ಶತಮಾನಗಳ ಹಿಂದಿನ ಕಥೆಗಳನ್ನು ಹೇಳುವ ಕೊಡಗಿನ ಪುರಾತನ ಕಟ್ಟಡ; ಪುನರುಜ್ಜೀವನಕ್ಕಾಗಿ ನಿರೀಕ್ಷೆ
ನಂದಿಯನ್ನು ಕೆತ್ತಿರುವ ಮೂರು ಕಲ್ಲಿನ ಕಂಬಗಳು. ಶಿಥಿಲಗೊಂಡಿರುವ ಕಟ್ಟಡ. ಇದು ಮಡಿಕೇರಿ ತಾಲೂಕಿನ ಮುರ್ನಾಡ್ ನಲ್ಲಿ ಕಂಡು ಬರುವ ಶತಮಾನಗಳಷ್ಟು ಹಿಂದಿನ ಇತಿಹಾಸವಿರುವ ಮನೆಯಾಗಿದೆ.
Published: 25th January 2022 07:34 PM | Last Updated: 25th January 2022 08:04 PM | A+A A-

ಕೊಡಗಿನ ಪುರಾತನ ಕಟ್ಟಡ
ಮಡಿಕೇರಿ: ನಂದಿಯನ್ನು ಕೆತ್ತಿರುವ ಮೂರು ಕಲ್ಲಿನ ಕಂಬಗಳು. ಶಿಥಿಲಗೊಂಡಿರುವ ಕಟ್ಟಡ. ಇದು ಮಡಿಕೇರಿ ತಾಲೂಕಿನ ಮುರ್ನಾಡ್ ನಲ್ಲಿ ಕಂಡು ಬರುವ ಶತಮಾನಗಳಷ್ಟು ಹಿಂದಿನ ಇತಿಹಾಸವಿರುವ ಮನೆಯಾಗಿದೆ.
18 ನೇ ಶತಮಾನ ಅಂದರೆ ಕನಿಷ್ಟ 3 ಶತಮಾನಗಳಷ್ಟು ಹಿಂದಿನ ಕಟ್ಟಡ ಗೀಚಿದ ಗುರುತುಗಳಿಂದ ತುಂಬಿದೆ. ಒಂದು ವೇಳೆ ಈ ಪುರಾತನ ಕಟ್ಟಡವನ್ನು ಪುನರುಜ್ಜೀವನಗೊಳಿಸಿದರೆ ಇದು ಕೊಡಗಿನ ಇತಿಹಾಸ ಹಾಗೂ ಅದರ ಖ್ಯಾತ ರಾಜರ ಕಥೆಗಳನ್ನು ಹೇಳುತ್ತದೆ.
ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಹಾಗೂ ಅದನ್ನು ಪುನರುಜ್ಜೀವನಗೊಳಿಸುವುದಕ್ಕೆ ಕೊಡಗಿನ ಗ್ರಾಮಗಳಲ್ಲಿ ಸಮೀಕ್ಷೆ ನಡೆಸುವುದರಲ್ಲಿ ಪುರಾತತ್ವ ಇಲಾಖೆ ತೊಡಗಿದೆ. ಇಂತಹ ಒಂದು ಸಮೀಕ್ಷೆಯಲ್ಲಿ ಮುರ್ನಾಡ್ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದೇ ಈ 18 ನೇ ಶತಮಾನದಷ್ಟು ಪುರಾತನವಾದ ಕಟ್ಟಡ. ಈ ಕಟ್ಟಡ ಕಾಫಿ ಎಸ್ಟೇಟ್ ಗಳ ನಡುವೆ ಪತ್ತೆಯಾಗಿತ್ತು.
ಗ್ರಾಮ ಸಮೀಕ್ಷೆಗಳಲ್ಲಿ ಈ ಪ್ರದೇಶದ ಬಗ್ಗೆ ಸ್ಥಳಿಯರಿಂದ ತಿಳಿದುಕೊಂಡೆವು ಎನ್ನುತ್ತಾರೆ ಕೊಡಗು ಜಿಲ್ಲಾ ವಸ್ತುಸಂಗ್ರಹಾಲಯದ ಮೇಲ್ವಿಚಾರಕರಾದ ರೇಖಾ.
ಮುರ್ನಾಡ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್ ಹರೀಶ್ ಕಿಗ್ಗಲ್ ಅವರ ಸಹಾಯದಿಂದ ಕಟ್ಟಡದ ಸುತ್ತಮುತ್ತ ಬೆಳೆದಿದ್ದ ಕಳೆಯನ್ನು ತೆಗೆಯಲಾಯಿತು. ಈ ಮನೆ ಕೊಡಗನ್ನು ಒಂದು ಕಾಲದಲ್ಲಿ ಆಳಿದ್ದ ರಾಜ ದೊಡ್ಡ ವೀರ ರಾಜೇಂದ್ರ ಅವರ ಆಪ್ತ ಹೊಂಬಾಳೆ ನಾಯಕನ ಮನೆ ಎಂದು ಹೇಳಲಾಗುತ್ತದೆ" ಎಂದು ಬರಹಗಾರ ನಾಗೇಶ್ ಕಲೂರು ಹೇಳುತ್ತಾರೆ.
ಇದನ್ನೂ ಓದಿ: ಕೊಡವರ ಹಬ್ಬಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ...
ಐತಿಹಾಸಿಕ ದಾಖಲೆಗಳ ಪ್ರಕಾರ ಹೊಂಬಾಳೆ ನಾಯಕ ಈ ಮನೆಯಲ್ಲಿ 18 ನೇ ಶತಮಾನದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಜೀವಿಸಿದ್ದ. ರಾಜ ಮನೆತನದ ಆಪ್ತನಾಗಿರುವ ಹೊಂಬಾಳೆ ನಾಯಕ, ರಾಜನಿಗೆ ಟಿಪ್ಪು ಸುಲ್ತಾನನ ಬಂಧಿಖಾನೆಯಿಂದ ಬಿಡುಗಡೆಯಾಗುವುದಕ್ಕೆ ಸಹಾಯ ಮಾಡಿದ್ದ. ಹೊಂಬಾಳೆ ನಾಯಕನ ವಂಶಕ್ಕೆ ಸಂಬಂಧಪಟ್ಟವರ ಸ್ವಾಧೀನದಲ್ಲಿ ಈ ಪುರಾತನ ಕಟ್ಟಡ ಇತ್ತು. ಅವರು ಕಥೂರು ನಲ್ಲಿ ನೆಲೆಸಿದ್ದಾರೆ. ಪುರಾತತ್ವ ಇಲಾಖೆ ಈಗ ಈ ಕಟ್ಟಡದ ಮಹತ್ವ ಅರಿತಿದೆ. ಆದರೆ ಅದನ್ನು ಮರುಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ.