80 ಮಂದಿ ಐಟಿಐ ನೌಕರರ ವಜಾ: ಕೇಂದ್ರ ಸರ್ಕಾರ ವಿರುದ್ಧ ವಿಪಕ್ಷ ನಾಯಕರ ಕಿಡಿ
ಸಾರ್ವಜನಿಕ ವಲಯ ಉದ್ಯಮವಾದ ಐಟಿಐ ಕಾರ್ಖಾನೆಯ ಸುಮಾರು 80 ನೌಕರರನ್ನು ವಜಾಗೊಳಿಸಿದ ಬಗ್ಗೆ ಕೇಂದ್ರ ಸರ್ಕಾರವನ್ನು ವಿಪಕ್ಷ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
Published: 24th January 2022 01:21 PM | Last Updated: 24th January 2022 01:21 PM | A+A A-

ನೌಕರರ ಪ್ರತಿಭಟನೆ
ಬೆಂಗಳೂರು: ಸಾರ್ವಜನಿಕ ವಲಯ ಉದ್ಯಮವಾದ ಐಟಿಐ ಕಾರ್ಖಾನೆಯ ಸುಮಾರು 80 ನೌಕರರನ್ನು ವಜಾಗೊಳಿಸಿದ ಬಗ್ಗೆ ಕೇಂದ್ರ ಸರ್ಕಾರವನ್ನು ವಿಪಕ್ಷ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿರುದ್ಯೋಗಿಗಳು ಕಳೆದ 55 ದಿನಗಳಿಂದ ಕಾರ್ಖಾನೆ ಆವರಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, 80 ಐಟಿಐ ನೌಕರರು ಕಳೆದ 55 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಅವರ ಬೇಡಿಕೆಗಳನ್ನು ಆಲಿಸದಿರುವುದು ದುರದೃಷ್ಟಕರವಾಗಿದೆ.
PSUನಿಂದ ಹೂಡಿಕೆಗಳನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವುದರ ಪ್ರಯತ್ನದ ಭಾಗವೇ ನೌಕರರ ಕಡಿತವಾಗಿರಬಹುದು. ನೌಕರರನ್ನು ಕೆಲಸದಿಂದ ವಜಾಗೊಳಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೈತಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಐಟಿಐ ಆಡಳಿತವು ಪ್ರತಿಭಟನಾನಿರತ ಕಾರ್ಮಿಕರನ್ನು ಮರುಸೇರ್ಪಡೆಗೊಳಿಸಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎನ್ನುತ್ತಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, "ಭಾರತದ ಅತಿದೊಡ್ಡ ಪಿಎಸ್ಯುಗಳಲ್ಲಿ ನಡೆಯುತ್ತಿರುವ ಕಾರ್ಮಿಕರ ಮುಷ್ಕರವು ಬಿಜೆಪಿ ಸರ್ಕಾರವು ಸರಣಿ ವಿನಾಶಕಾರಿ ಕ್ರಮಗಳ ಮೂಲಕ ಕ್ಷೇತ್ರವನ್ನು ಹೇಗೆ ಹಾಳು ಮಾಡಿದೆ ಎಂಬುದನ್ನು ತೋರಿಸುತ್ತದೆ" ಎಂದು ಟೀಕಿಸಿದ್ದಾರೆ.
ಇಷ್ಟು ದಿನವಾದರೂ ನೌಕರರ ಸಮಸ್ಯೆಗಳನ್ನು ಏಕೆ ಬಗೆಹರಿಸಲಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ ಸೈಯದ್ ನಾಸಿರ್ ಹುಸೇನ್ ಕೇಳುತ್ತಾರೆ. ಸಾಮಾಜಿಕ ಕಾರ್ಯಕರ್ತ ಲಿಯೊ ಸಾಲ್ಡನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಐಟಿಐ ನೌಕರರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಕಾರಣಕ್ಕೆ ಬೆಂಗಳೂರು ಈಗ ನೌಕರರನ್ನು ಹಿಂಬಡ್ತಿಗೊಳಿಸುತ್ತಿದೆ. ಕಾರ್ಮಿಕರ ಸಂಘಗಳ ವಿರುದ್ಧ ತುರ್ತು ಯುಗದ ಕಾನೂನುಗಳನ್ನು ಜಾರಿಗೊಳಿಸುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳುತ್ತಾರೆ.