1.88 ಕೋಟಿ ರೂ. ನಗದು, ಚಿನ್ನ ಸಾಗಿಸುತ್ತಿದ್ದ ರಾಜಸ್ಥಾನದ ವ್ಯಕ್ತಿ ಮಂಗಳೂರಿನಲ್ಲಿ ಬಂಧನ
1.88 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನ ಸಾಗಿಸುತ್ತಿದ್ದ ರಾಜಸ್ಥಾನದ ಮೂಲದ 33 ವರ್ಷದ ವ್ಯಕ್ತಿಯನ್ನು ಮಂಗಳೂರಿನಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್ ಪಿಎಫ್) ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.
Published: 24th January 2022 07:53 PM | Last Updated: 24th January 2022 07:53 PM | A+A A-

ರಾಜಸ್ಥಾನದ ವ್ಯಕ್ತಿ ಮಂಗಳೂರಿನಲ್ಲಿ ಬಂಧನ
ಮಂಗಳೂರು: 1.88 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನ ಸಾಗಿಸುತ್ತಿದ್ದ ರಾಜಸ್ಥಾನದ ಮೂಲದ 33 ವರ್ಷದ ವ್ಯಕ್ತಿಯನ್ನು ಮಂಗಳೂರಿನಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್ ಪಿಎಫ್) ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ರಾಜಸ್ಥಾನದ ಉದೈಪುರ್ ಜಿಲ್ಲೆಯ ಮಹೇಂದ್ರ ಸಿಂಗ್ ರಾವ್ ಎಂದು ಗುರುತಿಸಲಾಗಿದ್ದು, ಮುಂಬೈ ಎಲ್ಟಿಟಿ-ಎರ್ನಾಕುಲಂ ತುರೊಂತೊ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಪೊಲೀಸರ ಪರಿಶೀಲನೆ ವೇಳೆ ಮಹೇಂದ್ರ ಸಿಂಗ್ ಬಳಿ ಭಾರಿ ಪ್ರಮಾಣದ ನಗದು ಹಾಗೂ ಚಿನ್ನ ಪತ್ತೆಯಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ 1.48 ಕೋಟಿ ರೂ.ನಗದು ಮತ್ತು 40 ಲಕ್ಷ ರೂಪಾಯಿ ಮೌಲ್ಯದ 800 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.
ಇದನ್ನು ಓದಿ: ಮಂಗಳೂರು: ಸೀ ಫುಡ್ ಘಟಕದಲ್ಲಿ ರಾಸಾಯನಿಕ ಸೋರಿಕೆ, 26 ಮಂದಿ ಅಸ್ವಸ್ಥ
ತಾನು ಕೇರಳದ ಕೋಝಿಕೋಡ್ನ ಶುಭ ಗೋಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದು, ಅದರ ಮಾಲೀಕ ಪ್ರವೀಣ್ ಸಿಂಗ್ ತನಗೆ ಗೊತ್ತಿರುವ ಮುಂಬೈನಲ್ಲಿರುವ ವ್ಯಕ್ತಿಯೊಬ್ಬರಿಗೆ ಈ ನಗದು ಮತ್ತು ಚಿನ್ನವನ್ನು ನೀಡಲು ಕಳುಹಿಸಿದ್ದಾರೆ ಎಂದು ರಾಜಸ್ಥಾನ ಮೂಲದ ಪ್ರಯಾಣಿಕ ತಿಳಿಸಿರುವುದಾಗಿ ಆರ್ಪಿಎಫ್ ಹೇಳಿದೆ.