ವಿಧಾನಸೌಧ ಮುಂಭಾಗಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಳಾಂತರ: ಸಿಎಂ ಬೊಮ್ಮಾಯಿ
ವಿಧಾನಸೌಧದಲ್ಲಿ ಈಗಾಗಲೇ ನೇತಾಜಿ ಅವರ ಪ್ರತಿಮೆ ಇದ್ದು, ಅದನ್ನು ಕಟ್ಟಡದ ಮುಂಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.
Published: 23rd January 2022 12:03 PM | Last Updated: 23rd January 2022 12:03 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ವಿಧಾನಸೌಧದಲ್ಲಿ ಈಗಾಗಲೇ ನೇತಾಜಿ ಅವರ ಪ್ರತಿಮೆ ಇದ್ದು, ಅದನ್ನು ಕಟ್ಟಡದ ಮುಂಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.
ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿಧಾನಸೌಧ ಆವರಣದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
Karnataka Chief Minister Basavraj Bommai offers tribute to Netaji #SubhasChandraBose on his 125th birth anniversary
— ANI (@ANI) January 23, 2022
"Netaji's statue already exists in Vidhanasoudha (premises), will be shifted in front of Vidhanasoudha building; a decision to be taken soon," says CM pic.twitter.com/kcdoOmDyCh
ಬಳಿಕ ಮಾತನಾಡಿದ ಅವರು, ಭಾರತಕ್ಕೆ ಇಂದು ಹೆಮ್ಮೆಯ ದಿನ, ನೇತಾಜಿ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿದ ಅಪ್ರತಿಮ ನಾಯಕ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಪಾತ್ರ ದೊಡ್ಡದು. ಆಜಾದ್ ಹಿಂದ್ ಫೌಜ್ನಲ್ಲಿ 60 ಸಾವಿರ ಯುವಕರನ್ನು ಸಂಘಟಿಸಿ ಸ್ವಾತಂತ್ರ್ಯಕ್ಕೆ ದೊಡ್ಡ ಭದ್ರ ಬುನಾದಿ ಹಾಕಿದವರು ಇವರು ಎಂದು ಹೇಳುವ ಮೂಲಕ ಸುಭಾಷ್ ಚಂದ್ರ ಬೋಸರ ದೇಶಭಕ್ತಿ, ದೇಶಕ್ಕಾಗಿ ತ್ಯಾಗ ಮಾಡುವ ಅವರ ಧ್ಯೇಯವನ್ನು ಇಂದಿನ ಯುವಕರಲ್ಲಿ ಭಿತ್ತಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಇಡೀ ವರ್ಷ ನೇತಾಜಿಯವರ ಹುಟ್ಟು ಹಬ್ಬವನ್ನು ಕಾಲೇಜಿನಲ್ಲಿ ಡಿಬೇಟ್, ಎಕ್ಸಿಬಿಷನ್ಗಳನ್ನು ಮಾಡುವ ಮೂಲಕ ಆಚರಿಸುವಂತೆ ತಿಳಿಸಿದರು.ಜೊತೆಗೆ ನೇತಾಜಿಯವರ ಕೃತಿಗಳನ್ನು ಕನ್ನಡದಲ್ಲಿ ಮುದ್ರಣ ಮಾಡುವ ಕೆಲಸ ಮಾಡುವುದಾಗಿ ಹೇಳಿದರು.
ಮುಂದಿನ ಹುಟ್ಟುಹಬ್ಬದೊಳಗೆ ನೇತಾಜಿಯವರ ಪ್ರತಿಮೆಯನ್ನು ವಿಧಾನಸಭೆ ಮುಂದಿರುವಂತೆ ಮಾಡಲಾಗುತ್ತದೆ. ಇನ್ನು ಸುಭಾಷ್ ಚಂದ್ರ ಬೋಸ್ರ ಜನ್ಮದಿನದ ಸಲುವಾಗಿ ಇಂದು ಸಂಜೆ 4 ಗಂಟೆಗೆ ಎನ್ಸಿಸಿ ಕೆಡೆಟ್ಸ್ ಜತೆಗೆ ಕಾರ್ಯಕ್ರಮ ಮಾಡುವುದಾಗಿ ತಿಳಿಸಿರುವ ಬೊಮ್ಮಾಯಿ ಅವರು, ಇಷ್ಟು ದಿನ ಬಂದ್ ಆಗಿದ್ದ ವೈಮಾನಿಕ ಶಾಲೆಯನ್ನು ಪುನರ್ ಚಾಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.