ರಾಜ್ಯದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯ ಬಜೆಟ್ ನೀಡಬೇಕು: ಹುಟ್ಟುಹಬ್ಬ ಅಂಗವಾಗಿ ಗೋ ಪೂಜೆ ಸಲ್ಲಿಸಿ ಸಿಎಂ ಬೊಮ್ಮಾಯಿ ಹೇಳಿಕೆ, ಗಣ್ಯರಿಂದ ಶುಭಾಶಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ(CM Basavaraja Bommai) ಇಂದು(ಜ.28) ಶುಕ್ರವಾರ ಡಬಲ್ ಸಂಭ್ರಮ. ಒಂದೆಡೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಆರು ತಿಂಗಳಾಗಿದ್ದರೆ(ಕಳೆದ ವರ್ಷ ಜುಲೈ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ) ಇನ್ನೊಂದೆಡೆ, ಇಂದು ಅವರ 61ನೇ ಹುಟ್ಟುಹಬ್ಬ.
Published: 28th January 2022 10:09 AM | Last Updated: 31st January 2022 12:20 PM | A+A A-

ಬೆಂಗಳೂರಿನ ಆರ್ ಟಿ ನಗರ ನಿವಾಸದಲ್ಲಿ ಕುಟುಂಬಸ್ಥರ ಜೊತೆ ಗೋ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ(CM Basavaraja Bommai) ಇಂದು(ಜ.28) ಶುಕ್ರವಾರ ಡಬಲ್ ಸಂಭ್ರಮ. ಒಂದೆಡೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಆರು ತಿಂಗಳಾಗಿದ್ದರೆ(ಕಳೆದ ವರ್ಷ ಜುಲೈ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ) ಇನ್ನೊಂದೆಡೆ, ಇಂದು ಅವರ 61ನೇ ಹುಟ್ಟುಹಬ್ಬ.
ಈ ಸಂದರ್ಭದಲ್ಲಿ ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿ ಮತ್ತು ಕುಟುಂಬಸ್ಥರ ಜೊತೆಗೂಡಿ ಗೂಪೂಜೆ ನೆರವೇರಿಸಿದರು.
ಮುಖ್ಯಮಂತ್ರಿ @BSBommai ಅವರು ಇಂದು ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮ್ಮ ಆರ್ ಟಿ ನಗರ್ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. pic.twitter.com/2tQ9oBrBRW— CM of Karnataka (@CMofKarnataka) January 28, 2022
ಮುಖ್ಯಮಂತ್ರಿಗೆ ಶುಭಾಶಯ: ಸಿಎಂ ಬೊಮ್ಮಾಯಿಯವರ 61ನೇ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಂಸದರು, ಶಾಸಕರು, ಬಿಜೆಪಿ ನಾಯಕರು, ವಿಪಕ್ಷ ನಾಯಕರು ಶುಭ ಕೋರಿದ್ದಾರೆ.
ಗೂ ಪೂಜೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿಗಳು ನಿನ್ನೆಯೇ ಕರೆ ಮಾಡಿ ಶುಭ ಕೋರಿದರು. ಇಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Best wishes to Karnataka’s CM Shri @BSBommai Ji on his birthday. He is making outstanding efforts to boost Karnataka’s growth trajectory and ensure a life of dignity as well as prosperity for the poor. Praying for his long and healthy life.
— Narendra Modi (@narendramodi) January 28, 2022
ಗೃಹ ಸಚಿವ ಅಮಿತ್ ಶಾ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ರಾಜ್ಯದ ನಾಯಕರು ಶುಭ ಕೋರುತ್ತಿದ್ದಾರೆ, ನಾಯಕರ ಶುಭಾಶಯ ಮತ್ತಷ್ಟು ಸ್ಫೂರ್ತಿ ನೀಡುತ್ತಿದೆ, ಎಲ್ಲರಿಗೂ ಧನ್ಯವಾದಗಳು ಎಂದು ಹರ್ಷ ವ್ಯಕ್ತಪಡಿಸಿದರು.
Warm birthday greetings to the Chief Minister of Karnataka Shri @BSBommai Ji. May Almighty bless him with a long and healthy life in service of the people.
— Amit Shah (@AmitShah) January 28, 2022
ಮಾನ್ಯ ಮುಖ್ಯಮಂತ್ರಿಗಳು, ಆತ್ಮೀಯರೂ ಆಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.@BSBommai pic.twitter.com/wDQ1SJt3is
— B.S. Yediyurappa (@BSYBJP) January 28, 2022
ಒಳ್ಳೆಯ ಬಜೆಟ್ ನೀಡಬೇಕು: ಹಿರಿಯರು, ಹೈಕಮಾಂಡ್ ಮಾರ್ಗದರ್ಶನದಲ್ಲಿ, ಕಿರಿಯರ ಸಹಕಾರದಲ್ಲಿ ಕೆಲಸ ಮಾಡಲು ಉತ್ಸಾಹ, ಪ್ರೋತ್ಸಾಹ ಸಿಗುತ್ತಿದೆ. ರಾಜ್ಯವನ್ನು ಇನ್ನಷ್ಟು ಮುನವ್ನಡೆಸಬೇಕಿದೆ. ನನ್ನ ನೇತೃತ್ವದ ಸರ್ಕಾರಕ್ಕೆ ಆರು ತಿಂಗಳಾಗಿದೆ. ಕೋವಿಡ್ ನಿರ್ವಹಣೆ ಈ ಸಂದರ್ಭದಲ್ಲಿ ಆದ್ಯತೆಯಾಗಿದೆ. ರಾಜ್ಯ ಸರ್ಕಾರದ ಕೋವಿಡ್ ನಿರ್ವಹಣೆ, ಪ್ರವಾಹ ನಿರ್ವಹಣೆ ಬಗ್ಗೆ ಮತ್ತು ಆರು ತಿಂಗಳ ಕೆಲಸದ ಬಗ್ಗೆ ಕಿರುಹೊತ್ತಿಗೆ ಬಿಡುಗಡೆ ಮಾಡುತ್ತೇವೆ. ರಾಜ್ಯದ ಆರ್ಥಿಕ ಹಿತದೃಷ್ಟಿಯಿಂದ ಉತ್ತಮ ಬಜೆಟ್ ನೀಡಬೇಕಿದೆ. ಇನ್ನೊಂದು ವರ್ಷದಲ್ಲಿ ಚುನಾವಣೆ ಕೂಡ ಬರುತ್ತಿದೆ. ಒಟ್ಟಾರೆ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಬಜೆಟ್ ನೀಡಬೇಕಿದೆ ಎಂದರು.
ಇದನ್ನೂ ಓದಿ: ಅಧಿಕಾರಕ್ಕೆ ಬಂದು 6 ತಿಂಗಳು, ಜನ್ಮದಿನದ ಸಂಭ್ರಮದಲ್ಲಿ ಸಿಎಂ ಬೊಮ್ಮಾಯಿ: ಸಾಧನಾ ಪುಸ್ತಕ ಲೋಕಾರ್ಪಣೆ
ಬಳಿಕ ಸಿಎಂ ಆಪ್ತರ ಜೊತೆಗೂಡಿ ಬಾಲಬ್ರೂಯಿ ಸಮೀಪವಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸರ್ಕಾರದ ಆರು ತಿಂಗಳ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಯಾಗುತ್ತಿದೆ.