ಐಟಿ ರಿಫಂಡ್ ಕುರಿತು ಫೋನ್ ಕರೆ ಬಂದರೆ ಎಚ್ಚರ; ವಂಚನೆ ಜಾಲಕ್ಕೆ ಸಿಲುಕಿ 1 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ!
ನೆಟಿಜನ್‌ಗಳನ್ನು ಅಥವಾ ಇಂಟರ್ನೆಟ್ ಬಳಕೆದಾರರನ್ನು ಮೋಸಗೊಳಿಸಲು ಸೈಬರ್ ಸ್ಕ್ಯಾಮ್‌ಸ್ಟರ್‌ಗಳು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ. ಮೊಬೈಲ್ ಗೆ ಕರೆ ಮಾಡಿದವರು ತೆರಿಗೆದಾರರ ಖಾತೆಗಳಿಗೆ ಆದಾಯ ತೆರಿಗೆ ಮರುಪಾವತಿಯನ್ನು(income tax refund) ಠೇವಣಿ ಮಾಡಲು ಸಹಾಯ ಮಾಡುವ ಮೂಲಕ ತಮ್ಮ ಖೆಡ್ಡಾಗೆ ಬೀಳಿಸುವುದು ಹೊಸ ಉಪಾಯ.
Published: 24th January 2022 01:58 PM | Last Updated: 24th January 2022 02:12 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನೆಟಿಜನ್‌ಗಳನ್ನು ಅಥವಾ ಇಂಟರ್ನೆಟ್ ಬಳಕೆದಾರರನ್ನು ಮೋಸಗೊಳಿಸಲು ಸೈಬರ್ ಸ್ಕ್ಯಾಮ್‌ಸ್ಟರ್‌ಗಳು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ.ಮೊಬೈಲ್ ಗೆ ಕರೆ ಮಾಡಿ ತೆರಿಗೆದಾರರ ಖಾತೆಗಳಿಗೆ ಆದಾಯ ತೆರಿಗೆ ಮರುಪಾವತಿಯನ್ನು(income tax refund) ಠೇವಣಿ ಮಾಡಲು ಸಹಾಯ ಮಾಡುವ ಮೂಲಕ ತಮ್ಮ ಖೆಡ್ಡಾಗೆ ಬೀಳಿಸುವುದು ಹೊಸ ಉಪಾಯ.
ಈ ಸೈಬರ್ ವಂಚನೆಗೆ ಬಲಿಯಾದ ಹಲವರಲ್ಲಿ ಬೆಂಗಳೂರಿನ ಪ್ರೀತಿ ಕೆ ಕೂಡ ಒಬ್ಬರು, ತಮ್ಮ ಬ್ಯಾಂಕ್ ಶಾಖೆಯಲ್ಲಿ ಇವರ ಬ್ಯಾಂಕ್ ಖಾತೆ ಸಕ್ರಿಯವಾಗಿದ್ದರೂ ಕೂಡ ಬ್ಯಾಂಕ್ ಅಧಿಕಾರಿಗಳು ಇಲ್ಲಿ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿಲ್ಲದಿರುವುದು ವಿಪರ್ಯಾಸವೇ ಸರಿ. ಇದು ಪ್ರೀತಿಯವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಪ್ರೀತಿಯವರನ್ನು ಹೀಗೆ ಮೋಸದ ಬಲೆಗೆ ಬೀಳಿಸಿದ್ದು ಕೋಲ್ಕತ್ತಾದಿಂದ. ನಿಮ್ಮ ಖಾತೆಗೆ ಆದಾಯ ತೆರಿಗೆ ಮರುಪಾವತಿ ಮಾಡಲು ಸಹಾಯ ಮಾಡುತ್ತೇನೆ ಎಂಬ ನೆಪದಲ್ಲಿ ಪುರುಷನೊಬ್ಬ ಕರೆ ಮಾಡಿದ್ದಾನೆ. ಪೇಮೆಂಟ್ ಲಿಂಕ್ ನ್ನು ಜನರೇಟ್ ಮಾಡಿ ತಮ್ಮ ಖಾತೆಗೆ 1 ಲಕ್ಷ ರೂಪಾಯಿ ಕಟ್ಟಿ ಎಂದು ಹೇಳಿದ್ದಾನೆ. ಆತನ ಮಾತುಗಳನ್ನು ನಂಬಿದ ಪ್ರೀತಿ 1 ಲಕ್ಷ ರೂಪಾಯಿ ಪಾವತಿಸಿದ್ದಾರೆ.
