ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಹುಲಿಗಳಿರುವ ಸಾಧ್ಯತೆ
ಕುತೂಹಲ ಹಾಗೂ ಆತಂಕಕಾರಿಯಾದ ಸುದ್ದಿಯೊಂದು ಇಲ್ಲಿದೆ. ಆಂತರಿಕ ಮೌಲ್ಯಮಾಪನಗಳು ಮತ್ತು ಕ್ಯಾಮೆರಾ ಟ್ರ್ಯಾಪ್ ವಿವರಗಳ ಪ್ರಕಾರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದಕ್ಕಿಂತ ಹೆಚ್ಚು ಹುಲಿಗಳು ಕಾಣಿಸಿಕೊಂಡಿವೆ.
Published: 27th January 2022 10:08 AM | Last Updated: 27th January 2022 01:57 PM | A+A A-

ಹುಲಿ ಸಾಂದರ್ಭಿಕ ಚಿತ್ರ
ಬೆಂಗಳೂರು: ಕುತೂಹಲ ಹಾಗೂ ಆತಂಕಕಾರಿಯಾದ ಸುದ್ದಿಯೊಂದು ಇಲ್ಲಿದೆ. ಆಂತರಿಕ ಮೌಲ್ಯಮಾಪನಗಳು ಮತ್ತು ಕ್ಯಾಮೆರಾ ಟ್ರ್ಯಾಪ್ ವಿವರಗಳ ಪ್ರಕಾರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದಕ್ಕಿಂತ ಹೆಚ್ಚು ಹುಲಿಗಳು ಕಾಣಿಸಿಕೊಂಡಿವೆ.
ಪಶ್ಚಿಮ ಘಟ್ಟಗಳ ತುದಿಯಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ತಮಿಳುನಾಡು ಅರಣ್ಯ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದು ಕಾಸ್ಮೋಪಾಲಿಟನ್ ಮತ್ತು ವೇಗವಾಗಿ ಬೆಳೆಯುತ್ತಿರುವ ನಗರವಾದ ಬೆಂಗಳೂರನ್ನು ಸಹ ಹೊಂದಿದೆ.
ಇಲ್ಲಿ ಮೊದಲ ಬಾರಿಗೆ 2015ರಲ್ಲಿ ಕಾಡು ಹುಲಿ ಕಾಣಿಸಿಕೊಂಡಿತ್ತು. ಅಂದು ಗಂಡು ಹುಲಿ ಎಂಬುದು ತಿಳಿದುಬಂದಿತ್ತು. ಆದರೆ, ಇದೀಗ ಎರಡು ಹುಲಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ. ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಬನ್ನೇರುಘಟ್ಟ ಅರಣ್ಯ ಪ್ರದೇಶಗಳನ್ನು ಸಂಪರ್ಕಿಸುವ ಪ್ರದೇಶದಲ್ಲಿ ಹುಲಿಗಳ ಸಂತತಿ ವೃದ್ಧಿಯೂ ಕಂಡುಬರುತ್ತಿದೆ. ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಸುಮಾರು 12 ಹುಲಿಗಳು ದಾಖಲಾಗಿರುವುದಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶೀಘ್ರದಲ್ಲೇ ಚಿರತೆ ಸಫಾರಿ ಆರಂಭ
ಈ ಎರಡು ಪ್ರದೇಶಗಳು ಹುಲಿಗಳ ಆವಾಸಕ್ಕೆ ಸೂಕ್ತ ಸ್ಥಳವಾಗಿದ್ದು, ಪರಿಣಾಮಕಾರಿ ಸಂರಕ್ಷಣಾ ವಿಧಾನಕ್ಕೆ ಒತ್ತು ನೀಡುವಂತೆ 2014 ರಿಂದ, ತಜ್ಞರು ಮತ್ತು ಸಂರಕ್ಷಣಾ ತಜ್ಞರು ಹೇಳುತ್ತಿದ್ದಾರೆ. ಆದರೆ ಕ್ಷಿಪ್ರ ನಗರೀಕರಣದಿಂದ ಅತಿಕ್ರಮಣದ ಭೀತಿ ಎದುರಾಗಿದೆ. ಇಲ್ಲಿ ಮನುಷ್ಯ-ಆನೆಗಳ ಘರ್ಷಣೆ ಮತ್ತು ಚಿರತೆ ಕಾಣಿಸಿಕೊಂಡಿರುವ ಹಲವಾರು ಪ್ರಕರಣಗಳು ವರದಿಯಾಗಿವೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಗಣಿಗಾರಿಕೆ, ಲೇಔಟ್ ನಿರ್ಮಾಣಕ್ಕೆ ಒತ್ತುವರಿ ಮತ್ತಿತರ ಕಾಟ ಹೆಚ್ಚಾಗಿದೆ. ವಸತಿ ಪ್ರದೇಶಗಳು ಮತ್ತು ಕೈಗಾರಿಕೀಕರಣಕ್ಕೆ ದಾರಿ ಮಾಡಿಕೊಡಲು ರಾಜ್ಯ ಸರ್ಕಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬಫರ್ ವಲಯವೆಂದು ಡಿನೋಟಿಫೈ ಮಾಡಲು ಮತ್ತು ಮರು ವ್ಯಾಖ್ಯಾನಿಸಲು ಪ್ರಸ್ತಾಪಿಸಿದೆ.
ಒಂದೆಡೆ ಕರ್ನಾಟಕ ಹುಲಿ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರಬೇಕೆಂದು ಬಯಸಿ, ಇನ್ನೊಂದೆಡೆ ಅರಣ್ಯೇತರ ಕಾಮಗಾರಿಗಳಿಗೆ ಅರಣ್ಯ ಪ್ರದೇಶಗಳನ್ನು ಡಿನೋಟಿಫೈ ಮಾಡುತ್ತಿರುವುದು ವಿಪರ್ಯಾಸ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.