ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಉದ್ಘಾಟಿಸಿದ ಸಿಎಂ; ಎನ್ ಸಿಸಿಯಲ್ಲಿ 7500 ಹೊಸ ಕೆಡೆಟ್ಗಳಿಗೆ ಅವಕಾಶ ಎಂದ ಬೊಮ್ಮಾಯಿ
ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಉದ್ಘಾಟನೆ ಮಾಡಿದ್ದು, ಈ ವೇಳೆ ಎನ್ ಸಿಸಿಯಲ್ಲಿ 7500 ಹೊಸ ಕೆಡೆಟ್ಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
Published: 23rd January 2022 09:35 PM | Last Updated: 23rd January 2022 09:35 PM | A+A A-

ಬೆಂಗಳೂರು: ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಉದ್ಘಾಟನೆ ಮಾಡಿದ್ದು, ಈ ವೇಳೆ ಎನ್ ಸಿಸಿಯಲ್ಲಿ 7500 ಹೊಸ ಕೆಡೆಟ್ಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆ ಅಂಗವಾಗಿ ಹೊಸ 75 ನೇತಾಜಿ ಅಮೃತ ಎನ್.ಸಿ.ಸಿ ಶಾಲೆಗಳ ಘೋಷಣೆ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಚಾಲನೆ, 75 ಪೈಲಟ್ಗಳ ತರಬೇತಿಗೆ ಚಾಲನೆ. ಪಿ2006ಟಿ ವಿಮಾನ ಲೋಕಾರ್ಪಣೆ, ಹೆಲಿಟೂರಿಸಂ ಗೆ ಸಿಎಂ ಚಾಲನೆ ನೀಡಿದರು.
ನೇತಾಜಿ ಸುಭಾಷ ಚಂದ್ರ ಬೋಸ್ ಅವರ ೧೨೫ ನೇ ಜನ್ಮ ದಿನಾಚರಣೆ ಅಂಗವಾಗಿ ಹೊಸ ೭೫ ನೇತಾಜಿ ಅಮೃತ ಎನ್ ಸಿ ಸಿ ಘಟಕಗಳ ಘೋಷಣೆ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. #ParakramDivas #SubhashChandraBose pic.twitter.com/oubXsDo9j0
— Basavaraj S Bommai (@BSBommai) January 23, 2022
ಈ ವೇಳೆ ಮಾತನಾಡಿದ ಅವರು, 'ಸ್ವಾತಂತ್ರೋತ್ಸವದ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ 75 ಯುನಿಟ್ಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿ, 7500 ಹೊಸ ಕೆಡೆಟ್ಗಳಿಗೆ ಈ ಬಾರಿ ಎನ್.ಸಿ.ಸಿ ಯಲ್ಲಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದರು.
'ಎನ್.ಸಿ.ಸಿ ಸೇರುವ ಯುವಕರಲ್ಲಿ ಆಸಕ್ತಿ ಹೆಚ್ಚು ಮಾಡಿ ಯುವಕರನ್ನು ಉತ್ತೇಜಿಸಲು ಈ ತೀರ್ಮಾನಕ್ಕೆ ಬರಲಾಗಿದೆ. ಪ್ರತಿಯೊಬ್ಬರಿಗೂ 12,000 ರೂ.ಗಳನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಭರಿಸಲು ತೀರ್ಮಾನಿಸಿದೆ. ರಾಜ್ಯದ ಶಾಲೆಗಳಲ್ಲಿ 44,000 ಕೆಡೆಟ್ಗಳಿದ್ದು, ಎನ್.ಸಿ.