ಇದನ್ನೂ ಓದಿ: ಬಿಹಾರದ ಈ 'ಕುಖ್ಯಾತ' ಗ್ರಾಮದಲ್ಲಿ ಅಪರಾಧ ಎಸಗಲು ಮಕ್ಕಳಿಗೆ ತರಬೇತಿ!
ಪೇಟಿಮ್ ಮೂಲಕ ಪ್ರೀತಿ ಆತನ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಎಸ್ ಬಿಐ ಖಾತೆಗೆ ಹಣ ವರ್ಗಾವಣೆ ಮಾಡಿದ ಕೇವಲ ಮೂರೇ ನಿಮಿಷಗಳಲ್ಲಿ ಆತ ಹಣವನ್ನು ಖಾತೆಯಿಂದ ಎಗರಿಸಿದಾಗಲೇ ಪ್ರೀತಿಗೆ ತಾನು ಮೋಸ ಹೋಗಿದ್ದು ಅರಿವಿಗೆ ಬಂದಿದ್ದು. ಕೂಡಲೇ ಪ್ರೀತಿ ಸೈಬರ್ ಕ್ರೈಂ ಪೊಲೀಸರು ಮತ್ತು ಕೋಲ್ಕತ್ತಾದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಹರಿಂಘಟ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು. ಆದರೆ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಖಾತೆಗಳು ಮತ್ತು ವಹಿವಾಟುಗಳ ವಿವರಗಳಂತಹ ಮಾಹಿತಿಯನ್ನು ಹೊಂದಿದ್ದರೂ ಸಹ, ಅಪರಾಧವನ್ನು ತನಿಖೆ ಮಾಡಲು ಮತ್ತು ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದರು.
ಪ್ರೀತಿಯ ಕುಟಂಬಸ್ಥರು ಈ ಅಕ್ರಮ, ಅವ್ಯವಹಾರದ ಹಿಂದೆ ಬಹಳ ದೊಡ್ಡ ಜಾಲವಿದೆ ಎಂದು ಶಂಕಿಸಿದ್ದಾರೆ. ರಾಮ್ ಸಿಂಗ್ ಎಂದು ಹೆಸರು ಹೇಳಿಕೊಂಡು ವ್ಯಕ್ತಿ ಕರೆ ಮಾಡಿದ್ದು ಆತನ ದೂರವಾಣಿ ಸಂಖ್ಯೆ 09394025870 ಆಗಿದೆ ಎಂದು ಪೊಲೀಸರಿಗೆ ನೀಡಿದ್ದಾರೆ.
ಪ್ರೀತಿ ಆರಂಭದಲ್ಲಿ ಫೋನ್ ಪೇ ಮೂಲಕ ಆತನ ಪೇಟಿಮ್ ಗೆ ಹಣವನ್ನು ವರ್ಗಾಯಿಸಿದ್ದು ನಂತರ ಅಲ್ಲಿಂದ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕುಗಳಿಗೆ ವರ್ಗಾವಣೆಯಾಗಿದೆ. ಈ ಮೋಸದ ಕ್ರಿಮಿನಲ್ ವ್ಯವಹಾರಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅವರು ತನಿಖೆ ನಡೆಸಿ ಸಹಕರಿಸಲು ಸಿದ್ಧರಿಲ್ಲ. ಆರೋಪಿಯ ಫೋನ್ ನಂಬರ್ ಮತ್ತು ಬ್ಯಾಂಕ್ ಖಾತೆಗಳ ವಿವರ ವಿಭಿನ್ನ ಹೆಸರುಗಳಲ್ಲಿವೆ ಎಂದು ಪ್ರೀತಿಯ ಕುಟುಂಬಸ್ಥರು ಕೋಲ್ಕತ್ತಾದಿಂದ ಮಾಹಿತಿ ನೀಡಿದ್ದಾರೆ.