನಸಂಖ್ಯೆಯು ಸುಧಾರಿಸಿದೆ ಮತ್ತು ಮೀಸಲು ಪ್ರದೇಶದಲ್ಲಿ ಇವುಗಳ ಸಂಖ್ಯೆ ಉತ್ತಮವಾಗಿದೆ. ಲೈನ್ ಸಮೀಕ್ಷೆ ಮತ್ತು ನೇರ ಚಿಹ್ನೆ ಸಮೀಕ್ಷೆ ಮೌಲ್ಯಮಾಪನದಲ್ಲಿ ಇದು ನಿರ್ಣಾಯಕ ಭಾಗವಾಗಿದ್ದು, ಫೆಬ್ರವರಿ 7 ರವರೆಗೆ ಹುಲಿ ಗಣತಿ ನಡೆಯಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಟಿಆರ್ ಕರಿಕಾಳನ್ ಅವರು ಹೇಳಿದ್ದಾರೆ. 

ಬಂಡೀಪುರಕ್ಕೆ ಪ್ರವೇಶ ನಿರ್ಬಂಧ, ಸಫಾರಿ ರದ್ದು
ಬಂಡೀಪುರವನ್ನು ಮೂರು ಬ್ಲಾಕ್‍ಗಳನ್ನಾಗಿ ವಿಂಗಡಿಸಿ 112 ಗಸ್ತುಗಳಲ್ಲಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಪ್ರತೀ ಬ್ಲಾಕ್ ನಲ್ಲಿಯೂ ವಿವಿಧ ದಿನಾಂಕದಂದು ಹುಲಿ ಗಣತಿ ನಡೆಸಲಾಗುತ್ತಿದೆ. ಹುಲಿ ಗಣತಿ ನಡೆಸುತ್ತಿರುವುದರಿಂದ ಈ ಪ್ರದೇಶದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಸಫಾರಿಯನ್ನೂ ಕೂಡ ರದ್ದು ಪಡಿಸಲಾಗಿದೆ ಎಂದು ಕರಿಕಾಳನ್ ಅವರು ತಿಳಿಸಿದ್ದಾರೆ. 

ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಪ್ರತೀ ಬ್ಲಾಕ್ ನಲ್ಲಿ ನಡೆಯುವ ಹುಲಿ ಗಣತಿಯನ್ನು ಪರಿಶೀಲನೆ ನಡೆಸುವುದು, ಸಿದ್ಧತೆಗಳ ಪರಿಶೀಲನೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಶೇಷ ಹುಲಿ ಸಂರಕ್ಷಣಾ ಪಡೆ, ಬೇಟೆ ತಡೆ ತಂಡಗಳು ಮತ್ತು ಇತರ ವಿಶೇಷ ತಂಡಗಳನ್ನು ಗಣತಿಯನ್ನು ಮೇಲ್ವಿಚಾರಣೆ ಮಾಡಲಿದೆ. ಪ್ರತಿ ಬ್ಲಾಕ್‌ಗೂ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಅಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮಾಡಲಾಗಿದೆ. ಹುಲಿ ಗಣತಿಗಾಗಿ ಪ್ರತೀ ತಂಡವೂ ಒಂದು ತಿಂಗಳ ತರಬೇತಿ ಪಡೆದುಕೊಂಡಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 1,062 ಚ.ಕಿ.ಮೀ ವ್ಯಾಪ್ತಿಯಲ್ಲಿದ್ದು, 112 ಗಸ್ತುಗಳಲ್ಲಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಕ್ಯಾಮೆರಾ ಟ್ರ್ಯಾಪ್ ವಿವರಗಳನ್ನು ಈಗಾಗಲೇ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ನೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕರಿಕಾಳನ್ ಹೇಳಿದರು.

ಈ ನಡುವೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿರೇಖೆ (ಫೈರ್‌ಲೈನ್) ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಹಸಿರಿರುವ ಕಡೆ ತಡವಾಗಿದ್ದರೂ ಬೆಂಕಿ ತಡೆಗೆ ಅರಣ್ಯ ಇಲಾಖೆ ಸಕಲ ತಯಾರಿ ನಡೆಸಿದೆ.

ಸಾಮಾನ್ಯವಾಗಿ ಪ್ರತಿವರ್ಷ ಡಿಸೆಂಬರ್ ಅಂತ್ಯದೊಳಗೆ ಫೈರ್‌ಲೈನ್ ಮುಗಿಯುತ್ತಿತ್ತು. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಹಸಿರಿರುವುದರಿಂದ ಜನವರಿ ಅಂತ್ಯದೊಳಗೆ ಬಹುತೇಕ ಮುಗಿಯಬಹುದೆಂದು ನಿರೀಕ್ಷಿಸಲಾಗಿದೆ. ಶೂನ್ಯ ಬೆಂಕಿ ಅರಣ್ಯವಾಗಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಫೈರ್‌ಲೈನ್ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.


Stay up to date on all the latest ರಾಜ್ಯ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp