
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಆರ್ಭಟದ ನಡುವಲ್ಲೇ ಗುರುವಾರ ಒಂದೇ ದಿನ 67,236 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ.
ಮೂರನೇ ಅಲೆಯಲ್ಲಿ ಮೊದಲ ಬಾರಿಗೆ ಜನವರಿ 18 ರಂದು 40ಸಾವಿರಕ್ಕಿಂತ ಹೆಚ್ಚು ಪ್ರಕರಣ ವರದಿಯಾಗಿತ್ತು. ಅಲ್ಲಿಂದ ನಿರಂತರವಾಗಿ 40 ಸಾವಿರ ಮೀರಿ ಹೊಸ ಪ್ರಕರಣಗಳು ವರದಿಯಾಗಿದ್ದವು. ಗುರುವಾರ ಹೊಸ ಪ್ರಕರಣಗಳ ಸಂಖ್ಯೆ 38,754ಕ್ಕೆ ಇಳಿದಿದೆ,
ಇದನ್ನೂ ಓದಿ: ಕೋವಿಡ್-19: ರಾಜ್ಯದಲ್ಲಿ ನಿನ್ನೆ ದಾಖಲೆಯ 67,000 ಮಂದಿ ಗುಣಮುಖ!
ಕೋವಿಡ್ ಪರೀಕ್ಷೆಯ ಪ್ರಮಾಣ ಕೂಡ 1.86 ಲಕ್ಷದಷ್ಟಿತ್ತು. ಪಾಸಿಟಿವಿಟಿ ದರ ಕೂಡ ಶೇ.20.44ಕ್ಕೆ ಇಳಿದಿದೆ. ಇದೇ ವೇಳೆ ಒಂದೇ ದಿನ 67,236 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡು ಹೊಸ ದಾಖಲೆ ನಿರ್ಮಾಣವಾಗಿದೆ.
ಎರಡನೇ ಅಲೆಯ ವೇಳೆ ಮೇ.24ಕ್ಕೆ 57,333 ಮಂದಿ ಒಂದೇ ದಿನ ಗುಣಮುಖ ಹೊಂದಿ ದಾಖಲೆ ಸೃಷ್ಟಿಯಾಗಿತ್ತು. ರಾಜ್ಯದಲ್ಲೂ ಕಳೆದ ನಾಲ್ಕು ದಿನಗಳಿಂದ ಪ್ರತಿ ದಿನ 40 ಸಾವಿರಕ್ಕಿಂತ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಇದರಂತೆ ಮರಣ ಪ್ರಮಾಣ ಕೂಡ ಶೇ.1.04ಕ್ಕೆ ಇಳಿಕೆಯಾಗಿದೆ.
ರಾಜ್ಯದಲ್ಲಿ ನಿನ್ನೆ ಗುಣಮುಖರಾದ 67 ಸಾವಿರ ಮಂದಿಯ ಪೈಕಿ ಬೆಂಗಳೂರು ಒಂದರಲ್ಲಿಯೇ 43,997 ಗುಣಮುಖರಾಗಿದ್ದಾರೆ. ಅಲ್ಲದೆ, ನಗರದಲ್ಲಿ ಮರಣ ಪ್ರಮಾಣ ಶೇ.1ಕ್ಕಿಂತ ಕಡಿಮೆ ಕಂಡು ಬಂದಿದೆ, ನಗರದಲ್ಲಿ ಮರಣ ಪ್ರಮಾಣ ಶೇ.0.99ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ: ಕೋವಿಡ್ ಸೋಂಕು ತಡೆಯಲು ಪರಿಣಾಮಕಾರಿ ಕ್ರಮಗಳ ಕೈಗೊಳ್ಳಿ: ಅಧಿಕಾರಿಗಳಿಗೆ ಗೌರವ್ ಗುಪ್ತಾ ಸೂಚನೆ
ರಾಜ್ಯದಲ್ಲಿ ಈ ಹಿಂದೆ 3,57,909 ರಷ್ಟಿದ್ದ ಸಕ್ರಿಯ ಪ್ರಕರಣಗಳು ಪ್ರಸ್ತುತ 3,28,711ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳು ಶೇ.8.15ರಷ್ಟು ಕುಸಿತವಾಗಿರುವುದು ಕಂಡು ಬಂದಿದೆ. ಇನ್ನು ನಗರದಲ್ಲಿ 2,16,145ರಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 1,89,853ಕ್ಕೆ ತಲುಪಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.12.16ಕ್ಕೆ ಕುಸಿದಿರುವುದು ಕಂಡು ಬಂದಿದೆ.