ಸಿಯಲ್ಲಿ ಕಷ್ಟಕರವಾಗಿರುವ ಕಾರ್ಯಕ್ರಮವನ್ನು ಪುನರ್ ರಚಿಸಲು ರಕ್ಷಣಾ ಸಚಿವಾಲಯದ ಒಪ್ಪಿಗೆ ಪಡೆದು, ಅವರಿಗೆ ರಾಜ್ಯ ಸರ್ಕಾರ ಎನ್.ಸಿ.ಸಿ ಚಟುವಟಿಕೆಗಳಿಗೆ ಹಣದ ಸಂಪೂರ್ಣ ನೆರವು ನೀಡಲಾಗುವುದು. 44 ಸಾವಿರ ಘಟಕಗಳನ್ನು ಕಾಲೇಜುಗಳಿಗೆ ಸ್ಥಳಾಂತರ ಮಾಡಿ ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್ಗಳನ್ನು ಮುಂದಿನ ವರ್ಷ ಕಾಲೇಜಿಗಳಲ್ಲಿ ರೂಪಿಸುವ ಯೋಜನೆ ಇದೆ ಎಂದರು. ಇದಕ್ಕೆ ರಕ್ಷಣಾ ಸಚಿವಾಲಯದ ಅನುಮತಿ ಅಗತ್ಯವಿದ್ದು, ಅನುಮತಿ ದೊರೆಯುವ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಯುವಸಬಲೀಕರಣ ಇಲಾಖೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡು ಯುವಕರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡುತ್ತಿದೆ. ಕ್ರೀಡೆ, ಸಾಹಸ, ಒಲಂಪಿಕ್ಸ್ ಗೆ ಸಿದ್ಧತೆಮಾಡಲು 4 ವರ್ಷಗಳ ಕಾಲ ದತ್ತು ಪಡೆಯುವ ಕಾರ್ಯಕ್ರಮವನ್ನು ಸ್ವಂತ ಶಕ್ತಿಯಿಂದ ಮಾಡಿರುವುದು ಶ್ಲಾಘನೀಯ, ನಿಂತುಹೋಗಿದ್ದ ಸರ್ಕಾರಿ ಪ್ಲೈಯಿಂಗ್ ಶಾಲೆ ಪುನರಾರಂಭ ಮಾಡಿರುವುದು ರಾಜ್ಯಕ್ಕೆ ಕಿರೀಟಪ್ರಾಯವಾಗಿದೆ. 100 ಜನರಿಗೆ ತರಬೇತಿ ನೀಡುವ ತೀರ್ಮಾನ ಮಾಡಲಾಗಿದ್ದು ಟ್ವಿನ್ ಇಂಜಿನ್ ವಿಮಾನವನ್ನೂ ಇಲ್ಲಿ ತರಲಾಗಿದೆ. ಪೂರ್ಣಚಾಲಿತ ರನ್ವೇ ಪ್ರಾರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಸ್ಥಳದ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇದರೊಂದಿಗೆ ಮಹಿಳಾ ಸ್ವರಕ್ಷಣೆಗೆ ಪೊಲೀಸ್ ಇಲಾಖೆಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ರಕ್ಷಣೆಯಾಗಬೇಕು. ಮಹಿಳಾ ಸ್ವಯಂ ರಕ್ಷಣೆ ಶಾಲಾ ಕಾಜೇಜುಗಳಲ್ಲಿಯೂ ಹಮ್ಮಿಕೊಳ್ಳಬೇಕು. ಹೆಲಿಟೂರಿಸಂ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೇತಾಜಿಯವರ ಜನ್ಮದಿನದಂದು ಆಗುತ್ತಿದೆ. ಯುವಕರಿಗಾಗಿಯೇ ರೂಪಿಸಿರುವ ಕಾರ್ಯಕ್ರಮಗಳು ಇವು. ಇದು ಜ್ಞಾನದ ಶತಮಾನ ಅವಕಾಶಗಳ ಶತಮಾನವಾಗಿದ್ದು, ಅವುಗಳ ಉಪಯೋಗವನ್ನು ಪಡೆದು ಎಲ್ಲಾ ರಂಗಗಳಲ್ಲಿಯೂ ಮುಂದೆ ಬಂದಾಗ ಮಾತ್ರ ದೇಶ, ರಾಜ್ಯ ಮುಂದೆ ಬರುತ್ತದೆ ಎಂದರು.
ನೇತಾಜಿಯವರು ಕೇವಲ 48 ವರ್ಷಗಳಲ್ಲಿ ಮಾಡಿರುವ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆ ನೀಡಲಿದೆ. ಅವರ ಆದರ್ಶಗಳನ್ನು ಪಾಲಿಸಿ ಮತ್ತೊಮ್ಮೆ ಭಾರತೀಯತೆಯ ಕಿಚ್ಚನ್ನು ಹತ್ತಿಸೋಣ ಎಂದರು.