ಕೋವಿಡ್ ಸೋಂಕಿತರ ಹೋಮ್ ಐಸೋಲೇಷನ್ ಬಳಿಕ ನೆಗೆಟಿವ್ ವರದಿ ಕಡ್ಡಾಯವಲ್ಲ: ಗೌರವ್ ಗುಪ್ತಾ
ಕೊರೋನಾ ಸೋಂಕಿತರು ಹೋಮ್ ಐಸೋಲೇಷನ್ ಮುಗಿಸಿದ ಬಳಿಕ ಕೋವಿಡ್ ನೆಗೆಟಿವ್ ಪರೀಕ್ಷೆ ಕಡ್ಡಾಯವಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
Published: 25th January 2022 09:53 AM | Last Updated: 25th January 2022 01:47 PM | A+A A-

ಗೌರವ್ ಗುಪ್ತಾ
ಬೆಂಗಳೂರು: ಕೊರೋನಾ ಸೋಂಕಿತರು ಹೋಮ್ ಐಸೋಲೇಷನ್ ಮುಗಿಸಿದ ಬಳಿಕ ಕೋವಿಡ್ ನೆಗೆಟಿವ್ ಪರೀಕ್ಷೆ ಕಡ್ಡಾಯವಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪಾಸಿಟಿವ್ ಬಂದವರು 7 ದಿನಗಳು ಹೋಮ್ ಐಸೋಲೇಷನ್ನಲ್ಲಿರಬೇಕು. ಐಸೋಲೇಷನ್ ಬಳಿಕ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿದ್ದಲ್ಲಿ ಯಾವುದೇ ರೀತಿಯ ನೆಗೆಟಿವ್ ಸರ್ಟಿಫೀಕೆಟ್ನ ಅವಶ್ಯಕತೆ ಇರುವುದಿಲ್ಲ. ಆದರೆ ಸೋಂಕಿನ ಲಕ್ಷಣಗಳು ಇದ್ದಲ್ಲಿ ಇನ್ನು ಸ್ಪಲ್ಪ ದಿನ ಹೋಮ್ ಐಸೋಲೇಷನ್ನಲ್ಲಿ ಇರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹೋಮ್ ಐಸೋಲೇಷನ್ನಲ್ಲಿದ್ದವರು ಸಾರ್ವಜನಿಕ ತಪಾಸಣೆ ವೇಳೆ 7 ದಿನಗಳ ಹಿಂದಿನ ಕೋವಿಡ್ ಪಾಸಿಟಿವ್ ವರದಿಯನ್ನು ತೋರಿಸಿ ಹೋಮ್ ಐಸೋಲೇಷನ್ನಲ್ಲಿರುವುದರ ಕುರಿತು ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಓಮಿಕ್ರಾನ್ ಕೊರೋನಾದ ಕೊನೆಯ ರೂಪಾಂತರಿಯಲ್ಲ; ಇನ್ನೂ ರೂಪಾಂತರಿಗಳು ಬರಬಹುದು: ಡಬ್ಲ್ಯೂಎಚ್ಒ ಎಚ್ಚರಿಕೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಹೋಮ್ ಐಸೋಲೇಶನ್ಗೆ ಮಾರ್ಗಸೂಚಿಗಳ ಪ್ರಕಾರ 7 ದಿನಗಳ ಐಸೋಲೇಶನ್ ನಂತರ ನೆಗೆಟಿವ್ ಪರೀಕ್ಷೆ ಅಗತ್ಯವಿಲ್ಲ ಎಂದು ಹೇಳಿದರು.
ಉದ್ಯೋಗಿಗಳು ಕೋವಿಡ್ ನೆಗೆಟಿವ್ ವರದಿ ನೀಡಬೇಕೆಂದು ಕಂಪನಿಗಳು ಒತ್ತಾಯಿಸುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುಪ್ತಾ, ಇದು ಸರಿಯಲ್ಲ, ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸುತ್ತಾರೆ ಎಂದು ಹೇಳಿದರು.